Home ರಾಜ್ಯ ‘ಸಿಎಂ ಸ್ವಕ್ಷೇತ್ರದಲ್ಲಿ ರೈತ ಆತ್ಮಹತ್ಯೆ’

‘ಸಿಎಂ ಸ್ವಕ್ಷೇತ್ರದಲ್ಲಿ ರೈತ ಆತ್ಮಹತ್ಯೆ’

ಶಿವಮೊಗ್ಗ: ಸಿ.ಎಂ. ಬಿ.ಎಸ್. ಯಡಿಯೂರಪ್ಪ ಸ್ವಕ್ಷೇತ್ರದಲ್ಲಿ  ಸಾಲದ ಬಾಧೆಗೆ ಸಿಲುಕಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 

ಶಿಕಾರಿಪುರ ತಾಲ್ಲೂಕಿನ ಮಟ್ಟಿಕೋಟೆ ಗ್ರಾಮದಲ್ಲಿ, ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಅಶೋಕಪ್ಪ (41) ರೈತನೇ, ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾನೆ. ಈತ ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶುಂಠಿ ಬೆಲೆ ಕಡಿಮೆಯಾದ ಹಿನ್ನೆಲೆ, ಜೊತೆಗೆ ಬೆಳೆದಿದ್ದ ಬಾಳೆ ಬೆಳೆ ನಷ್ಟ ಹಾಗೂ 4 ಎಕರೆ ಜಮೀನನ್ನು ಮಾರಿದ್ದ ಹಿನ್ನೆಲೆಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಶೋಕಪ್ಪ, ಅರ್ಧ ಎಕರೆಯಲ್ಲಿ ಸಾಗುವಳಿ ಮಾಡುತ್ತಿದ್ದು, ಶಿಕಾರಿಪುರದ ಅರ್ಬನ್ ಬ್ಯಾಂಕಿನಲ್ಲಿ 8 ಲಕ್ಷ, ಸ್ಥಳೀಯ ಶಿವ ಸಹಕಾರಿ ಬ್ಯಾಂಕಿನಿಂದ 2 ಲಕ್ಷ ಹಾಗೂ ಕೈ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.  ಸಾಲಕ್ಕೆ ಬಡ್ಡಿ ಕಟ್ಟಲಾಗದ ದುಃಸ್ಥಿತಿಯಲ್ಲಿದ್ದ ಈತ  ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿ ಹಾಗೂ 2 ಮಕ್ಕಳನ್ನು ಬಿಟ್ಟು ರೈತ ಆಗಲಿದ್ದು, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

‘ಗದಗನಲ್ಲಿ ಕಾಲೇಜ್ ಓಪನ್ ರೂಲ್ಸ್ ಬ್ರೇಕ್’

ಗದಗ: 10 ತಿಂಗಳ ನಂತರ ರಾಜ್ಯದಲ್ಲಿ ಪದವಿ ಕಾಲೇಜುಗಳು ಸಂಪೂರ್ಣ ಆರಂಭವಾಗಿವೆ. ಆದರೆ ಗದಗ ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸರ್ಕಾರದ ಕೊರೋನಾ ರೂಲ್ಸ್ ಗಳು ಪಾಲನೆ ಆಗುತ್ತಿಲ್ಲ. ಚಿಕ್ಕ...

‘ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆ’

ಗದಗ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಗದಗ ಜಿಲ್ಲೆಯಲ್ಲಿ ಕೂಡ ನಿಧಿ ಸಂಗ್ರಹಣೆ ಕಾರ್ಯ ನಡೆಯಿತು. ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆಗೆ ಮುಂದಾಗಿದ್ದಾರೆ. ನಗರದ ಜೋಡು ಮಾರುತೇಶ್ವರ ದೇವಸ್ಥಾನದಲ್ಲಿ...

ಸಿಎಂ ಅವರ ಸಿಡಿ ಇದ್ರೆ ಕೊಡಿ, ಸುಮ್ನೆ ಹೆದರಿಸುವದು ಏಕೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ರಾಜಕಾರಣದಲ್ಲಿ ಆಸೆ ಇರುವದು ತಪ್ಪಲ್ಲ. ಆದರೆ ಬಹಿರಂಗ ಹೇಳಿಕೆ ನೀಡುವದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಶಾಸಕ ಅಸಮಾಧಾನವನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ಆದರೆ...

‘ಹುಬ್ಬಳ್ಳಿ ಚನ್ನಮ್ಮ ವೃತ್ತದ ಮೇಲು ರಸ್ತೆ ನಿರ್ಮಾಣ ಶಿಲಾನ್ಯಾಸ’

ಹುಬ್ಬಳ್ಳಿ: 298 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 63, 218 ಹಾಗೂ 4 ನ್ನು ಸಂಪರ್ಕಿಸುವ 3.6 ಕೀ.ಮೀ ಉದ್ದದ ಚೆನ್ನಮ್ಮ ವೃತ್ತದ ಮೇಲು ರಸ್ತೆ, 25 ಕೋಟಿ ವೆಚ್ಚದಲ್ಲಿ ಕಲಘಟಗಿ ರಾಷ್ಟ್ರೀಯ...

Recent Comments