ಬ್ಯಾಂಡೇಜ್​ ಸುತ್ತಿಕೊಂಡೇ ಬ್ಯಾಟಿಂಗ್ ಮಾಡಿದ ಆಸೀಸ್​ ಕೀಪರ್..!

0
288

ವರ್ಲ್ಡ್​ಕಪ್​​ನ 2ನೇ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾದ ವಿಕೆಟ್​ ಕೀಪರ್, ಬ್ಯಾಟ್ಸ್​​ಮನ್​ ಅಲೆಕ್ಸ್​ ಕ್ಯಾರಿ ಗಾಯಗೊಂಡಿದ್ದು, ಬ್ಯಾಂಡೇಜ್ ಸುತ್ತಿಕೊಂಡೇ ಬ್ಯಾಟಿಂಗ್ ಮಾಡಿದ್ದಾರೆ.
ಇಂದು ಅತಿಥೇಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಫೈನಲ್​ಗಾಗಿ ಸೆಣೆಸುತ್ತಿವೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್​​​​ಬ್ಯಾಸ್ಟನ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮ್ಯಾಚ್​ನಲ್ಲಿ ಟಾಸ್ ಗೆದ್ದ ಆಸೀಸ್​ ಮೊದಲು ಬ್ಯಾಟಿಂಗ್​ ಮಾಡ್ತಿದ್ದು, ಕ್ಯಾರಿ ಬ್ಯಾಂಡೇಜ್ ಸುತ್ತಿಕೊಂಡೇ ಬ್ಯಾಟಿಂಗ್ ಮಾಡಿದ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
8ನೇ ಓವರ್ ಅನ್ನು ಇಂಗ್ಲೆಂಡ್​ ವೇಗಿ ಜೋಫ್ರಾ ಆರ್ಚರ್ ಮಾಡ್ತಿದ್ರು. ಆ ಓವರ್​ನ ಕೊನೆಯ ಬಾಲ್​​ ಕ್ಯಾರಿ ಅವರ ಗದ್ದಕ್ಕೆ ಬಿದ್ದು ರಕ್ತ ಸುರಿದಿದೆ. ಕೂಡಲೇ ಆಸೀಸ್​ ಡ್ರೆಸ್ಸಿಂಗ್ ರೂಂನಿಂದ ಮೈದಾನಕ್ಕೆ ಬಂದ ಡಾಕ್ಟರ್​ ಕ್ಯಾರಿಗೆ ಚಿಕಿತ್ಸೆ ನೀಡಿದ್ರು. ಕ್ಯಾರಿ ಗದ್ದಕ್ಕೆ ಬ್ಯಾಂಡೇಜ್ ಸುತ್ತಿಕೊಂಡೇ ಬ್ಯಾಟಿಂಗ್ ಮಾಡಿದ್ರು. 46 ಮಾಡಿ ಅದಿಲ್ ರಶಿದ್ ಅವರಿಗೆ ವಿಕೆಟ್​​ ಒಪ್ಪಿಸಿದ್ರು.

LEAVE A REPLY

Please enter your comment!
Please enter your name here