ಶ್ರೀನಗರ : ಕುಲ್ಗಾಂನ ನಾಗ್ನಾಡ್ – ಚಿಮ್ಮರ್ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಎನ್ಕೌಂಟರ್ನಲ್ಲಿ ಒಬ್ಬ ಭಯೋತ್ಪಾದಕ ಹತನಾಗಿದ್ದಾನೆ.
ಇಂತಹದ್ದೇ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸೋದಾದ್ರೆ, ನಾಲ್ಕು ದಿನಗಳ ಹಿಂದಷ್ಟೇ, ಅಂದ್ರೆ ಜುಲೈ 13ಕ್ಕೆ ಅನಂತ್ನಾಗ್ ಜಿಲ್ಲೆಯಲ್ಲಿ ನಡೆದಿದ್ದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಸದೆಬಡೆಯಲಾಗಿತ್ತು. ಉಗ್ರರು ಇರೋ ಬಗ್ಗೆ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆ ಉಗ್ರರ ಹುಟ್ಟಡಗಿಸಲು ಕಾರ್ಯಾಚರಣೆಗಿಳಿದಿತ್ತು. ಅದಕ್ಕೂ ಮುನ್ನ ಜುಲೈ 12ರಂದು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ನ ಗುಲ್ಶನ್ ಅಬಾದ್ರೆಬನ್ ಗ್ರಾಮದಲ್ಲಿ ಕೂಡ ಹೀಗೆ ಭದ್ರತಾಪಡೆ ಮತ್ತು ರಣಹೇಡಿ ಉಗ್ರರ ನಡುವೆ ಗುಂಡಿನಚಕಮಕಿ ನಡೆದಿತ್ತು. ಇಂದು ಬೆಳಗ್ಗೆನೇ ಕುಲ್ಗಾಂನ ನಾಗ್ನಾಡ್ – ಚಿಮ್ಮರ್ನಲ್ಲಿ ಉಗ್ರರ ಬೇಟೆಯಾಡಲಾಗಿದೆ. ಅಲ್ಲದೆ, ಪೊಲೀಸರು ಮತ್ತು ಭದ್ರತಾಪಡೆ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಉಗ್ರರ ಜಾಡು ಹಿಡಿದು ನಿರಂತರ ಕಾರ್ಯಾಚರಣೆಗಿಳಿದಿವೆ.