Homeದೇಶ-ವಿದೇಶಕೆಂಪುಕೋಟೆ ಹತ್ತಿದವರು ಯಾರು ರೈತರಲ್ಲ : ಶೋಭಾ ಕರಂದ್ಲಾಜೆ

ಕೆಂಪುಕೋಟೆ ಹತ್ತಿದವರು ಯಾರು ರೈತರಲ್ಲ : ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು : ನಿನ್ನೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನ ರೈತರು ವಹಿಸಿಲ್ಲ, ಕೆಂಪು ಕೋಟೆ ಹತ್ತಿದವರು ಯಾರೂ ಕೂಡ ರೈತರಲ್ಲ, ಹೋರಾಟದ ನೇತೃತ್ವವನ್ನ ಉಮ್ಮರ್ ಖಾಲಿದ್ ಬಿಡುಗಡೆ ಮಾಡಿ ಅನ್ನುವಂತಹ ವಿಚಾರವಾದಿಗಳು ಹಾಗೂ ದೇಶದ್ರೋಹಿ ಶಕ್ತಿ ವಹಿಸಿವೆ ಎಂದು ಈ ಹಿಂದೆ ಕೂಡ ಹೇಳಿದ್ವಿ, ಅದು ನಿನ್ನೆ ನಿಜವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಚಿಕ್ಕಮಗಳೂರಲ್ಲಿ ಮಾತಾನಾಡಿದವರು ಅವರು ಗಣರಾಜ್ಯದ ದಿನ ತ್ರಿವರ್ಣ ಧ್ವಜ ಹಾರಿಸಿ ದೇಶದ ಜನರು ಸಂಭ್ರಮ ಪಡುವ ದಿನ, ಆ ದಿನ ಅತ್ಯಂತ ಅಮಾನವೀಯ ಕೆಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ, ಕೆಂಪು ಕೋಟೆಗೆ ನುಗ್ಗಿ ರೈತರು ಕೆಟ್ಟ ಪದ್ಧತಿಯನ್ನ ದೇಶದಲ್ಲಿ ಹಾಕಿ ಕೊಟ್ಟಿದ್ದಾರೆ, ನನ್ನಗೆ ಅನ್ನಿಸಿರೋ ಪ್ರಕಾರ ಕೆಂಪು ಕೋಟೆ ಹತ್ತಿದವರು ಯಾರೂ ಕೂಡ ರೈತರಲ್ಲ ಎಂದರು. ಇನ್ನು ಕೆನಡಾದ ಖಲಿಸ್ತಾನ್ ಮೂವ್ಮೆಂಟ್ನವರು ಈ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ, ಖಲಿಸ್ತಾನ್ ಮೂವ್ಮೆಂಟ್ನಲ್ಲಿ ಸಕ್ರೀಯವಾಗಿದ್ದವರು ಕೆನಾಡದಲ್ಲಿ ಅವಿತುಕೊಂಡಿದ್ದಾರೆ, ಉಮ್ಮರ್ ಖಾಲಿದ್ಗೆ ಬೆಂಬಲ ಕೊಟ್ಟಿದ್ದವರು ಅವರು ಇದಕ್ಕೆ ಬೆಂಬಲ ಕೊಟ್ಟಿದ್ದಾರೆ, ಅಲ್ದೆ ಈಶಾನ್ಯ ರಾಜ್ಯಗಳಲ್ಲಿ ಭಾರತ ವಿರೋಧಿ ಚಟುವಟಿಕೆ ಮಾಡ್ತಿದ್ರು ಅವರು ಪ್ರತಿಭಟನೆಯಲ್ಲಿ ಕೈಜೋಡಿಸಿಕೊಂಡಿದ್ದಾರೆ, ಇನ್ನು ಪಾಕಿಸ್ತಾನ್ ಜಿಂದಾಬಾದ್ ಎಂದವರು ಇದರಲ್ಲಿ ಜೋಡಣೆಯಾಗಿದ್ದಾರೆ, ನಾವು ಆರಂಭದಿಂದಲೂ ಹೇಳಿಕೊಂಡು ಬಂದಿದ್ದು ಇವತ್ತು ಸಾಭೀತಾಗಿದೆ ಎಂದರು.  ನಿಜವಾದ ರೈತರು ಈ ತರ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ ,ರೈತರ ಹೆಸರಲ್ಲಿ ಈ ಮೂವ್ಮೆಂಟ್ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದರು.

ಸಚಿನ್ ಶೆಟ್ಟಿ

LEAVE A REPLY

Please enter your comment!
Please enter your name here

- Advertisment -

Most Popular

Recent Comments