Home P.Special 'ಕಿಕಿ' ಆಯ್ತು ಈಗ 'ಫಾಲಿಂಗ್ ಸ್ಟಾರ್' ಚಾಲೆಂಜ್..!

‘ಕಿಕಿ’ ಆಯ್ತು ಈಗ ‘ಫಾಲಿಂಗ್ ಸ್ಟಾರ್’ ಚಾಲೆಂಜ್..!

ಇತ್ತೀಚೆಗೆ ‘ಕಿಕಿ’ ಚಾಲೆಂಜ್ ಒಂದಿಷ್ಟು ಸದ್ದು ಮಾಡಿತ್ತು. ಚಲಿಸುವ ಕಾರಿನಿಂದ ಇಳಿದು ಡ್ಯಾನ್ಸ್ ಮಾಡಿ, ಕಾರು ಚಲಿಸುತ್ತಿರುವಾಗಲೇ ಹತ್ತುವ ಈ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಕನ್ನಡದ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೂಡ ಈ ಚಾಲೆಂಜ್ ಸ್ವೀಕರಿಸಿ, ವೀಡಿಯೋ ಅಪ್ ಮಾಡಿ, ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ರು. ಇದನ್ನೆಲ್ಲಾ ಇನ್ನೂ ಯಾರು ಮರೆತಿಲ್ಲ.

ಈ ಕಿಕಿ ಚಾಲೆಂಜ್ ನಿಂದ ಕೈಕಾಲು ಕಳೆದುಕೊಂಡವರಿದ್ದಾರೆ. ಜೀವ ಕಳ್ಕೊಂಡವರೂ ಇದ್ದಾರೆ. ಆದ್ರೆ, ಇದರ ಬೆನ್ನಲ್ಲೇ ಇದಕ್ಕಿಂತ ಹೆಚ್ಚು ಡೇಂಜರ್ ಆಗಿರೋ ಚಾಲೆಂಜೊಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಮಾಡ್ತಿದೆ.

ನಡೆಯುತ್ತಾ ನಡೆಯುತ್ತಾ ಇದ್ದಕ್ಕಿದ್ದಂತೆ ಐಷಾರಾಮಿ ವಸ್ತುಗಳ‌ ಮೇಲೆ ಬಿದ್ದು ಫೋಟೋ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಇನ್ನೊಬ್ಬರಿಗೆ ಚಾಲೆಂಜ್ ನೀಡೋದೆ ಈ ಅನಾಹುತಕಾರಿ ಇಂಟರ್ನೆಟ್ ಚಾಲೆಂಜ್..! ಇದನ್ನು ‘ಫಾಲಿಂಗ್ ಸ್ಟಾರ್’ ಅಂತ ಕರೀತಿದ್ದಾರೆ.

ಫಾಲಿಂಗ್ ಸ್ಟಾರ್..! ಹೀಗಂತ ಕರೆಯೋಕೆ‌ ಕಾರಣ ,‌ಇದು ಸೆಲೆಬ್ರಿಟಿಗಳಿಗಿರೋ ವಿಚಿತ್ರ, ಅಪಾಯಕಾರಿ ಚಾಲೆಂಜ್..! #FallingStars 2018 ಅಂತ ಹ್ಯಾಷ್ ಟ್ಯಾಗ್ ಮೂಲಕ ಸೆಲೆಬ್ರಿಟಿಗಳು ನೆಲದ ಮೇಲೆ, ಐಷಾರಾಮಿ ವಸ್ತುಗಳ ಮೇಲೆ ಬಿದ್ದು ಆ ಫೋಟೋವನ್ನು ಇನ್ಸ್ ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡ್ತಿದ್ದಾರೆ.

ಈ ಚಾಲೆಂಜ್ ಆಗಸ್ಟ್ ನಲ್ಲಿ ರಷ್ಯಾದಲ್ಲಿ ಹುಟ್ಕೊಳ್ತು ಅಂತ ಹೇಳಲಾಗ್ತಿದ್ದು, ಸೆಲಬ್ರಿಟಿಗಳ ಜೊತೆಗೆ ಈಗ ಯುವಕ-ಯುವತಿಯರು, ಮಕ್ಕಳು ಇದನ್ನು ಸ್ವೀಕರಿಸಿ ಎದ್ದು- ‘ಬಿದ್ದು’ ಫೋಟೋ ಪೋಸ್ಟ್ ಮಾಡ್ತಿದ್ದಾರೆ. ಬರೀ ನಡೆಯುತ್ತಾ ಬೀಳುವುದಲ್ಲದೆ, ಕಾರು, ಪ್ರೆವೇಟ್ ಜೆಟ್, ಯಾಚ್ ಗಳಿಂದ ಕೂಡ ಬಿದ್ದು ಜೀವಕ್ಕೆ ಕುತ್ತು ತಂದುಕೊಳ್ತಿದ್ದಾರೆ‌.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments