ಸಿನಿಮಾಗಳ ಬೈಕ್ ವಿನ್ಯಾಸಕ ಇನ್ನು ನೆನಪು ಮಾತ್ರ

0
452

ಬೆಂಗಳೂರು: ಸಿನಿಮಾಗಳಿಗೆ ವಿಶೇಷ ಹಾಗೂ ಆಕರ್ಷಣೀಯ ಬೈಕ್​​ಗಳ ವಿನ್ಯಾಸ ಮಾಡಿಕೊಡುತ್ತಿದ್ದ ಹೆಸರಾಂತ ಬೈಕ್ ವಿನ್ಯಾಸಕ ದಿಲೀಪ್ ರಾಜ್ ಇನ್ನು ನೆನಪು ಮಾತ್ರ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಗೂರಿನ ನಿವಾಸಿಯಾಗಿದ್ದ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ 48 ವರ್ಷ ವಯಸ್ಸಾಗಿತ್ತು.

ನೀವು ಕನ್ನಡದ ಸೂಪರ್ ಹಿಟ್ ಸಿನಿಮಾಗಳಾದ ಕಿರಿಕ್ ಪಾರ್ಟಿ, ಅಣ್ಣಾಬಾಂಡ್, ಉಪ್ಪಿ2, ರಾಜರಥ ಮತ್ತಿತರ ಸಿನಿಮಾಗಳನ್ನು ನೋಡಿರ್ತೀರಿ. ಈ ಸಿನಿಮಾಗಳಲ್ಲಿನ ಬೈಕ್​ಗಳು ನಿಮ್ಮನ್ನು ಆಕರ್ಷಿಸಿರುತ್ತವೆ.‌ ಈ ಸಿನಿಮಾಗಳಲ್ಲಿ ಬೈಕ್​ಗಳ ವಿನ್ಯಾಸಕ ದಿಲೀಪ್ ರಾಜ್.‌ ಸಿನಿಮಾಗಳಿಗೆ ಬೈಕ್ ವಿನ್ಯಾಸ ಮಾಡುತ್ತಾ ಸ್ಯಾಂಡಲ್​​ವುಡ್ ಹತ್ತಿರವಾದವರೂ ಹಾಗೂ ಸ್ಯಾಂಡಲ್ ವುಡ್ ಕುಟುಂಬದ ಸದಸ್ಯರೂ ಆಗಿದ್ದರು ದಿಲೀಪ್ ರಾಜ್. ತನ್ನದೇ ವರ್ಕ್ ಶಾಪ್ ನಲ್ಲಿ ವಿಭಿನ್ನ ಶೈಲಿಯ ಬೈಕ್ , ಕಾರುಗಳನ್ನು ಸಿದ್ಧಪಡಿಸುತ್ತಿದ್ದ ದಿಲೀಪ್ ರಾಜ್ ಅವರು ವಿಶೇಷ ಚೇತನರ ಬಗ್ಗೆ ಅಪಾರ ಕಾಳಜಿ, ಪ್ರೀತಿಯನ್ನು ಹೊಂದಿದ್ದರು.

LEAVE A REPLY

Please enter your comment!
Please enter your name here