Sunday, June 26, 2022
Powertv Logo
Homeತಂತ್ರಜ್ಞಾನಬಂದೇ ಬಿಡ್ತು ಫೇಸ್ಬುಕ್ ಪೇ..! ಏನಿದರ ವಿಶೇಷತೆ?

ಬಂದೇ ಬಿಡ್ತು ಫೇಸ್ಬುಕ್ ಪೇ..! ಏನಿದರ ವಿಶೇಷತೆ?

ಗೂಗಲ್ ಪೇ, ಫೋನ್ ಪೇ, ಅಮೇಜಾನ್ ಪೇ, ಪೇಟಿಎಂ ಹೀಗೆ ಹತ್ತಾರು ಬಗೆಯ ಮನಿಟ್ರಾನ್ಸ್​​ಫರ್ ಆ್ಯಪ್​ಗಳ ಬಗ್ಗೆ ಗೊತ್ತಿದೆ, ಯೂಸ್ ಕೂಡ ಮಾಡ್ತಿದ್ದೀವಿ. ಈಗ ಫೇಸ್ಬುಕ್ ಮೂಲಕ ಕೂಡ ಹಣ ಕಳುಹಿಸಬಹುದು!
ಹೌದು, ಜನಪ್ರಿಯ ಸೋಶಿಯಲ್ ಮೀಡಿಯಾ ಫೇಸ್​ಬುಕ್​ ಹೊಸ ಫೀಚರ್ ಪರಿಚಯಿಸಿದೆ. ಅದುವೇ ಮನಿಟ್ರಾನ್ಸ್​ಫರ್ ಸೌಲಭ್ಯ. ಅದಕ್ಕಾಗಿ ನೀವೇನು ಮತ್ತೊಂದು ಅಪ್ಲಿಕೇಶನ್​ ಡೌನ್​​ಲೋಡ್ ಮಾಡಿಕೊಳ್ಳಬೇಕಿಲ್ಲ. ನಿಮ್ಮ ಆ್ಯಂಡ್ರಾಯ್ಡ್​ ಮೊಬೈಲಲ್ಲಿ ಈಗಾಗಲೇ ಫೇಸ್​ಬುಕ್ ಇದ್ದೇ ಇರುತ್ತೆ. ಹೋಮ್ ಪೇಜಿನ ಬಲಭಾಗದಲ್ಲಿನ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿದಾಗ ಫ್ರೆಂಡ್ಸ್, ಗ್ರೂಪ್ಸ್​ ಹೀಗೆ ನಾನಾ ಐಕಾನ್ಸ್ ಕಾಣುತ್ತವೆ. ಅಲ್ಲಿ ಸೀ ಮೋರ್ ಅನ್ನೋ ಮತ್ತೊಂದು ಆಪ್ಷನ್ ಇದೆ. ಅದರ ಮೇಲೆ ಕ್ಲಿಕ್ ಮಾಡಿದ್ರೆ ಸೆಂಡ್ ಆರ್ ರೆಕ್ವೆಸ್ಟ್ ಮನಿ ಅನ್ನೋ ಆಪ್ಷನ್ ಸಿಗುತ್ತೆ. ಆ ಮೂಲಕ ನೀವು ಬೇರೆ ಬೇರೆ ಆ್ಯಪ್ ಗಳಲ್ಲಿ ಹಣ ವರ್ಗಾಯಿಸಿದಂತೆ ಇದರಿಂದಲೂ ಮನಿ ಟ್ರಾನ್ಸ್​ಫರ್ ಮಾಡ್ಬಹುದು.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments