ರೈತ ಪ್ರತಿಭಟನೆ: ಪ್ರಮುಖ ಹೆದ್ದಾರಿಗಳು ನಾಳೆ ಬಂದ್..!

0
175

ಬೆಂಗಳೂರು: ನಾಳೆ ರಸ್ತೆಗೆ ಇಳಿಯುವ ಮುನ್ನ ಜನ ಎಚ್ಚರಿಕೆ ವಹಿಸಬೇಕಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಾಳೆ ಬಂದ್ ಬಿಸಿ ತಟ್ಟಲಿದೆ. ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯದ ರೈತ ಸಂಘ , ಹಸಿರು ಸೇನೆ ಸೇರಿ ಹಲವು ರೈತರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.

ರಾಜ್ಯದ 8 ಕಡೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರೈತರು ಹೋರಾಟ ನಡೆಸಲಿದ್ದು, ಸರ್ಕಾರ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಬದಲಾವಣೆ ಖಂಡಿಸಿ ಬಂದ್ ನಡೆಯಲಿದೆ. ಬೊಮ್ಮಸಂದ್ರ, ದೇವನಹಳ್ಳಿ ಟೋಲ್ ಎಂಟ್ರೆನ್ಸ್‌, ಚಿಕ್ಕಬಳ್ಳಾಪುರ ಟೋಲ್ ಎಂಟ್ರೆನ್ಸ್, ತುಮಕೂರು, ಕೋಲಾರ, ಚಿತ್ರದುರ್ಗ, ಅನೇಕಲ್, ಹಾವೇರಿ ಬಳಿ ಹೈವೇಯಲ್ಲಿ ಪ್ರತಿಭಟನೆ ನಡೆಯಲಿದ್ದು, ಈ ಭಾಗದಲ್ಲಿ ಸಂಚರಿಸುವವರಿಗೆ ಬಂದ್ ಬಿಸಿ ತಟ್ಟುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here