Home ರಾಜ್ಯ ಬೆಳಗಾವಿ ಬೆಳೆಗಲ್ಲ, ಕುಡಿಯೋಕೆ ನೀರ್​ ಕೊಡಿ ಅಂದ್ರೂ ಕ್ಯಾರೇ ಅಂತಿಲ್ಲ ಅಧಿಕಾರಿಗಳು..!

ಬೆಳೆಗಲ್ಲ, ಕುಡಿಯೋಕೆ ನೀರ್​ ಕೊಡಿ ಅಂದ್ರೂ ಕ್ಯಾರೇ ಅಂತಿಲ್ಲ ಅಧಿಕಾರಿಗಳು..!

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಡೊಣವಾಡ ಮತ್ತು ಕರಗಾಂವ್ ಗ್ರಾಮದಲ್ಲಿ ಕುಡಿಯೋಕೆ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ. ಬೆಳೆಗಲ್ಲ, ಕುಡಿಯೋಕೆ ನೀರ್​ ಕೊಡಿ ಅಂದ್ರೂ ಅಧಿಕಾರಿಗಳು ಮಾತ್ರ ಅಗತ್ಯ ಕ್ರಮ ಕೈಗೊಳ್ತಿಲ್ಲ. ಕಾಲುವೆ ಸ್ವಚ್ಛಗೊಳಿಸಿ ಅಂತ ಅಧಿಕಾರಿಗಳಿಗೆ ಮನವಿ ಮಾಡಿ ಬೇಸತ್ತ ರೈತರು ತಾವೇ ಹಣ ಸೇರಿಸಿ ಕಾಲುವೆ ಸ್ವಚ್ಛತೆಗೆ ಮುಂದಾಗಿದ್ದಾರೆ. ಹಲವು ವರ್ಷಗಳಿಂದ ಕಾಲುವೆ ಸ್ವಚ್ಛ ಮಾಡಿ ಅಂತ ರೈತರು ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಇದ್ಯಾವುದನ್ನೂ ಕ್ಯಾರೇ ಅನ್ನದ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದಾರೆ. ಜನಪ್ರತಿನಿಧಿಗಳು ಕಾಲುವೆ ಸ್ವಚ್ಛತೆಯ ಭರವಸೆ ನೀಡಿ ಮತ ಪಡೆದು ಮತ್ತೆ ಆ ಕಡೆ ತಲೆ ಹಾಕೋದೇ ಇಲ್ಲ. ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಬೇಸತ್ತ ಜನ ಕಾಲುವೆ ಸ್ವಚ್ಛತೆಗೆ ತಾವೇ ಟೊಂಕ ಕಟ್ಟಿ ನಿಂತಿದ್ದಾರೆ.

ಕಾನಲ್​ ಸ್ವಚ್ಛ ಮಾಡಿ ನೀರು ಬಿಡಿ ಅಂತ ಎಷ್ಟೇ ಮನವಿ ಮಾಡಿದ್ರೂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಹೀಗಾಗಿ ಜನರೇ ಹಣ ಸಂಗ್ರಹಿ ತಾವೇ ಸಲಿಕೆ ಹಿಡಿದು ಕೆನಾಲ್ ಸ್ವಚ್ಛ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಡೊಣವಾಡ ಮತ್ತು ಕರಗಾಂವ್ ಗ್ರಾಮದಲ್ಲಿ ರೈತರು ಸ್ವಂತ 35 ಸಾವಿರ ದುಡ್ಡು ಸೇರಿಸಿ ಕಾಲುವೆ ಸ್ವಚ್ಛಮಾಡುತ್ತಿದ್ದಾರೆ. ಅಧಿಕಾರಿಗಳು ಮಾಡಬೇಕಿದ್ದ ಕೆಲಸವನ್ನು ರೈತರೇ ಮಾಡಿದರೂ ನೀರು ಮಾತ್ರ ಸರಿಯಾಗಿ ಬರುತ್ತಿಲ್ಲ. ಹುಕ್ಕೇರಿ ಮತ್ತು ರಾಯಭಾಗ ಮತಕ್ಷೇತ್ರ ಸದ್ಯಇವೆರಡೂ ಕ್ಷೇತ್ರಗಳು ಸಹ ಬಿಜೆಪಿ ಶಾಸಕರೇ ಪ್ರತಿನಿಧಿಸುತ್ತಿರುವ ಕ್ಷೇತ್ರಗಳು. ಘಟಪ್ರಭಾ ನದಿಯಿಂದ ಕೊಟಬಾಗಿ ಏತ ನೀರಾವರಿ ಮಾಡಿ ಎರಡು ಮತ ಕ್ಷೇತ್ರದ ರೈತರಿಗೆ ನೀರುಣಿಸುವ ಕೆಲಸವೇನೋ ಆಗ್ತಿದೆ. ಆದರೆ ಅಧಿಕಾರಿಗಳ ಬೇಜವಾದ್ದಾರಿತನದಿಂದ ರೈತರ ನೀರನ್ನು ಬೇರೆ ಕೆಲವು ರೈತರು ನಿರಂತರವಾಗಿ ಕದಿಯುತ್ತಲೇ ಇದ್ದಾರೆ.

