Home ರಾಜ್ಯ ‘ದುಬಾರಿಯಾದ ಡಿಸೇಲ್ ಲಂಗರು ಹಾಕಿದ ಮೀನುಗಾರಿಕಾ ಬೋಟ್’

‘ದುಬಾರಿಯಾದ ಡಿಸೇಲ್ ಲಂಗರು ಹಾಕಿದ ಮೀನುಗಾರಿಕಾ ಬೋಟ್’

ಕಾರವಾರ : ದಿನದಿಂದ ದಿನಕ್ಕೆ ಪೆಟ್ರೋಲ್ ಡಿಸೇಲ್‌ ದರ ದುಬಾರಿ ಆಗತ್ತಾ ಇದ್ದು, ಪ್ರತಿಯೊಬ್ಬರು ದರ‌ಏರಿಕೆಯ ಬಿಸಿಯಿಂದಾಗಿ ತತ್ತರಿಸಿಹೋಗಿದ್ದಾರೆ. ಡಿಸೇಲ್ ದರ‌ ಗಣನೀಯವಾಗಿ ಏರಿಕೆ ಆಗಿರೋದ್ರಿಂದ‌ ಕರಾವಳಿ ನಗರಿ ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ ಬಂದರಿನಲ್ಲಿ ನೂರಾರು ಮೀನುಗಾರಿಕಾ ಬೋಟ್ ಗಳು ಬಂದರಿನಲ್ಲೇ ನಿಂತಿವೆ .

ಇತ್ತ ಯಾಂತ್ರಿಕ ಮೀನುಗಾರಿಕೆ ನಡೆಸುವ ಮೀನುಗಾರಿಕಾ ಬೋಟುಗಳಿಗೆ ಡಿಸೇಲ್‌ ಅತ್ಯಗತ್ಯವಾಗಿ ಬೇಕಾಗಿದ್ದು, ಸದ್ಯ ಜಿಲ್ಲೆಯಲ್ಲಿ ಡೀಸೆಲ್ ದರ 86.07 ರೂಪಾಯಿಗೆ ಏರಿಕೆಯಾಗಿದೆ. ಪ್ರತಿನಿತ್ಯ ನೂರಾರು ಲೀಟರ್ ಡಿಸೇಲ್‌ನ್ನ ಮೀನುಗಾರಿಕೆಗೆ ವ್ಯಯಿಸುವ ಮೀನುಗಾರರಿಗೆ ಇದೀಗ ಡಿಸೇಲ್‌ ಬೆಲೆ ಕೈಸುಡುವಂತಾಗಿದೆ. ಮೀನುಗಾರಿಕೆ ನಡೆಸೋದೇ ಕಷ್ಟಕರವಾಗಿ ಪರಿಣಮಿಸಿದೆ. ಒಂದು ಬಾರಿಗೆ ಮೀನುಗಾರಿಕೆಗೆ ತೆರಳಲು 20ರಿಂದ 50 ಸಾವಿರ ರೂಪಾಯಿಯಷ್ಟು ಡೀಸೆಲ್‌ ಬೇಕಾಗುತ್ತದೆ. ಅಷ್ಟು ಪ್ರಮಾಣದ ಮೀನುಗಳು ಸಿಗದೇ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಸಾಕಷ್ಟು ಮೀನುಗಾರರು ಕೆಲ ದಿನಗಳಿಂದ ಬೋಟುಗಳನ್ನ ಬಂದರಿನಲ್ಲಿ ನಿಲ್ಲಿಸಿ ಮೀನುಗಾರಿಕೆಯನ್ನೇ ಸ್ಥಗಿತಗೊಳಿಸಿದ್ದಾರೆ.

