ರಾಜ್ಯಸಭಾ ಸದಸ್ಯರಾಗಿ ರಂಜನ್ ಗೊಗೊಯಿ ಪ್ರಮಾಣವಚನ ಸ್ವೀಕಾರ

0
71

ನವದೆಹಲಿ: ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ರಾಜ್ಯಸಭಾ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ‘ಮಾಜಿ ನ್ಯಾಯಾಮೂರ್ತಿಗಳು ಸೇರಿದಂತೆ ಬೇರೆ ಬೇರೆ ರಂಗದಲ್ಲಿ ಸೇವೆ ಸಲ್ಲಿಸಿದ ಗಣ್ಯರು ರಾಜ್ಯಸಭೆಗೆ ಆಯ್ಕೆಯಾಗುವುದು ನಮ್ಮ ಸಂಪ್ರದಾಯವಾಗಿದೆ. ಹಾಗಾಗಿ ಗೊಗೊಯಿ ಕೂಡಾ ಇಂದು ಪ್ರಮಾಣವಚನ ಸ್ವೀಕರಿಸುವ ಮೂಲಕ ಉತ್ತಮ ಕೊಡುಗೆ ನೀಡಲಿದ್ದಾರೆ‘ ಎಂದು ಹೇಳಿದರು. ಈ ವೇಳೆ ಸಮಾಜವಾದಿ ಪಕ್ಷವನ್ನು ಹೊರತುಪಡಿಸಿ ಕಾಂಗ್ರೆಸ್ ಹಾಗೂ ಇತರ ವಿಪಕ್ಷದ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರ ನಡೆದಿದ್ದಾರೆ.

ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯನಾಯ್ಡು ಮಾತನಾಡಿ, ‘ಈ ಸಭೆಗೆ ಆಯ್ಕೆಯಾಗುವವರಿಗೆ ಪ್ರಮಾಣಿಕೃತ  ಕಾನೂನು ಮತ್ತು ನಡಾವಳಿಗಳಿವೆ. ಹಾಗಿರುವಾಗ ವಿಪಕ್ಷಗಳು ಕಲಾಪದಿಂದ ಹೊರನಡೆದಿರುವುದು ಸರಿಯಲ್ಲ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

LEAVE A REPLY

Please enter your comment!
Please enter your name here