Monday, August 15, 2022
Powertv Logo
Homeದೇಶನ್ಯಾಯಾಲಯದಲ್ಲಿ ಸ್ಫೋಟ!

ನ್ಯಾಯಾಲಯದಲ್ಲಿ ಸ್ಫೋಟ!

ಲೂಧಿಯಾನ: ಪಂಜಾಬ್ ರಾಜ್ಯದ ಲೂಧಿಯಾನದ ನ್ಯಾಯಾಲಯದಲ್ಲಿ ಸ್ಫೋಟ ಸಂಭವಿಸಿದೆ. ಹೌದು, ನ್ಯಾಯದೇಗುಲದಲ್ಲೇ ಸ್ಪೋಟ ಸಂಭವಿಸಿ, ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನ್ಯಾಯಾಲಯದ 2ನೇ ಮಹಡಿಯಲ್ಲಿರುವ ಬಾತ್‌ ರೂಂನಲ್ಲಿ ಈ ಸ್ಫೋಟ ಸಂಭವಿಸಿದೆ.

ಸ್ಫೋಟದ ತೀವ್ರತೆಗೆ ಬಾತ್‌ ರೂಂ ಅಕ್ಕಪಕ್ಕದ ಕೊಠಡಿಗಳ ಗೋಡೆಗೆ ಹಾನಿಯಾಗಿದೆ. ಕಿಟಕಿಯ ಗಾಜುಗಳು ಒಡೆದು ಹೋಗಿವೆ. ಪೊಲೀಸರು ಸ್ಥಳವನ್ನು ಸುತ್ತುವರೆದಿದ್ದು, ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದಾರೆ. ಲೂಧಿಯಾನದ ನ್ಯಾಯಾಲಯ ನಗರದ ಹೃದಯಭಾಗದಲ್ಲಿ ಜಿಲ್ಲಾಧಿಕಾರಿ ಕಚೇರಿಗಳ ಸಮೀಪವೇ ಇದೆ. ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದು, 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

5 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments