ವಾರದಿಂದ ಮಾಲೀಕನಿಗಾಗಿ ಆಸ್ಪತ್ರೆ ಹೊರಗೆ ಕಾಯ್ತಾ ಇದೆ‌ ಈ ನಾಯಿ…ಆದ್ರೆ ಮಾಲೀಕ ಇನ್ನೆಂದೂ ಬರಲಾರನು..!

0
245

ನಿಮ್ಗೆ ಹಚಿಕೋ ನಾಯಿ ಕಥೆ ಗೊತ್ತಿರ್ಬಹುದು..? ಈ ರಿಯಲ್ ಸ್ಟೋರಿ ಮೇಲೆ ಜಪಾನಿ ಭಾಷೆಯಲ್ಲಿ ಒಂದು ಸಿನಿಮಾ ಕೂಡ ಬಂದಿದೆ. ಜಪಾನಿನ ಅಕಿಟ ಬ್ರೀಡ್​​ಗೆ ಸೇರಿದ ನಾಯಿ ಈ ಹಚಿಕೋ.. ಇದು ಪ್ರತಿದಿನ ತನ್ನ ಮಾಲೀಕ ಆಫೀಸ್​ಗೆ ಹೋಗುವಾಗ ರೈಲ್ವೆ ಸ್ಟೇಷನ್ ತನಕ ಹೋಗಿ ಬಿಟ್ಟು, ಆತ ಸಂಜೆ ವಾಪಸ್ಸು ಬರೋವರೆಗೂ ಅಲ್ಲೇ ಕಾದು ಕುಳಿತಿರ್ತಾ ಇತ್ತು. ಒಂದು ದಿನ ಮಾಲೀಕ ಆಫೀಸ್​ಗೆ ಹೋದವನು ಮರಳಿ ಬರ್ಲೇ ಇಲ್ಲ…! ಹಾರ್ಟ್ ಅಟ್ಯಾಕ್​ನಿಂದ ಆತ ಸತ್ತೋಗಿರ್ತಾನೆ. ಆದ್ರೆ, ಈ ಹಚಿಕೋ ಮಾತ್ರ ನನ್ನ ಮಾಲೀಕ ಬಂದೇ ಬರ್ತಾನೆ ಅಂತ ರೈಲ್ವೇ ಸ್ಟೇಷನ್​ನಲ್ಲೇ ಕಾಯ್ತಾ ಇರುತ್ತೆ.. ಒಂದ್ ದಿನ ಆಯ್ತು, ಎರಡು ದಿನ ಆಯ್ತು, ಮೂರು ದಿನ ಆಯ್ತು.. ಹೀಗೆ ದಿನಗಳು ಉರುಳಿದ್ರೂ, ತಿಂಗಳುಗಳು ಕಳೆದ್ರೂ ಹಚಿಕೋ ಮಾತ್ರ ಮಾಲೀಕನ ದಾರಿಯನ್ನೇ ಕಾಯ್ತಾ ಇತ್ತು. ಹೀಗೆ ಬರೋಬ್ಬರಿ‌ 9ವರ್ಷಗಳ ಕಾಲ ಅಗಲಿದ ಮಾಲೀಕನ ಬರುವಿಕೆಯ ದಾರಿಯನ್ನು ನೋಡಿದ್ದ ಹಚಿಕೋ ಒಂದು ದಿನ ಮಾಲೀಕನ ನೆನಪಲ್ಲೇ ಪ್ರಾಣಬಿಟ್ಟಿತು…ಈ ಕಥೆ ಜಪಾನಿನಲ್ಲಿ ಬಹಳ ಜನಪ್ರಿಯ. ಮೊದಲೇ ಹೇಳಿದಂತೆ ‘ಹಚಿಕೋ’ ಕಥೆಯಾಧಾರಿತ Hachi : A Dog’s Tale ಅನ್ನೋ ಸಿನಿಮಾ ಕೂಡ 2009ರಲ್ಲಿ ತೆರೆಕಂಡಿದೆ.

ಈಗ ಈ ಕಥೆಯನ್ನು ನೆನಪು ಮಾಡ್ಕೋಳಕ್ಕೆ ಕಾರಣ ಇಂತಹದ್ದೇ ಒಂದು ಘಟನೆ ಅರ್ಜೆಂಟೈನಾದಲ್ಲಿ‌ ನಡೆದಿದೆ. ಅರ್ಜೈಂಟೈನಾದ ಆಸ್ಪತ್ರೆಯೊಂದರ ಎದುರು ಲ್ಯಾಬರ್ ಡಾರ್ ಜಾತಿಗೆ ಸೇರಿದ ನಾಯಿಯೊಂದು ತನ್ನನ್ನು ಸಾಕಿದವನಿಗಾಗಿ ಕಾಯ್ತಾ ಇದೆ…ಆದ್ರೆ, ಆ ಮಾಲೀಕ ಮೃತಪಟ್ಟಿದ್ದಾನೆ.

