Home ರಾಜ್ಯ ನಿವೃತ್ತ ಲೋಕಾಯುಕ್ತ ನ್ಯಾ. ವೆಂಕಟಾಚಲ ವಿಧಿವಶ

ನಿವೃತ್ತ ಲೋಕಾಯುಕ್ತ ನ್ಯಾ. ವೆಂಕಟಾಚಲ ವಿಧಿವಶ

ಬೆಂಗಳೂರು : ನಿವೃತ್ತ ಲೋಕಾಯುಕ್ತ ನ್ಯಾ. ವೆಂಕಟಾಚಲ (89) ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಅವರನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಗೆ ಹೋಗುವ ಮುನ್ನವೇ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಊರುಕುಂಟೆ ಮಿಟ್ಟೂರು ಗ್ರಾಮದ ನಂಜೇಗೌಡ ವೆಂಕಟಾಚಲರವರು ಜನಿಸಿದ್ದು 1930 ಜುಲೈ 3ರಂದು. ಮೈಸೂರು ವಿವಿಯಲ್ಲಿ ಕಾನೂನು ಪದವಿ ಪೂರೈಸಿದ್ದ ಅವರು, ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದರು. 2001-2006ರಲ್ಲಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಇವರು ನಾಲ್ಕುವರೆ ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಬರೋಬ್ಬರಿ 50 ಸಾವಿರ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಭ್ರಷ್ಟರಿಗೆ ಸಿಂಹಸ್ವಪ್ನವಾಗಿ ಕಾಡಿ, ಲೋಕಾಯುಕ್ತ ಸ್ವಾಯತ್ತ ಸಂಸ್ಥೆಯ ಘನತೆಯನ್ನು ಹೆಚ್ಚಿಸಿದ್ರು.

LEAVE A REPLY

Please enter your comment!
Please enter your name here

- Advertisment -

Most Popular

ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪತ್ರ ಚಳುವಳಿ..!

ಕೊಪ್ಪಳ : ಪತ್ರಕರ್ತರ ಮೇಲೆ ನಡೆಯುವ ಹಲ್ಲೆಗಳು ತಡೆಗೆ ಕಾಯ್ದೆ ರೂಪಿಸಬೇಕು ಎಂದು ಕೊಪ್ಪಳ ಮೀಡಿಯಾ ಕ್ಲಬ್ ಪತ್ರಕರ್ತರು ಪತ್ರ ಚಳುವಳಿ ಆರಂಭಿಸಿದ್ದಾರೆ. ಪದೇ ಪದೇ ಪತ್ರಕರ್ತರ ಮೇಲೆ ಒಂದಲ್ಲ ಒಂದು ರೀತಿಯ ಹಲ್ಲೆಗಳು...

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ರಾಜಕೀಯ ಕೈವಾಡ : ನಳೀನ್​ ಕಮಾರ್ ಕಟೀಲು

ಹುಬ್ಬಳ್ಳಿ : ಕೆ.ಜಿ ಹಳ್ಳಿ ಘಟನೆಯಲ್ಲಿ ಸರ್ಕಾರಿ ಆಸ್ತಿ ಪಾಸ್ತಿಗಳನ್ನು ಹಾನಿ ಮಾಡಲಾಗಿದೆ, ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಕಠಿಣ ಕ್ರಮಗೈಗೊಳ್ಳಬೇಕು. ಇದು ರಾಜಕೀಯ ಹುನ್ನಾರ, ರಾಜ್ಯದಲ್ಲಿ ಗಲಭೆ ಎಬ್ಬಿಸುವ...

ಕೆ.ಜಿ ಹಳ್ಳಿ ಗಲಭೆಗೆ ಗುಪ್ತಚರ ಇಲಾಖೆ ದುರ್ಬಲವಾಗಿರುವುದೇ ಕಾರಣ : ತನ್ವೀರ್ ಸೇಠ್

ಮೈಸೂರು : ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆಗೆ ರಾಜ್ಯದ ಗುಪ್ತಚರ ಇಲಾಖೆ ದುರ್ಬಲವಾಗಿರುವುದೇ ಕಾರಣ ಎಂದು ಮೈಸೂರಿನ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಆರೋಪಿಸಿದ್ದಾರೆ.  ರಾಜ್ಯದಲ್ಲಿ ಗುಪ್ತಚರ ಇಲಾಖೆ ತುಂಬಾ ವೀಕ್ ಆಗಿದೆ. ಮುಂದೆ...

ಆ್ಯಡಮ್​ ಗಿಲ್​ಕ್ರಿಸ್ಟ್​​ ನಿವೃತ್ತಿಗೆ ವಿವಿಎಸ್ ಲಕ್ಷ್ಮಣ್ ಕಾರಣವಂತೆ..!

ಆ್ಯಡಮ್ ಗಿಲ್​​​ಕ್ರಿಸ್ಟ್ .. ಯಾವೊಬ್ಬ ಅಭಿಮಾನಿಯೂ ಆಸೀಸ್​ನ ಈ ಕ್ರಿಕೆಟ್ ದಿಗ್ಗಜನನ್ನು ಮರೆಯಲು ಸಾಧ್ಯವಿಲ್ಲ. ವಿಶ್ವಕ್ರಿಕೆಟ್​ ನಲ್ಲಿ ಸಖತ್ ಸದ್ದು ಮಾಡಿದ್ದ ಆ್ಯಡಮ್  ಗ್ರಿಲ್​ಕ್ರಿಸ್ಟ್ ನಿವೃತ್ತಿ ಘೋಷಿಸಿದ್ದು ಕೂಡ ದೊಡ್ಡ ಮಟ್ಟಿನ ಸದ್ದು...

Recent Comments