ಎದುರಾಳಿ ಇಲ್ದೆ ಗುರಿ ಮುಟ್ಟಿದಾಗ್ಲೂ ಖುಷಿ ಪಡಿ ಅಂತಿದೆ ಜಿಂಕೆ ಆಟ!

0
329

ಲೈಫಲ್ಲೊಂದು ಗುರಿ ಇರ್ಬೇಕು, ಆ ಗುರಿ ಮುಟ್ಟೋ ಛಲ ಇರ್ಬೇಕು. ಒಂದಲ್ಲಿ ಒಂದು ದಿನ ಗುರಿ ಮುಟ್ಟೇ ಮುಟ್ಟುತ್ತೀವಿ. ಆ ದಿನ ಸಿಕ್ಕಾಪಟ್ಟೆ ಸಂಭ್ರಮಿಸ್ಬೇಕು!

ನಿಜ, ಗುರಿ ತಲುಪುವ ಮುನ್ನ ಸಾಕಷ್ಟು ಅಡೆತಡೆಗಳನ್ನು ಎದುರಿಸ್ಬೇಕಾಗುತ್ತೆ! ಎದುರಾಳಿಗಳ ಜೊತೆ ಫೈಟ್ ಮಾಡ್ಬೇಕಾಗುತ್ತೆ. ಆದ್ರೆ, ಎಲ್ಲಾ ಟೈಮು, ಎಲ್ಲಾ ಗುರಿಗೂ ಎದುರಾಳಿ ಜೊತೆ ಸೆಣೆಸಬೇಕಾಗಿಲ್ಲ. ಕೆಲವೊಮ್ಮೆ ನಮಗೆ ಪೈಪೋಟಿ ನೀಡೋಕೆ ಯಾರೂ ಇರಲ್ಲ! ನಮ್ದೇ ಗುರಿ.. ನಮ್ಗೆ ನಾವೇ ಎದುರಾಳಿ! ಹೀಗೆ ನಾವು ಎದುರಾಳಿ ಇಲ್ದೆ ಗುರಿ ಮುಟ್ಟಿದಾಗಲೂ ಖುಷಿಪಡ್ಬೇಕು!

ಈಗ ಇಷ್ಟೆಲ್ಲಾ ಹೇಳೋಕೆ ಕಾರಣ ಒಂದು ಜಿಂಕೆ! ಅರೆ, ಜಿಂಕೆಗೂ ನೀವಿಲ್ಲಿ ಹೇಳ್ತಿರೋ ಜೀವನ ಪಾಠಕ್ಕೂ ಏನ್ ಸಂಬಂಧ ಅಂತ ಕೇಳ್ತಿದ್ದೀರಾ? ಸಂಬಂಧ ಇದೆ.. ಈ ಜೀವನ ಪಾಠ ಮಾಡಿರೋದು ಒಂದು ಜಿಂಕೆ!

ಹೌದು…ಐಎಫ್​ಎಸ್​ ಅಧಿಕಾರಿ ಸುಶಾಂತ್ ನಂದಾ ಜಿಂಕೆಯೊಂದು ಫುಟ್ಬಾಲ್​ ಆಡೋ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದಾರೆ. ಮುದ್ದಾದ ಜಿಂಕೆ ತನ್ನ ಕೊಂಬುಗಳಿಂದ ಚೆಂಡಾಟ ಆಡಿದೆ! ಯಾರೂ ಇಲ್ದೆ ತಾನೊಂದೇ ಫುಟ್ಬಾಲ್​ ಅನ್ನು ಗೋಲ್​ ಬಾಕ್ಸ್​ಗೆ ಅಟ್ಟಿ ಖುಷಿಯಿಂದ ಕುಣಿದು ಕುಪ್ಪಳಿಸಿದೆ. ಈ ವಿಡಿಯೋ ಅಪ್​ಲೋಡ್​ ಮಾಡಿರೋ ಸುಶಾಂತ್​ ನಂದಾ, ”ನಿಮ್​ ಮುಂದೆ ಎದುರಾಳಿ ಇಲ್ದಿದ್ರೂ ಕೂಡ, ನೀವು ಗುರಿ ಸಾಧಿಸಿದಾಗ ಯಾವಾಗಲೂ ಖುಷಿಪಡಿ” ಅಂತ ಬರೆದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸುಶಾಂತ್ ಟ್ವೀಟ್ ಸಿಕ್ಕಾಪಟ್ಟೆ ಸೌಂಡು ಮಾಡ್ತಿದೆ.

LEAVE A REPLY

Please enter your comment!
Please enter your name here