Home ದೇಶ-ವಿದೇಶ ಕೇಂದ್ರ ವಿತ್ತ ಸಚಿವಾಲಯ : ಮುಂದಿನ ಒಂದು ವರ್ಷ ಯಾವುದೇ ಹೊಸ ಯೋಜನೆಯಿಲ್ಲ!

ಕೇಂದ್ರ ವಿತ್ತ ಸಚಿವಾಲಯ : ಮುಂದಿನ ಒಂದು ವರ್ಷ ಯಾವುದೇ ಹೊಸ ಯೋಜನೆಯಿಲ್ಲ!

ನವದೆಹಲಿ: ಕೋವಿಡ್-19 ಹರಡುವ ಹಿನ್ನೆಲೆ ದೇಶಾದ್ಯಂತ ಲಾಕ್​ಡೌನ್ ಮಾಡಿದ್ದರಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಕೇಂದ್ರದಿಂದ 20 ಲಕ್ಷ ಕೋಟಿ ರೂ ಆರ್ಥಿಕ ಪ್ಯಾಕೇಜನ್ನು ಘೋಷಿಸಲಾಗಿದೆ. ಹಾಗಾಗಿ ಮುಂದಿನ ಒಂದು ವರ್ಷದವರೆಗೆ ಯಾವುದೇ ಆರ್ಥಿಕ ಯೋಜನೆಯನ್ನು ಘೋಷಣೆ ಮಾಡುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವಾಲಯ ತಿಳಿಸಿದೆ.

ಈಗಾಗಲೇ ಪ್ರಧಾನಿ ಗರೀಬ್ ಕಲ್ಯಾಣ ಯೋಜನೆಯಡಿ ಘೋಷಿಸಿರುವ ಯೋಜನೆ ಮತ್ತು ಇತ್ತೀಚೆಗೆ ಪ್ರಕಟಿಸಲಾದ ಆತ್ಮ ನಿರ್ಭರ ಪ್ಯಾಕೇಜ್​ಗಳಿಗೆ ಮಾತ್ರ ಸಾರ್ವನಿಕರ ಹಣ ಬಳಕೆಯಾಗಲಿದೆ. ಇನ್ನು ಈ ಬಾರಿ ದೇಶದ ಆರ್ಥಿಕತೆ ಕುಗಿರುವುದರಿಂದ ಈ ಬಗ್ಗೆ ಇಲಾಖೆಗಳಿಗೂ ಸೂಚನೆ ನೀಡಿದ್ದು, ಹೊಸ ಯೋಜನೆಗಳ ಪ್ರಸ್ತಾವನೆಯನ್ನು ಕಳುಹಿಸಬೇಡಿ ಎಂದು ಸೂಚಿಸಿದೆ. ಅಲ್ಲದೆ ಬಜೆಟ್ ಯೋಜನೆಗಳು, ಹಣಕಾಸು ಸ್ಥಾಯಿ ಸಮಿತಿಯ ಅನುಮೋದನೆಯ ಪಡದಿರುವ ಯೋಜನೆಗಳನ್ನು 2021 ಮಾರ್ಚ್ 31 ರವರೆಗೆ ಅಮಾನತಿನಲ್ಲಿಡಲಾಗುತ್ತಿದೆ ಎಂದು ತಿಳಿಸಿದೆ.

 

LEAVE A REPLY

Please enter your comment!
Please enter your name here

- Advertisment -

Most Popular

ಕೊಲೆ ಆರೋಪಿಗೆ ಕೊರೋನಾ ದೃಢ | ಇನ್ಸ್ ಪೆಕ್ಟರ್ ಸೇರಿ 15 ಪೊಲೀಸರಿಗೆ ಕ್ವಾರಂಟೈನ್

ಹುಬ್ಬಳ್ಳಿ : ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ರಸ್ತೆಯಲ್ಲಿಯೇ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬಂಡಿವಾಡ ಕ್ರಾಸ್ ಬಳಿ ಪತ್ನಿ ಶಾರವ್ವ ಎಂಬಾಕೆಯನ್ನು ಕೊಲೆ ಮಾಡಿದ್ದ....

ಡಿಕೆಶಿವಕುಮಾರ್ ಗೆ ಇಂದು ಪಟ್ಟಾಭಿಷೇಕ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ  ಡಿ.ಕೆ ಶಿವಕುಮಾರ್ ಇಂದು ಪ್ರತಿಜ್ಞೆ ಮಾಡಲಿದ್ದಾರೆ. ಡಿಕೆಶಿ ಪದಗ್ರಹಣಕ್ಕೆ ಎರಡು ಬಾರಿ ಡೇಟ್ ಫಿಕ್ಸ್​ ಆಗಿ ಕ್ಯಾನ್ಸಲ್ ಆಗಿತ್ತು.  ಇಂದು ಅಂತಿಮವಾಗಿ ಕೆಪಿಸಿಸಿ ಕಚೇರಿಯಲ್ಲಿ 11 ಗಂಟೆಗೆ...

ಕಾಡಾನೆಗಳನ್ನು ಸ್ಥಳಾಂತರಿಸಿ ರೈತರ ಬೆಳೆ ಹಾನಿಗೆ ಪರಿಹಾರ ನೀಡಿ: ಜೆಡಿಎಸ್ ರಾಜ್ಯಾಧ್ಯಕ್ಷ

ಹಾಸನ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಯಿಂದ ಅಪಾರ ಜೀವ ಹಾನಿ ಹಾಗೂ ಬೆಳೆ ನಾಶವಾಗುತ್ತಿರುವ ಹಿನ್ನಲೆಯಲ್ಲಿ ಅವುಗಳನ್ನು ಸ್ಥಳಾಂತರಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಲೂರು ಹಾಗೂ ಸಕಲೇಶಪುರ ಕ್ಷೇತ್ರದ...

ನಕಲಿ ತಹಸೀಲ್ದಾರ್ ಮತ್ತು ಬ್ರೋಕರ್ ಎಸಿಬಿ ಬಲೆಗೆ..!

ತುಮಕೂರು : ತಹಶೀಲ್ದಾರ್ ಮೋಹನ್ ಅವರ ಹೆಸರಿನಲ್ಲಿ ರೈತರೊಬ್ಬರಿಂದ 1.20 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದ ಇಬ್ಬರು ಬ್ರೋಕರ್ ಗಳನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ರುದ್ರಸ್ವಾಮಿ ಮತ್ತು ಹರಳೂರು ಗ್ರಾಮದ ಶಿವಕುಮಾರ್...