ಹೌದು, ಸ್ಯಾನ್ ಸಾಲ್ವಡೋರ್ ಡಿ ಜುಜುಯ್​​ನ ಪ್ಯಾಬ್ಲೋ ಸೊರಿಯಾ ಆಸ್ಪತ್ರೆ ಹೊರಗಡೆ 6 ವರ್ಷದ ಟೋಟೋ ಅನ್ನೋ ಮುದ್ದಾದ ನಾಯಿ ತನ್ನ ಮಾಲೀಕ ಬರ್ತಾನೆ, ಬರ್ತಾನೆ ಅವನ ಜೊತೆ ಮನೆಗೆ ಹೋಗ್ಬೇಕು ಅಂತ ಕಾಯ್ತಿದೆಯಂತೆ. ಪಾಪಾ, ಆ ಪುಟ್ಟ ನಾಯಿಗೆ ತನ್ನ ಮಾಲೀಕ ಬಾರದ ಲೋಕಕ್ಕೆ ಹೋಗಿದ್ದಾನೆ ಅಂತ ಗೊತ್ತೇ ಇಲ್ಲ.‌

ಟೋಟೋ ಮಾಲಿಕ ಮೃತಪಟ್ಟು ಹೆಚ್ಚು ಕಮ್ಮಿ ಒಂದು ವಾರವಾಗಿದೆಯಂತೆ.‌ ಟೋಟೋ ಮಾತ್ರ ಆಸ್ಪತ್ರೆ ಬಾಗಿಲಿನಲ್ಲೇ ಕಾದು ಕುಳಿತಿದೆಯಂತೆ..! ‘ಟೋಟೋನ ಮಾಲೀಕರ ಸಂಬಂಧಿಕರು ಯಾರೂ ಟೋಟೋನನ್ನು ಕರ್ಕೊಂಡು ಹೋಗಿಲ್ಲ. ಅವ್ರು ಟೋಟೋನನ್ನು ಬೇರೆ ಯಾರದ್ರೋ ಸಾಕೋದಾದ್ರೆ ಸಾಕಲಿ ಅಂತ ಬೇರೆ ಮಾಲೀಕರನ್ನು ಹುಡುಕ್ತಾ ಇದ್ದಾರೆ ಅಂತ ಸ್ಥಳೀಯ ಪ್ರಾಣಿ ಸಂರಕ್ಷಣಾ ಸಂಸ್ಥೆಯೊಂದು ಹೇಳಿದೆ. ಯಾರಾದ್ರು ಟೋಟೋನ ದತ್ತು ಪಡೆದು ಸಾಕಿದ್ರೆ, ಅವನನ್ನು ಜೋಪಾನವಾಗಿ ನೋಡ್ಕೋಬೇಕು. ಸುರಕ್ಷಿತವಾದ ಬೋನ್​ನಲ್ಲಿ ಬಿಡ್ಬೇಕು. ಇಲ್ದೇ ಹೋದ್ರೆ ಅದು ತನ್ನ ಮಾಲೀಕನನ್ನು ಹುಡ್ಕೊಂಡು ಆಸ್ಪತ್ರೆಗೆ ಹೋದ್ರೂ ಹೋಗ್ಬಹುದು ಅಂತ ಸ್ಥಳೀಯ ಪ್ರಾಣಿ ಸಂರಕ್ಷಣಾ ಸಂಸ್ಥೆಯ ಸದಸ್ಯೆ ಫಾತಿಮಾ ರಾಡಿಗ್ವಸ್ ಹೇಳಿರೋದಾಗಿ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.‌

ನೋಡಿ, ಪ್ರಾಣಿಗಳು ತಮ್ಮನ್ನು ಸಾಕಿದವರ ಮೇಲೆ ಅದೆಂಥಾ ಪ್ರೀತಿ ಇಟ್ಕೊಂಡಿರ್ತಾವೆ.‌ ಇಂಥಾ ಕಥೆಗಳನ್ನು ಕೇಳ್ದಾಗ, ನೋಡಿದಾಗ ನಿಜಕ್ಕೂ ಮನಸ್ಸು ತುಂಬಾ ಭಾರವಾಗುತ್ತೆ. ಈ ಪ್ರಾಣಿಗಳ ಪ್ರೀತಿ, ನಂಬಿಕೆ, ನಿಯತ್ತಿನ ಮುಂದೆ ಮನುಷ್ಯರು ಏನೂ ಅಲ್ಲ, ಏನೇನು ಅಲ್ಲ ಬಿಡ್ರಿ…

LEAVE A REPLY

Please enter your comment!
Please enter your name here