ಬಂದರಿನಲ್ಲಿ ಟ್ರಾಲರ್ ಹಾಗೂ ಪರ್ಸಿನ್ ಸೇರಿ ಒಟ್ಟೂ 200ಕ್ಕೂ ಅಧಿಕ ಬೋಟುಗಳಿದ್ದು, ಜಿಲ್ಲೆಯ ಕರಾವಳಿಯಲ್ಲಿ ಸಾವಿರಕ್ಕೂ ಅಧಿಕ ಮೀನುಗಾರಿಕಾ ಬೋಟುಗಳಿವೆ. ಟ್ರಾಲರ್ ಬೋಟೊಂದು ಮೀನುಗಾರಿಕೆಗೆ ತೆರಳಲು ಒಂದು ನೂರು ಲೀಟರ್ ಡಿಸೇಲ್‌ ಅಗತ್ಯವಿದ್ದು, ಪರ್ಸಿನ್ ಬೋಟುಗಳಿಗೆ ಐದುನೂರು ಲೀಟರ್ ಡಿಸೇಲ್‌ ಅಗತ್ಯವಿದೆ. ಹೀಗಾಗಿ ಮೀನುಗಾರಿಕೆ ನಡೆಸಲು ಡಿಸೇಲ್‌ಗೆ ಹೆಚ್ಚಿನ ಹಣವನ್ನ ವ್ಯಯಿಸಬೇಕಾಗಿದ್ದು, ಉತ್ತಮ ಮೀನುಗಾರಿಕೆ ನಡೆಯದಿದ್ದಲ್ಲಿ ಹಾಕಿದ ಹಣವೂ ನಷ್ಟವಗುತ್ತಿದೆ.  ಸರ್ಕಾರ ಮೀನುಗಾರರಿಗೆ ವಿವಿಧ ಯೋಜನೆಗಳನ್ನ ಘೋಷಿಸಿದ್ದಾಗಿ ಹೇಳುತ್ತಿದೆಯಾದರೂ ಯಾವೊಬ್ಬ ಮೀನುಗಾರರಿಗೂ ಇದರಿಂದ ಲಾಭವಾಗುತ್ತಿಲ್ಲ. ಹೀಗಾಗಿ ಡಿಸೇಲ್‌ ಬೆಲೆಯನ್ನೇ ಇಳಿಕೆ ಮಾಡುವ ಮೂಲಕ ಸಂಕಷ್ಟದಲ್ಲಿರುವ ಮೀನುಗಾರರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ನೆರವು ನೀಡಬೇಕು ಎನ್ನುವುದು ಮೀನುಗಾರ ಆಗ್ರಹವಾಗಿದೆ. ಸರ್ಕಾರ ನೆರವಿಗೆ ಬಾರದಿದ್ದಲ್ಲಿ ಕರಾವಳಿಯಲ್ಲಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಉದಯ ಬರ್ಗಿ ಕಾರವಾರ

LEAVE A REPLY

Please enter your comment!
Please enter your name here

- Advertisment -

Most Popular

‘ಡಿಜಿಟಲ್‌ ಮೀಡಿಯಾಗೆ ಹೊಸ ಗೈಡ್‌ಲೈನ್ಸ್ ‘

ಬೆಂಗಳೂರು: ಸೋಶಿಯಲ್ ಮೀಡಿಯಾಗಳಿಗೆ ಮೇಲೆ ಕೇಂದ್ರ ಸರ್ಕಾರ ಮೂಗುದಾರ ಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗಳು ಹೆಚ್ಚಾಗುತ್ತಿವೆ. ನಿಂಧನೆ ಮಾಡುವಂತಹ ಪೋಸ್ಟ್ ಗಳನ್ನು ನಿರ್ಬಂಧಿಸಬೇಕು ಎಂದು ಕೇಂದ್ರ ಸರ್ಕಾರ ಸೋಶಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾಗೆ...

ನನ್ನ ಸೋಲು ಲಿಂಗಾಯತ ಸುಮುದಾಯಕ್ಕೆ ಹಿನ್ನಡೆ: ಸುನಂದಾ

ಮೈಸೂರು: ಮೈಸೂರು ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಸೋತ ಹಿನ್ನೆಲೆಯಲ್ಲಿ‌ ಬಿಜೆಪಿ ಅಭ್ಯರ್ಥಿ ಸುನಂದ ಪಾಲನೇತ್ರ ಕಣ್ಣೀರು ಹಾಕಿದ್ದಾರೆ. ನನ್ನ ಸೋಲು ಲಿಂಗಾಯತ ಸುಮುದಾಯಕ್ಕೆ ಹಿನ್ನೆಡೆಯಾಗಿದೆ. ನಾನು ಮೇಯರ್ ಆಗುತ್ತೇನೆ ಅಂತ ತುಂಬಾ‌ ನಿರೀಕ್ಷೆ ಇಟ್ಟುಕೊಂಡಿದ್ದೆ....

‘ಗ್ರಾಮಸ್ಥರ ಕೆರೆ ನಿರ್ಮಾಣಕ್ಕೆ ನಿನಾಸಂ ಸತೀಶ್ ಮೆಚ್ಚುಗೆ’

ಶಿವಮೊಗ್ಗ: ಗ್ರಾಮದ ಜನರೇ ಸೇರಿಕೊಂಡು, ಗ್ರಾಮದ ಕೆರೆಗಳನ್ನು ಅಭಿವೃದ್ಧಿಗೊಳಿಸಿದ ಮುತ್ತಲ ಗ್ರಾಮಕ್ಕೆ ನಟ ನೀನಾಸಂ ಸತೀಶ್ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮುತ್ತಲ ಗ್ರಾಮದಲ್ಲಿ ಎರಡು ಕೆರೆಗಳನ್ನು...

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು ಬುದ್ಧಿ ಬಂದಿಲ್ಲ: ಈಶ್ವರಪ್ಪ

ವಿಜಯಪುರ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು ಬುದ್ಧಿ ಬಂದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯಪುರದಲ್ಲಿ ಗ್ರಾಮೀಣಾಬಿವೃದ್ಧಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಹೋದಲೆಲ್ಲಾ ಮುಂದಿನ ಸಿಎಂ ನಾನೇ ಅಂತಾ ಹೇಳ್ತಾರೆ. ಸಿದ್ದರಾಮಯ್ಯ ಹಗಲು-ರಾತ್ರಿ...

Recent Comments