ಹುಕ್ಕೇರಿ ಮತಕ್ಷೇತ್ರದಿಂದಲೇ ರಾಯಭಾಗ ಮತಕ್ಷೇತ್ರಕ್ಕೆ ಕಾಲುವೆ ಮುಖಾಂತರ ನೀರು ಬರಬೇಕು. ಹುಕ್ಕೇರಿ ಮತಕ್ಷೇತ್ರದ ಕೊಟಬಾಗಿ ಏತನೀರಾವರಿ ಯೋಜನೆಯ ಮೂಲಕವೇ ಬರಬೇಕಾಗಿರುವುದರಿಂದ ಕಾಲುವೆಗೆ ಅಲ್ಲಲ್ಲಿ ಪೈಪ್​​ಲೈನ್​​ ಅಳವಡಿಸಿಕೊಂಡು ರೈತರು ತಮ್ಮ ಬಾವಿಗಳಿಗೆ ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ನೂರು ಬಾರಿ ದೂರು ನೀಡಿದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಸ್ವಾಮೀ ನಾವು ಬೆಳೆಗಾಗಿ ಅಲ್ಲ, ಕುಡಿಯುವ ನೀರು ಕೇಳ್ತಿದ್ದೀವಿ ಅಂದ್ರು ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲ ಅನ್ನೋ ತರ ಕೂತಿದ್ದಾರೆ.  ಕಾಲುವೆಗೆ ನೀರು ಬಂದರೆ ಬಾವಿ ಬೋರ್ವೆಲ್​ಗಳು ರಿಚಾರ್ಜ್ ಆಗುತ್ತವೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ.

ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ವಿಷ ಕುಡಿದು ಆತ್ಮಹತ್ಯೆಮಾಡಿಕೊಳ್ಳಬೇಕಾಗುತ್ತೆ ಅಂತ ರೈತರು ಹೆದರಿಸಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳು ಮಾಡುತ್ತಿರುವ ತಪ್ಪಿನಿಂದ ಅನ್ನದಾತರು ನೀರಿಲ್ಲದೆ ಕೊರಗುತ್ತಿದ್ದಾರೆ. ಅಧಿಕಾರಿಗಳು ಅನಧಿಕೃತವಾಗಿ ನೀರು ಕದಿಯುತ್ತಿರುವ ರೈತರ ಮೇಲೆ ಕ್ರಮ ಕೈಗೊಂಡು  ರಾಜಕೀಯ ಒತ್ತಡಕ್ಕೆ ಮಣಿಯದೆ ಎರಡು ಮತಕ್ಷೇತ್ರದ ಜನರಿಗೆ ಸರಿಯಾಗಿ ನೀರು ಹಂಚಿಕೆ ಆಗುವಂತೆ ನೋಡಿಕೊಳ್ಳಬೇಕಿದೆ.

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments