Home ರಾಜ್ಯ ವಿಶ್ವವಿದ್ಯಾಲಯಗಳ ಸಂಶೋಧನೆಯ ಲಾಭ ರೈತರಿಗೆ ದೊರೆಯಬೇಕು : ಬಿ.ಎಸ್. ಯಡಿಯೂರಪ್ಪ

ವಿಶ್ವವಿದ್ಯಾಲಯಗಳ ಸಂಶೋಧನೆಯ ಲಾಭ ರೈತರಿಗೆ ದೊರೆಯಬೇಕು : ಬಿ.ಎಸ್. ಯಡಿಯೂರಪ್ಪ

ಶಿವಮೊಗ್ಗ: ರೈತರ ಬದುಕು ಹಸನಾಗಲು, ಕೃಷಿ ವಿ.ವಿ. ಗಳ ಸಂಶೋಧನೆಗಳ ಲಾಭ ರೈತರಿಗೆ ದೊರೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.  ಇಂದು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಸಹ್ಯಾದ್ರಿ ನೋನಿ ಚಹಾದ ತಂತ್ರಜ್ಞಾನ ವರ್ಗಾವಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯವಾಗಿ ದೊರಕುವ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಸ್ಥಳೀಯ ಯುವ ಉದ್ಯಮಿಗಳ ಏಳಿಗೆ ಸಾಧ್ಯ. ಇದರಿಂದ ಸ್ಥಳೀಯ ಉದ್ಯೋಗ ಸೃಷ್ಟಿಗೂ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಕೃಷಿ ಆಧಾರಿತ ಉದ್ಯಮಗಳ ಸ್ಥಾಪನೆಗೆ ನಮ್ಮ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದು ಹೇಳಿದರು.  ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಸ್ಥಳೀಯವಾಗಿ ಆದಾಗ ಮಾತ್ರ ರೈತರಿಗೆ ಹೆಚ್ಚಿನ ಲಾಭ ದೊರೆಯುವುದು. ಇಂತಹ ಸಂಸ್ಕರಣೆಯ ಉದ್ದಿಮೆಗಳು ಹೆಚ್ಚಾದರೆ ಮಾತ್ರ ಕೃಷಿ ಲಾಭದಾಯಕವಾಗಲಿದೆ. ಸರ್ಕಾರ ಈ ಹಿನ್ನೆಲೆಯಲ್ಲಿ ಎಲ್ಲಾ ನೆರವು ನೀಡಲಿದೆ. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಿರುವ ನವೋದ್ಯಮ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಜಿಲ್ಲೆಯ 10 ನವೋದ್ಯಮಿಗಳಿಗೆ ಕೇಂದ್ರ ಸರ್ಕಾರದ ಅನುದಾನ ದೊರೆಯಲು ನೆರವಾಗಿದೆ ಎಂದು ಹೇಳಿದರು.

ಇನ್ನು ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಕೆ, ಅಡಿಕೆ ಹಾಳೆಯನ್ನು ಚರ್ಮದಂತೆ ಪರಿವರ್ತಿಸಿ ಉತ್ಪನ್ನ ತಯಾರಿಕೆ, ಅಂಗಾಂಶ ಕೃಷಿಯಲ್ಲಿ ಬಾಳೆ ಉತ್ಪಾದನೆ, ಮಲೆನಾಡಿನ ವಿಶೇಷ ಹಣ್ಣುಗಳಿಂದ ಆರೋಗ್ಯ ಪೂರ್ಣ ವೈನ್ ತಯಾರಿಕೆಯಂತಹ ಯೋಜನೆಗಳಿಂದ ವಿಶ್ವವಿದ್ಯಾಲಯ ನವೋದ್ಯಮಿಗಳಿಗೆ ನೆರವಾಗುತ್ತಿರುವುದು ಶ್ಲಾಘನೀಯವಾಗಿದೆ.  ಇದೀಗ ನೋನಿ ಅಥವಾ ಇಂಡಿಯನ್ ಮಲ್ಬರಿ ಹಣ್ಣಿನಿಂದ ತಯಾರಿಸಿರುವ ನೋನಿ ಚಹಾ ವಿಶಿಷ್ಟ ಉತ್ಪನ್ನವಾಗಿದ್ದು, ಇದರಿಂದ ಈ ಭಾಗದಲ್ಲಿ ನೋನಿ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೋವಿಡ್ ಹಿನ್ನೆಯಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ, ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.  ಕೃಷಿ ಬಜೆಟ್ ನ ಪೂರ್ವಭಾವಿ ಸಭೆಯನ್ನು ಇತ್ತೀಚೆಗಷ್ಟೇ ಸಿ.ಎಂ. ಜೊತೆ ನಡೆಸಿದ್ದೆವೆ.  ಕೃಷಿಕನಿಗೆ ಯಾವುದೇ ತೊಂದರೆಯಾಗದಂತೆ, ಬಜೆಟ್ ಮಂಡಿಸಲಾಗುವುದು.  ಬಜೆಟ್ ನಲ್ಲಿ ಕೃಷಿವಲಯಕ್ಕೆ ಯಾವುದೇ ಅನುದಾನದ ಕೊರತೆಯಾಗದಂತೆ ಮಾಡಲಾಗುವುದು.  ಈ ಬಗ್ಗೆ ಸಿ.ಎಂ. ಅವರ ಜೊತೆ ಚರ್ಚಿಸಲಾಗಿದೆ.  ಕೃಷಿ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸೇರಿದಂತೆ, ಕೃಷಿ ವಲಯಕ್ಕೆ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚು ಒತ್ತು ನೀಡಲು ಸಿ.ಎಂ. ತೀರ್ಮಾನಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ , ವ್ಯಾಲ್ಯೂ ಪ್ರಾಡಕ್ಟ್ ಪ್ರೈ. ಲಿ. ನ ವ್ಯವಸ್ಥಾಪಕ ನಿರ್ದೇಶಕ ಡಾ| ಶ್ರೀನಿವಾಸ್ ಮೂರ್ತಿ, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ನಾಯಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

