ದರ್ಶನ್​ ಮನೆಗೆ ರಾಶಿ ರಾಶಿ ಅಕ್ಕಿ ಮೂಟೆ..!

0
252

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಇನ್ನೆರಡು ದಿನ ಬಾಕಿ ಇದೆ. ಫೆಬ್ರವರಿ 16ರಂದು ಸ್ಯಾಂಡಲ್​ವುಡ್ ಸಾರಥಿ ಡಿ.ಬಾಸ್​ಗೆ ಬರ್ತ್​ಡೇ ಸಂಭ್ರಮ.  ದರ್ಶನ್ ಬರ್ತ್​ಡೇ ಅಂದ್ರೆ ಅವರ ಫ್ಯಾನ್ಸ್​ಗೆ ಹಬ್ಬ. ಪ್ರತಿವರ್ಷ ದೂರ ದೂರದಿಂದ ಅಭಿಮಾನಿಗಳು ಬಂದು ದರ್ಶನ್​ಗೆ ವಿಶ್ ಮಾಡಿ, ಕೇಕ್​ ಕತ್ತರಿಸಿ ಸಂಭ್ರಮಿಸುತ್ತಾರೆ. ಆದರೆ, ಈ ವರ್ಷ ದರ್ಶನ್  ಅದ್ಧೂರಿ ಹುಟ್ಟುಹಬ್ಬ ಬೇಡ ಅಂತ ಡಿಸೈಡ್ ಮಾಡಿರೋದ್ರಿಂದ ಫ್ಯಾನ್ಸ್ ವಿಭಿನ್ನವಾಗಿ ಮತ್ತು ಅರ್ಥಗರ್ಭಿತವಾಗಿ ಬರ್ತ್​ಡೇ ಸೆಲಬ್ರೇಟ್ ಮಾಡ್ತಿದ್ದಾರೆ.

ರೆಬಲ್​ ಸ್ಟಾರ್ ಅಂಬರೀಶ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ದರ್ಶನ್ ಬರ್ತ್​ಡೇ ಸಿಂಪಲ್ಲಾಗಿ ಆಚರಿಸಿಕೊಳ್ಳೋಕೆ ಮನಸ್ಸು ಮಾಡಿದ್ದಾರೆ. ಜೊತೆಗೆ  ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ದಾಸೋಹಕ್ಕೂ ತನ್ನ ಕೈಲಾದ ಮಟ್ಟಿನ ದಾನ ಮಾಡಲು ಮುಂದಾಗಿದ್ದಾರೆ. ನೆಚ್ಚಿನ ನಟನ ನಡೆಯನ್ನು ಮೆಚ್ಚಿಕೊಂಡಿರೋ ಫ್ಯಾನ್ಸ್ ಅವರ ದಾರಿಯಲ್ಲೇ ಸಾಗಿದ್ದಾರೆ.

ಕೇಕ್ ತರುವ ಬದಲು ಅಕ್ಕಿ, ಬೇಳೆ ಸೇರಿದಂತೆ ದಿನಸಿ, ಅಗತ್ಯ ಸಾಮಗ್ರಿಗಳನ್ನು ದರ್ಶನ್ ಅವರ ಮನೆಗೆ ತರುತ್ತಿದ್ದಾರೆ. ಈ ಸಾಮಗ್ರಿಗಳನ್ನು ದರ್ಶನ್ ಶ್ರೀ ಸಿದ್ಧಗಂಗಾ ಮಠ ಮತ್ತು ಅನಾಥಾಶ್ರಮಗಳಿಗೆ ತಲುಪಿಸಲಿದ್ದಾರೆ.

LEAVE A REPLY

Please enter your comment!
Please enter your name here