ಬೆಂಗಳೂರು : ಕೊರೋನಾ ನಿಯಂತ್ರಣದ ಉದ್ದೇಶದಿಂದ ಮಾಡಿದ್ದ ವಾರದ ಲಾಕ್ಡೌನ್ ಯಶಸ್ವಿ ಆಗಿಲ್ಲ. ಇಂದಿನಿಂದ ಅನ್ಲಾಕ್ ಜಾರಿಯಲ್ಲಿರುತ್ತೆ. ಕೊರೋನಾ ಸೋಂಕು ತಡೆಯಲು ಲಾಕ್ಡೌನ್ ಒಂದೇ ಪರಿಹಾರವಲ್ಲ ಅಂತ ಹೇಳಿರೋ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 5-T ತಂತ್ರ ಅನುಸರಿಸುವುದಾಗಿ ತಿಳಿಸಿದ್ದಾರೆ. 5-T ತಂತ್ರವನ್ನು ಪಾಲಿಸುವಂತೆ ತಜ್ಞರು ಸಲಹೆ ನೀಡಿದ್ದು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ.
ಹಾಗಾದ್ರೆ ಏನಿದು 5 – T ತಂತ್ರ?
Trace – ಸೋಂಕಿತರನ್ನು ಗುರುತಿಸುವುದು
Track – ಸಂಪರ್ಕಿತರನ್ನು ಹುಡುಕುವುದು
Test – ಕೊವಿಡ್ ಪರೀಕ್ಷೆ ಮಾಡುವುದು
Treat – ಸೂಕ್ತ ಚಿಕಿತ್ಸೆ ನೀಡುವುದು
Technology – ಅಗತ್ಯ ತಂತ್ರಜ್ಞಾನ ಬಳಸುವುದು
ಹೀಗೆ ಟ್ರೇಸ್, ಟ್ರ್ಯಾಕ್, ಟ್ರೀಟ್, ಟೆಸ್ಟ್ ಮತ್ತು ಟೆಕ್ನಾಲಜಿ ಅನ್ನೋ 5 ಸೂತ್ರದಲ್ಲಿ ಸರ್ಕಾರ ಮತ್ತಷ್ಟು ದಕ್ಷವಾಗಿ ಕೆಲಸ ನಿರ್ವಹಿಸಲಿದೆ ಅಂತ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.