Thursday, October 6, 2022
Powertv Logo
Homeರಾಜ್ಯಕರ್ನಾಟಕದ ಹಾಟ್​ಸ್ಪಾಟ್​ನಲ್ಲೇ ಕೊರೋನಾಗೆ ಸಂಜೀವಿನಿ..!

ಕರ್ನಾಟಕದ ಹಾಟ್​ಸ್ಪಾಟ್​ನಲ್ಲೇ ಕೊರೋನಾಗೆ ಸಂಜೀವಿನಿ..!

ಮೈಸೂರು: ಮಹಾಮಾರಿ ಕೊರೋನಾಗೆ  ತುತ್ತಾಗುತ್ತಿವವವರ ಸಂಖ್ಯೆ ಒಂದೆಡೆ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಅದರಿಂದ ಪಾರಾಗಲು ಹಲವು ಸಂಸ್ಥೆಗಳು ಔಷಧಿ ತಯಾರಿಸುವಲ್ಲಿ ತೊಡಗಿವೆ. ಇದೀಗ ಕರ್ನಾಟಕದಲ್ಲೂ ಈ ಪ್ರಯತ್ನ ನಡೆದಿದ್ದು, ಕೊರೋನಾ ಹಾಟ್​ಸ್ಪಾಟಾದ ನಂಜನಗೂಡಿನಲ್ಲೇ ಕೋವಿಡ್​ಗೆ ಸಂಜೀವಿನಿ ತಯಾರಾಗಿದೆ.

ನಂಜನಗೂಡಿನಲ್ಲಿ ಕೊರೋನಾಗೆ ಔಷಧಿ ಕಂಡುಹಿಡಿದಿದ್ದು, ರೆಮ್​ಡಿಸಿವರ್ ಇಂಜೆಕ್ಷನ್  ಉತ್ಪಾದನೆಗೆ  ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಹಾಗಾಗಿ ಆ ಇಂಜೆಕ್ಷನ್ ಬೆಲೆಯೂ ಈಗಾಗಲೇ ನಿಗಧಿಪಡಿಸಿದ್ದು, ಒಂದು ಇಂಜೆಕ್ಷನ್ ಬೆಲೆ 7000 ದಷ್ಟು ಆಗಿದೆ. ಕೊರೋನಾ ನಿವಾರಣೆಯಾಗಬೇಕಾದರೆ 5 ಇಂಜೆಕ್ಷನ್​ಗಳ ಕೋರ್ಸ್ ನೀಡಬೇಕು.

ಕೊರೋನಾ ಹಾವಳಿ ಆರಂಭದಲ್ಲಿ ಹಾಟ್​ಸ್ಪಾಟಾದ ಜುಬಿಲಿಯೆಂಟ್ 74ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.  ಇದೀಗ ಅದೇ ಜುಬಿಲಿಯೆಂಟ್,  ಭಾರತವೂ ಸೇರಿ 127 ದೇಶಗಳಲ್ಲಿ ಔಷಧಿ ಮಾರಾಟ ಮಾಡುವ ಸಲುವಾಗಿ ​ ಔಷಧ ಉತ್ಪಾದನೆ ಪರವಾನಗಿಗೆ ಸಹಿ ಹಾಕಿದೆ. ಈ ಒಪ್ಪಂದದ ಬಳಿಕ ಜುಬಿಲಿಯೆಂಟ್ ಷೇರು ಮೌಲ್ಯವು ಹೆಚ್ಚಳವಾಗಿದೆ.

ಅಮೆರಿಕಾದ ಗಿಲ್ಯಾಡ್ ಸೈನ್ಸ್​ನ ಇಂಕ್ ಕಂಪೆನಿಯಿಂದ ಈ ರೆಮ್​ಡಿಸಿವರ್ ಔಷಧಿಯನ್ನು ಉತ್ಪಾದನೆ ಮಾಡಿದ್ದು, ಅಮೆರಿಕಾದಲ್ಲಿ ಮೇ ಆರಂಭದಲ್ಲಿ ರೆಮ್​ಡಿಸಿವರ್ ಇಂಜೆಕ್ಷನ್ ಬಳಕೆ ಯಶಸ್ವಿಯಾಗಿದೆ.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments