Homeದೇಶ-ವಿದೇಶಕೃಷಿ ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗಲ್ಲ: ನರೇಂದ್ರ ಮೋದಿ

ಕೃಷಿ ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗಲ್ಲ: ನರೇಂದ್ರ ಮೋದಿ

ಬೆಂಗಳೂರು: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಅನ್ನದಾತರು ನಡೆಸುತ್ತಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹೋರಾಟವನ್ನ ಹತ್ತಿಕಲು ಗಡಿಯಲ್ಲಿ ಸರ್ಕಾರ ಸಾಕಷ್ಟು ಬಂದೋಬಸ್ತ್​ ಮಾಡಿದೆ. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಈಗ ತೆರವುಗೊಳಿಸಲಾಗಿದೆ. ಇಷ್ಟಲ್ಲದೇ ಕೃಷಿ ಕಾಯ್ದೆ ಕುರಿತು ವಿಡಿಯೋ ಕಾನ್ಪರೆನ್ಸ್​ನಲ್ಲಿ​​ ಪ್ರಧಾನಿ ಅಭಯ ನೀಡಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಅನ್ನದಾತರ ಹೋರಾಟ 71ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಸಂಧಾನ ಮಾತುಕತೆ ಮೂಲಕ ಪರಿಹರಿಸಿಕೊಳ್ಳೊಣ ಹೇಳುತ್ತಲೇ ಇದೆ. ಆದರೆ ಕಾಯ್ದೆ ಕಿತ್ತೊಗೆಯುವಂತೆ  ರೈತರು ಪಟ್ಟು ಹಿಡಿದ್ದು, ಫೆ.6 ಕ್ಕೆ ರಾಷ್ಟ್ರ ರಾಜಧಾನಿಯ ಹೆದ್ದಾರಿ ಬಂದ್​​ಗೆ ಕರೆ ನೀಡಿದ್ದಾರೆ. ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು. ಇದು ಮೋದಿ ಸರ್ಕಾರಕ್ಕೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ದೆಹಲಿ ಹೋರಾಟ ಹತ್ತಿಕಲು ಸರ್ಕಾರ ಸಾಕಷ್ಟು ಕಸರತ್ತು ನಡೆಸಿತ್ತು. ದೆಹಲಿ ಗಡಿಯಲ್ಲಿ ಟ್ರ್ಯಾಕ್ಟರ್​ ಆಗಮಿಸದಂತೆ ರಸ್ತೆಯಲ್ಲಿ ಮೊಳೆ, ಸಿಮೆಂಟ್ ಬ್ಯಾರಿಕೇಡ್​​, ಮುಳ್ಳಿನ ತಂತಿ ಹಾಕಿ ಭದ್ರಕೋಟೆಯನ್ನ ನಿರ್ಮಿಸಲಾಗಿತ್ತು. ಆದರೆ ದೆಹಲಿ ಪೊಲೀಸರ ಈ ಕ್ರಮಕ್ಕೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ.

ರೈರಿಗೆ ಬೇಡವಾದ ಕಾಯ್ದೆಯನ್ನ ಹಿಂಪಡೆಯೋಕೆ ಸರ್ಕಾರ ಮೊಂಡುತನ ತೋರುತ್ತಿದೆ ಅಂತಾ ವಿಪಕ್ಷಗಳು ಆರೋಪಿಸುತ್ತಿವೆ. ಈ ಕುರಿತು ಚೌರಿಚೌರ ಶತಮಾನೋತ್ಸವದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಯಾವುದೇ ಕಾರಣಕ್ಕೂ ಅನ್ನದಾತರಿಗೆ ಅನ್ಯಾಯವಾಗಲು ಬಿಡಲ್ಲ. ಹೊಸ ಕೃಷಿ ಕಾಯ್ದೆಗಳು ರೈತರ ಪರವಾಗಿವೆ. ಕಾಯ್ದೆಗಳಿಂದ ಯಾವುದೇ ತೊಂದರೆಯಾಗುವುದಿಲ್ಲ. ದೇಶದಲ್ಲಿ ಎಪಿಎಂಸಿಗಳನ್ನು ಬಲಪಡಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನ ರೂಪಿಸಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

- Advertisment -

Most Popular

Recent Comments