Home ರಾಜ್ಯ ಕುಡಿದ ಮತ್ತಿನಲ್ಲಿ ಜಗಳ ಯುವಕರಿಬ್ಬರ ಮೇಲೆ ಮಾರಾಣಾಂತಿಕ ಹಲ್ಲೆ : ಓರ್ವ ಸಾವು

ಕುಡಿದ ಮತ್ತಿನಲ್ಲಿ ಜಗಳ ಯುವಕರಿಬ್ಬರ ಮೇಲೆ ಮಾರಾಣಾಂತಿಕ ಹಲ್ಲೆ : ಓರ್ವ ಸಾವು

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಬೆಳೆದ ಮಾತಿಗೆ ಮಾತು, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.  ನಗರದ ಎನ್.ಟಿ. ರಸ್ತೆಯ ಸುಂದರ ಆಶ್ರಯ ಪಕ್ಕದ ವಿಠಲ ದೇವಾಲಯದ ಬಳಿಯೇ ಈ ಘಟನೆ ನಡೆದಿದ್ದು, ಐದಾರು ಯುವಕರ ತಂಡ ನಡೆಸಿದ ಮಾರಾಣಾಂತಿಕ ಹಲ್ಲೆಯಲ್ಲಿ ಓರ್ವ ಯುವಕನ ಹತ್ಯೆಯಾಗಿದೆ.  ಕೆ.ಆರ್. ಪುರಂ ರಸ್ತೆಯ ಜೀವನ್ (26) ಹಾಗೂ ಕೇಶವ್ ಶೆಟ್ಟಿ (27) ಎಂಬಿಬ್ಬರ ಮೇಲೆಯೇ ಈ  ಹಲ್ಲೆ ನಡೆಸಲಾಗಿದ್ದು, ತೀವ್ರ ಹಲ್ಲೆಗೊಳಗಾದ ಚಾಕುವಿನಿಂದ ಇರಿತಕ್ಕೊಳಗಾದ ಜೀವನ್ ಸಾವು ಕಂಡಿದ್ದಾನೆ.  ಇನ್ನು ಕೇಶವ್ ಶೆಟ್ಟಿಗೆ ಗಂಭೀರ ಗಾಯಗಳಾಗಿದ್ದು, ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಂದ ಹಾಗೆ, ಕುಡಿದಿದ್ದ ಐದಾರು ಯುವಕರ ತಂಡ ಮತ್ತು ಇಬ್ಬರು ಈ ಯುವಕರ ನಡುವೆ, ಮಾತಿಗೆ ಮಾತು ಬೆಳೆದು, ಯುವಕರಿಬ್ಬರ ಮೇಲೆ  ಐದಾರು ಯುವಕರಿದ್ದ ತಂಡ ಮಾರಣಾಂತಿಕ ಹಲ್ಲೆ ನಡೆಸಿದೆ.  ಜಗಳ ತಾರಕಕ್ಕೇರುತ್ತಿದ್ದಂತೆ, ಜೀವನ್ ಮತ್ತು ಕೇಶವ್ ಶೆಟ್ಟಿ ಓಡಲು ಯತ್ನಿಸಿದ್ದಾರೆ.  ಈ ವೇಳೆ ನಡೆಸಿದ ಹಲ್ಲೆಯಲ್ಲಿ ಜೀವನ್ ಸಾವನಪ್ಪಿದ್ದಾನೆ.   ನಿನ್ನೆ ರಾತ್ರಿ ಸುಮಾರು 11.30 ರ ವೇಳೆಗೆ ಈ ಘಟನೆ ನಡೆದಿದ್ದು, ಘಟನೆ ನಡೆಯುತ್ತಿದ್ದಂತೆ, ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಪಿಐ ವಸಂತ್ ಕುಮಾರ್ ಪರಿಶೀಲನೆ ನಡೆಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಶೋಧದಲ್ಲಿ ಪೊಲೀಸರು ತೊಡಗಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

‘ಮನೆ ಮಾಲೀಕನನ್ನು ರಕ್ಷಿಸಿ ಸಾವಿಗೆ ಶರಣಾದ ಶ್ವಾನ’

ವಿಜಯಪುರ: ಶ್ವಾನ ಮನುಷ್ಯನ ಅತಿ ನಿಯತ್ತಿನ ಪ್ರಾಣಿ, ತನ್ನನು ಸಾಕಿದ ಯಜಮಾನನ ಮಾನ ಪ್ರಾಣ ಉಳಿಸಲು ಜೀವವನ್ನೇ ಪಣಕ್ಕಿಟ್ಟಿರುವ ಸಾವಿರಾರು ಪ್ರಕರಣ ದೇಶದಲ್ಲಿ‌ನಡೆದು ಹೋಗಿವೆ. ಅಂತದೇ ಒಂದು ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ...

‘ಅಂಗ ವೈಕಲ್ಯತೆ ಶಾಪವಲ್ಲ,ಹುಟ್ಟಿನಿಂದ ಬರಬಹುದು’ : ಶಶಿಕಲಾ ಜೊಲ್ಲೆ

ಬೆಂಗಳೂರು : ಅಂಗ ವೈಕಲ್ಯತೆ ಶಾಪವಲ್ಲ,ಹುಟ್ಟಿನಿಂದ ಅಥವಾ ಅಪಘಾತದಿಂದಲೂ ಬರಬಹುದು.ಬಂದ ಮೇಲೆ ಕುಗ್ಗದೆ ಧೈರ್ಯವಾಗಿ ಎದುರಿಸಿ ಸಾಧನೆಯ ಮೆಟ್ಟಿಲನ್ನು ಏರಬೇಕಾಗಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಚಿವೆ ಶಶಿಕಲಾ ಜೊಲ್ಲೆ ಎಂದು ಹೇಳಿದರು. ಬೆಂಗಳೂರು...

ಕೋರ್ಟ್ ಆವರಣದಲ್ಲೇ ವಕೀಲನ ಬರ್ಬರ ಹತ್ಯೆ !

ವಿಜಯನಗರ (ಹೊಸಪೇಟೆ) : ಕೋರ್ಟ್ ಆವರಣದಲ್ಲೇ ವಕೀಲನೋರ್ವನ ಬರ್ಬರ ಹತ್ಯೆಯಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಕೋರ್ಟ್ ಆವರಣದಲ್ಲಿ ಘಟನೆ ನಡೆದಿದೆ. ಡಾ. ತಾರಿಹಳ್ಳಿ ವೆಂಕಟೇಶ್ ಎನ್ನುವವರನ್ನ ಮನೋಜ್ ಎಂಬ ಯುವಕ (22) ಮಚ್ಚಿನಿಂದ...

ಬಾಲಕನ ಮೇಲೆ ಪೈಶಾಚಿಕ ಕೃತ್ಯ ಮರ್ಮಾಂಗಕ್ಕೆ ಚಿತ್ರಹಿಂಸೆ ನೀಡಿ ಕಗ್ಗೊಲೆ

ಕಲಬುರಗಿ/ಜೇವರ್ಗಿ : ಅನ್ಯ ಕೋಮಿನ ಯುವತಿಯನ್ನ ಪ್ರೀತಿಸುತ್ತಿದ್ದ 14 ವರ್ಷದ ಬಾಲಕನ ಮರ್ಮಾಂಗಕ್ಕೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ಮಹೇಶ್ ಎಂಬ...

Recent Comments