ಸೆಲೆಬ್ರಿಟಿ ಆಗಿದ್ದೇ ತಡ `ಡೋಂಟ್​ ಟಚ್​ ಮಿ’ ಅಂತಾರೆ..!

0
2737

ಪಶ್ಚಿಮ ಬಂಗಾಳ : ಎಷ್ಟೇ ಎತ್ತರಕ್ಕೆ ಬೆಳೆದ್ರೂ ನಡೆದು ಬಂದ ಹಾದಿಯನ್ನು ಮರೆಯ ಬಾರ್ದು. ಟೈಮ್ ಅನ್ನೋದು ಎಲ್ಲವನ್ನೂ, ಎಲ್ಲರನ್ನೂ ಬದಲಾಯಿಸಿ ಬಿಡುತ್ತೆ. ಕೆಲವರು ಹಂತ ಹಂತವಾಗಿ ಬೆಳೀತಾ ಹೋದಂತೆ. ಯಶಸ್ಸಿನ ಮೆಟ್ಟಿಲುಗಳನ್ನೇರಿ ಪಾಪ್ಯುಲರ್ ಆಗುತ್ತಿದ್ದಂತೆ ಹಿಂದಿನ ಕಷ್ಟದ ದಿನಗಳು, ತಾನು ಸವೆಸಿದ ಹಾದಿಯನ್ನು ಕಂಪ್ಲೀಟ್ ಮರೆತೇ ಬಿಡುತ್ತಾರೆ!
ಈಗ ಇಂತಹವರ ಸಾಲಿಗೆ ಇಂಟರ್​ನೆಟ್ ಸ್ಟಾರ್, ಗಾಯಕಿ ರಾನು ಮೊಂಡಲ್ ಸೇರಿದ್ದಾರೆ. ಕೆಲ ದಿನಗಳ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಾ ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಈಗ ಬಾಲಿವುಡ್​ನ ಸ್ಟಾರ್ ಸಿಂಗರ್. ಸ್ಟಾರ್ ಗಾಯಕಿ ಆಗುತ್ತಿದ್ದ ರಾನು ಬದಲಾಗಿಬಿಟ್ಟಿದ್ದಾರೆ ಎಂದು ಟೀಕೆಗಳು ಕೇಳಿ ಬರ್ತಾ ಇವೆ. ಅದಕ್ಕೆ ಕಾರಣ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ.
ರಾನು ಮಾಲೊಂದರಲ್ಲಿರುವಾಗ ಅಭಿಮಾನಿಯೊಬ್ಬರು ಕೈ ಮುಟ್ಟಿ ಸೆಲ್ಫಿಗಾಗಿ ಕೇಳಿಕೊಂಡಿದ್ದಾರೆ. ಆಗ ಸಿಟ್ಟಾದ ರಾನು ಇದೇನು? ಯಾಕೆ ಮುಟ್ಟೋದು? ಡೋಂಟ್ ಟಚ್ ಮಿ ಅಂದಿರೋದು ವಿಡಿಯೋದಲ್ಲಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಾನು ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here