- Advertisment -

Most Popular

‘ಡಿಜಿಟಲ್‌ ಮೀಡಿಯಾಗೆ ಹೊಸ ಗೈಡ್‌ಲೈನ್ಸ್ ‘

ಬೆಂಗಳೂರು: ಸೋಶಿಯಲ್ ಮೀಡಿಯಾಗಳಿಗೆ ಮೇಲೆ ಕೇಂದ್ರ ಸರ್ಕಾರ ಮೂಗುದಾರ ಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗಳು ಹೆಚ್ಚಾಗುತ್ತಿವೆ. ನಿಂಧನೆ ಮಾಡುವಂತಹ ಪೋಸ್ಟ್ ಗಳನ್ನು ನಿರ್ಬಂಧಿಸಬೇಕು ಎಂದು ಕೇಂದ್ರ ಸರ್ಕಾರ ಸೋಶಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾಗೆ...

ನನ್ನ ಸೋಲು ಲಿಂಗಾಯತ ಸುಮುದಾಯಕ್ಕೆ ಹಿನ್ನಡೆ: ಸುನಂದಾ

ಮೈಸೂರು: ಮೈಸೂರು ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಸೋತ ಹಿನ್ನೆಲೆಯಲ್ಲಿ‌ ಬಿಜೆಪಿ ಅಭ್ಯರ್ಥಿ ಸುನಂದ ಪಾಲನೇತ್ರ ಕಣ್ಣೀರು ಹಾಕಿದ್ದಾರೆ. ನನ್ನ ಸೋಲು ಲಿಂಗಾಯತ ಸುಮುದಾಯಕ್ಕೆ ಹಿನ್ನೆಡೆಯಾಗಿದೆ. ನಾನು ಮೇಯರ್ ಆಗುತ್ತೇನೆ ಅಂತ ತುಂಬಾ‌ ನಿರೀಕ್ಷೆ ಇಟ್ಟುಕೊಂಡಿದ್ದೆ....

‘ಗ್ರಾಮಸ್ಥರ ಕೆರೆ ನಿರ್ಮಾಣಕ್ಕೆ ನಿನಾಸಂ ಸತೀಶ್ ಮೆಚ್ಚುಗೆ’

ಶಿವಮೊಗ್ಗ: ಗ್ರಾಮದ ಜನರೇ ಸೇರಿಕೊಂಡು, ಗ್ರಾಮದ ಕೆರೆಗಳನ್ನು ಅಭಿವೃದ್ಧಿಗೊಳಿಸಿದ ಮುತ್ತಲ ಗ್ರಾಮಕ್ಕೆ ನಟ ನೀನಾಸಂ ಸತೀಶ್ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮುತ್ತಲ ಗ್ರಾಮದಲ್ಲಿ ಎರಡು ಕೆರೆಗಳನ್ನು...

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು ಬುದ್ಧಿ ಬಂದಿಲ್ಲ: ಈಶ್ವರಪ್ಪ

ವಿಜಯಪುರ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು ಬುದ್ಧಿ ಬಂದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯಪುರದಲ್ಲಿ ಗ್ರಾಮೀಣಾಬಿವೃದ್ಧಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಹೋದಲೆಲ್ಲಾ ಮುಂದಿನ ಸಿಎಂ ನಾನೇ ಅಂತಾ ಹೇಳ್ತಾರೆ. ಸಿದ್ದರಾಮಯ್ಯ ಹಗಲು-ರಾತ್ರಿ...

Recent Comments