Homeರಾಜ್ಯ‘ರಸ್ತೆ ಜಾಗೃತಿಗಾಗಿ ಧಾರವಾಡಕ್ಕೆ ಜಾಥಾ ಹೊರಟ ಮೃತರ ಕುಟುಂಬಸ್ಥರು’

‘ರಸ್ತೆ ಜಾಗೃತಿಗಾಗಿ ಧಾರವಾಡಕ್ಕೆ ಜಾಥಾ ಹೊರಟ ಮೃತರ ಕುಟುಂಬಸ್ಥರು’

ದಾವಣಗೆರೆ: ದಾವಣಗೆರೆಯ ಹತ್ತು ಕುಟುಂಬಗಳ ನಂದಾದೀಪ ಆರಿಸಿದ  ಹಾಗೂ ಸಂಕ್ರಮಣವನ್ನು ಕತ್ತಲಾಗಿಸಿರುವ ಧಾರವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೇ ಇರುವುದನ್ನು  ಖಂಡಿಸಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.‌

ಕಳೆದ ಜನವರಿ 15 ರಂದು ಧಾರವಾಡದ ಇಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಾಲಕ ಸೇರಿ ದಾವಣಗೆರೆಯ 12 ಜನ ಗೆಳತಿಯರು ಮೃತಪಟ್ಟಿದ್ದಾರೆ. ಈ ಭೀಕರ ಘಟನೆ ಬಳಿಕ ಮೃತ ಮಹಿಳೆಯರ ದಾರುಣ ಅಂತ್ಯವು ಇನ್ನು ಅವರ ಕುಟುಂಬಸ್ಥರನ್ನು ಕಾಡುತ್ತಿದೆ.

ಘಟನೆಗೆ ಕಾರಣವಾದ, ಹೆದ್ದಾರಿ ಪೂರ್ಣಗೊಳಿಸದ ಅಧಿಕಾರಿಗಳು ಹಾಗೂ ನಿರ್ಲಕ್ಷ್ಯ ವಹಿಸಿದ ಕೇಂದ್ರ ಸರ್ಕಾರದ ವಿರುದ್ಧ ಇದೀಗ ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರು ಹೋರಾಟಕ್ಕೆ ಮುಂದಾಗಿದ್ದಾರೆ. ಇದೇ ಫೆಬ್ರವರಿ 6 ರಂದು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಜನತೆಗೆ ತಿಳಿಸುವ ಸಂಬಂಧ ದಾವಣಗೆರೆಯ ಐಎಂಎ ಹಾಲ್ ನಿಂದ ಅಪಘಾತ ಸ್ಥಳದವರೆಗೆ ಜಾಥಾ ನಡೆಸಲು ನಿರ್ಧರಿಸಿದ್ದಾರೆ. ಅಂದು ಬೆಳಿಗ್ಗೆ 7 ಘಂಟೆಗೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಜಾಥಾ ಆರಂಭವಾಗಲಿದೆ.

ಈ ಜಾಥಾಕ್ಕೆ ದಾವಣಗೆರೆ- ಹುಬ್ಬಳ್ಳಿ ಧಾರವಾಡ ನಾಗರಿಕ ಸುರಕ್ಷತಾ ವೇದಿಕೆ ಕೂಡ ಸಾಥ್ ನೀಡಿದ್ದು, ಮೃತ ಮಹಿಳೆ ಪತಿ ಡಾ. ರವಿಕುಮಾರ್, ಡಾ.ರಮೇಶ್, ಉದ್ಯಮಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಜಾಥಾ ನಡೆಯಲಿದೆ. ಆಕ್ಸಿಡೆಂಟ್ ಸ್ಫಾಟ್ ಗೆ ತೆರಳಿ ಭಾರೀ ಪ್ರತಿಭಟನೆ‌ ನಡೆಯಲಿದೆ. ಸರ್ಕಾರದ ವೈಫಲ್ಯಗಳನ್ನು ಜಗತ್ತಿಗೆ ತೆರೆದಿಡುವ ಹಾಗೂ ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಮರುಸಂಭವಿಸದಂತೆ ಜಾಗೃತಿ ಮೂಡಿಸುವುದು ಈ ಜಾಥಾದ ಮುಖ್ಯ ಉದ್ದೇಶವಾಗಿದೆ..

LEAVE A REPLY

Please enter your comment!
Please enter your name here

- Advertisment -

Most Popular

Recent Comments