Home ರಾಜ್ಯ ‘ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ  ಹಿಂಸೆಯಾಗಲಿದೆ’: ನಾಗೇಶ್ ಹೆಗ್ಢೆ

‘ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ  ಹಿಂಸೆಯಾಗಲಿದೆ’: ನಾಗೇಶ್ ಹೆಗ್ಢೆ

ಚಾಮರಾಜನಗರ: ಜಿಲ್ಲೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ  ಹಿಂಸೆಯೇ ಹೊರತು ಬೇರೆನೂ ಉಪಯೋಗವಿಲ್ಲ  ಪರಿಸರವಾದಿ ನಾಗೇಶ್ ಹೆಗ್ಢೆ ಹೇಳಿದ್ದಾರೆ. 

ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ  ಹಿಂಸೆಯಾಗಲಿದೆ ಎಂದು ಖ್ಯಾತ ಪರಿಸರವಾದಿ ನಾಗೇಶ್ ಹೆಗ್ಢೆ ಚಾಮರಾಜನಗರದಲ್ಲಿ  ಅಭಿಪ್ರಾಯಪಟ್ಟರು. ಚಾಮರಾಜನಗರ ಜಿಲ್ಲೆ ಕೆ.ಗುಡಿಯಲ್ಲಿ  ಅರಣ್ಯ ಇಲಾಖೆ ಆಯೋಜಿಸಿದ್ದ ಎರಡು ದಿನಗಳ ಮಾಧ್ಯಮ ಕಾರ್ಯಾಗಾರದ ಬಳಿಕ  ಅವರು ಮಾತನಾಡಿ, ಮುದಿಗೋವುಗಳನ್ನು ರೈತರು ಏನು ಮಾಡಬೇಕು..?, ಅದನ್ನು ಮಾರಲು ಪೊಲೀಸರ ಹತ್ತಿರ ಅಲೆಯಬೇಕಾ‌. ಈ ಕಾಯ್ದೆಯಿಂದ ರೈತರಿಗೆ ಹಿಂಸೆ, ಅನ್ಯಾಯ ಆಗಲಿದೆಯೇ ಹೊರತು ಉಪಯೋಗವಿಲ್ಲ ಎಂದರು.

ಗೋಹತ್ಯೆ ನಿಷೇಧ ಕಾಯ್ದೆಯಿಂದ ಮುದಿ ಹಸುಗಳು ಬಿಡಾಡಿ ದನಗಳಾಗಿ ಉತ್ತರ ಪ್ರದೇಶದಂತೆ ರಸ್ತೆ-ರಸ್ತೆಗಳಲ್ಲಿ ಬಂದು ನಿಲ್ಲುತ್ತವೆ. ಆಹಾರಕ್ಕಾಗಿ ಭಿಕ್ಷುಕರಾಗುತ್ತವೆ ಎಂದು ಅಸಮಾಧಾನ ಹೊರಹಾಕಿದರು.

ಶಾಲಾ ಮಕ್ಕಳಿಗೆ ಬೇಕು ಅರಿವು: ವನ್ಯಜೀವಿಗಳು ಶೇ.2.5 ರಷ್ಟು ಪ್ರದೇಶದಲ್ಲಷ್ಟೇ ಉಳಿದುಕೊಂಡಿವೆ‌. ಉಳಿದ, 97.5 ರಷ್ಟು ಜಾಗದಲ್ಲಿ ಮಾನವನ ಚಟುವಟಿಕೆ ಇದೆ‌. ಆದ್ದರಿಂದ, ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿ ಬದುಕುತ್ತಿರುವ ವನ್ಯ ಜೀವಿಗಳ ರಕ್ಷಣೆ ನಮ್ಮ ಆದ್ಯತೆ ಆಗಬೇಕು. ಈ ಬಗ್ಗೆ ಶಾಲಾ ಮಕ್ಕಳಿಗೆ ಹೆಚ್ಚು ಅರಿವು ಮೂಡಿಸಬೇಕು ಆ ಮೂಲಕ ಅವರ ಪಾಲಕರಿಗೆ ತಲುಪಲಿದೆ ಎಂದರು.

LEAVE A REPLY

Please enter your comment!
Please enter your name here

- Advertisment -

Most Popular

ಕೃಷಿ ಕಾಯ್ದೆಯನ್ನು ರದ್ದು ಮಾಡುವುದಿಲ್ಲ: ನರೇಂದ್ರ ಸಿಂಗ್ ತೋಮರ್

ದೆಹಲಿ: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಒಂದೂವರೆ ತಿಂಗಳಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರೊಟೆಸ್ಟ್ ನಡೆಸುತ್ತಿವೆ. ಇದರ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ದೇಶದ ಹೆಚ್ಚಿನ ರೈತರು...

‘ನಾಳೆ ಸಿಎಂ ಯಡಿಯೂರಪ್ಪ ಉಡುಪಿ ಪ್ರವಾಸ’

ಬೆಂಗಳೂರು: ನಾಳೆ ನಾಡಿದ್ದು ಸಿಎಂ ಬಿಎಸ್ ಯಡಿಯೂರಪ್ಪ ಉಡುಪಿ ಪ್ರವಾಸ ಮಾಡಲಿದ್ದಾರೆ. ನಾಳೆ ಸಂಜೆ ಮಧ್ಯಾಹ್ನ 3 ಗಂಟೆಗೆ ಹೆಚ್ ಎ ಎಲ್ ನಿಂದ ಪ್ರಯಾಣ ಬೆಳೆಸಿ, ಸಂಜೆ 5 ಗಂಟೆಗೆ ಪರ್ಯಾಯ...

‘ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ’

ಬೆಂಗಳೂರು: ವಿರೋಧ ಪಕ್ಷಗಳ ವಿರೋಧದ ನಡುವೆಯೂ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದ್ದು,  ನಾಳೆಯಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ  ಸಂಬಂಧ ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ಈ ವಿಷಯ ಪ್ರಕಟಿಸಿದೆ. ಇನ್ನೂ...

‘ರೈತರ ಹೋರಾಟ ಬೆಂಬಲಿಸಿ ರಾಜಭವನ ಮುತ್ತಿಗೆ ಹಾಕಲು ಕೈ ರಣತಂತ್ರ’​

ಬೆಂಗಳೂರು: ರೈತರ ಹೋರಾಟಕ್ಕೆ ಬೆಂಬಲ ನೀಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನವರಿ 20 ರಂದು ಬೆಂಗಳೂರು ಸ್ತಬ್ಧ ಮಾಡುಲು ಪ್ಲಾನ್ ಮಾಡಿಕೊಂಡಿದೆ. ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನವರಿ 20 ರಂದು...

Recent Comments