ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಗ್ ಶಾಕ್ ನೀಡಿದೆ. ಭಾರತಕ್ಕೆ ಟಿ20 ಮತ್ತು ಏಕದಿನ ಕ್ರಿಕೆಟ್ ವಿಶ್ವಕಪ್ ತಂದು ಕೊಟ್ಟ ಯಶಸ್ವಿ ನಾಯಕ ಅನ್ನೋ ಕೀರ್ತಿಗೆ ಪಾತ್ರರಾಗಿರೋ ಧೋನಿಯನ್ನು ಬಿಸಿಸಿಐ ವಾರ್ಷಿಕ ಕಾಂಟ್ರಾಕ್ಟ್ ಲಿಸ್ಟ್ನಿಂದ ಕೈ ಬಿಟ್ಟಿದೆ. ಈ ಮೂಲಕ ಧೋನಿ ವಿದಾಯಕ್ಕೆ ಬಿಸಿಸಿಐ ಅಂತಿಮ ಮುದ್ರೆ ಒತ್ತಿದೆ ಎಂದು ಹೇಳಲಾಗ್ತಿದೆ.
2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ವರ್ಲ್ಡ್ಕಪ್ ಬಳಿಕ ಧೋನಿ ಒಂದೇ ಒಂದು ಮ್ಯಾಚ್ನಲ್ಲೂ ಕಾಣಿಸಿಕೊಂಡಿರಲಿಲ್ಲ. ಧೋನಿ ಬದಲಿಗೆ ರಿಷಭ್ ಪಂತ್ ಖಾಯಂ ವಿಕೆಟ್ ಕೀಪರ್ ಆಗಿ ತಂಡದಲ್ಲಿದ್ದಾರೆ. ಕಳೆದ ಆರು ತಿಂಗಳಿಂದ ತಂಡದಿಂದ ದೂರ ಉಳಿದಿರೋ ಧೋನಿ ಟಿ20 ವಿಶ್ವಕಪ್ಗೆ ತಂಡ ಕೂಡಿಕೊಳ್ಳಬಹುದೆಂಬ ಆಸೆಯೊಂದು ಅಭಿಮಾನಿಗಳಲ್ಲಿ ಇನ್ನೂ ಇದೆ. ಆದ್ರೆ ಇದೀಗ ಬಿಸಿಸಿಐ ಆಟಗಾರರ ಒಪ್ಪಂದ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಕಳೆದ ವರ್ಷ ಎ ಗ್ರೇಡ್ ಪಟ್ಟಿಯಲ್ಲಿದ್ದ ಧೋನಿ ಈ ಬಾರಿ ಗುತ್ತಿಗೆ ಎ+, ಎ, ಬಿ ಮತ್ತು ಸಿ ಯಾವ ಪಟ್ಟಿಯಲ್ಲೂ ಸ್ಥಾನ ಪಡೆದಿಲ್ಲ.
ಎ+ ಗ್ರೇಡ್ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ, ಎ ಗ್ರೇಡ್ನಲ್ಲಿ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ , ಭುವನೇಶ್ವರ್ ಕುಮಾರ್ , ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಕೆಎಲ್ ರಾಹುಲ್, ಶಿಖರ್ ಧವನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಕುಲದೀಪ್ ಯಾದವ್ , ರಿಷಭ್ ಪಂತ್, B ಗ್ರೇಡ್ ಒಪ್ಪಂದ ಪಟ್ಟಿಯಲ್ಲಿ ವೃದ್ದಿಮಾನ್ ಸಾಹ, ಉಮೇಶ್ ಯಾದವ್ , ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ , ಮಾಯಾಂಕ್ ಅಗರ್ವಾಲ್ ಹಾಗೂ ಸಿ ಗ್ರೇಡ್ ಪಟ್ಟಿಯಲ್ಲಿ ಕೇದಾರ್ ಜಾಧವ್, ನವದೀಪ್ ಸೈನಿ, ದೀಪಕ್ ಚಹರ್ , ಮನೀಶ್ ಪಾಂಡೆ, ಹನುಮ ವಿಹಾರಿ, ಶಾರ್ದುಲ್ ಠಾಕೂರ, ಶ್ರೇಯಸ್ ಐಯರ್, ವಾಷಿಂಗ್ಟನ್ ಸುಂದರ್ ಸ್ಥಾನಪಡೆದಿದ್ದಾರೆ.
ಇನ್ನು ರಾಹುಲ್, ಮಯಾಂಕ್ ಅಗರ್ವಾಲ್ ಮತ್ತು ಮನೀಷ್ ಪಾಂಡೆ ಕ್ರಾಂಟ್ರೆಕ್ಟ್ ಲೀಸ್ಟಲ್ಲಿರುವ ಕನ್ನಡಿಗರು ಅನ್ನೋದನ್ನು ಕೂಡ ಗಮನಿಸಬಹುದು.
ಒಪ್ಪಂದಿಂದ ಧೋನಿ ಔಟ್ ; ಮಾಜಿ ಕ್ಯಾಪ್ಟನ್ ವಿದಾಯಕ್ಕೆ ಅಂತಿಮ ಮುದ್ರೆ ಒತ್ತಿತಾ ಬಿಸಿಸಿಐ?
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on