ಫೇಸ್​​ಬುಕ್​, ಟ್ವಿಟರ್​ ಬದಿಗಿಟ್ಟು ಟ್ರಂಪ್​​ ಸೋಶಿಯಲ್ ಮೀಡಿಯಾಗಳ ಸಭೆ..!

0
152

ವಾಷಿಂಗ್ ಟನ್​ : ಸೋಶಿಯಲ್​ ಮೀಡಿಯಾ ಅಂತ ಬಂದ್ರೆ ಥಟ್ ಅಂತ ನೆನಪಾಗುವುದು ಫೇಸ್​​​ಬುಕ್, ಟ್ವಿಟರ್​..! ಆದರೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಈ ಎರಡು ತಾಣಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ..!
ಹೌದು, ಟ್ರಂಪ್ ಸೋಶಿಯಲ್ ಮೀಡಿಯಾಗಳ ಸಭೆ ಏರ್ಪಡಿಸಿದ್ದಾರೆ. ಆದ್ರೆ, ಈ ಸಭೆಗೆ ಸಾಮಾಜಿಕ ಜಾಲತಾಣಗಳ ಅತ್ಯಂತ ಜನಪ್ರಿಯ, ದೈತ್ಯ ಸಂಸ್ಥೆಗಳಾದ ಫೇಸ್​ಬುಕ್ ಮತ್ತು ಟ್ವಿಟರ್​​ಗೆ ಆಹ್ವಾನ ನೀಡಿಲ್ಲ..!
ಈ ಬಗ್ಗೆ ಶ್ವೇತ ಭವನದ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಫೇಸ್​ಬುಕ್​ ಮತ್ತು ಟ್ಟಿಟರ್​ ತಮ್ಮ ರಿಪಬ್ಲಿಕನ್ ಚಿಂತನೆಗಳನ್ನು ಸೆನ್ಸಾರ್​ ಮಾಡುತ್ತವೆ ಅನ್ನೋದು ಟ್ರಂಪ್ ಅಭಿಪ್ರಾಯ. ಇದೇ ಕಾರಣಕ್ಕೆ ಅವರು ಪದೇ ಪದೇ ಫೇಸ್​ಬುಕ್, ಟ್ವಿಟರ್ ವಿರುದ್ಧ ಆಕ್ರೋಶ ಹೊರ ಹಾಕ್ತಿರ್ತಾರೆ. ಹಾಗೆಯೇ ಈ ಸೋಶಿಯಲ್ ಮೀಡಿಯಾ ದಿಗ್ಗಜ ಸಂಸ್ಥೆಗಳನ್ನು ಬದಿಗಿಟ್ಟು ಸಭೆ ನಡೆಸಲು ಮುಂದಾಗಿದ್ದಾರೆ..!

LEAVE A REPLY

Please enter your comment!
Please enter your name here