ಪಾಕ್​​ನ ಹಲವೆಡೆ ತುರ್ತು ಪರಿಸ್ಥಿತಿ ಘೋಷಣೆ..!

0
249

ಇಸ್ಲಮಾಬಾದ್​: ಭಾರತದ ದಾಳಿಯಿಂದ ತತ್ತರಿಸಿರೋ ಪಾಕಿಸ್ತಾನದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹಾಗೆಯೇ ತಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ ಅಂತ ಪಾಕ್​ ಆದೇಶ ಹೊರಡಿಸಿದೆ. ಪಾಕ್​ ದೇಶದ ಹಲವೆಡೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಅಲರ್ಟ್​ ಆಗಿರುವಂತೆ ಎಲ್ಲ ಇಲಾಖೆಗಳಿಗೆ ಆದೇಶ ನೀಡಿದೆ. ತುರ್ತು ಸಂದರ್ಭದಲ್ಲಿ ಎಲ್ಲ ಸ್ಥಳೀಯಾಡಳಿತ ಅಧಿಕಾರಿಗಳು ಸಹಕಾರ ನೀಡಬೇಕೆಂದು ಸೂಚನೆ ನೀಡಿದ್ದು ಹಾಗೆಯೇ ಜನರಿಗೆ ನೀರನ್ನು ಒದಗಿಸುವುದು ಸೇರಿದಂತೆ ಅಗತ್ಯವಿದ್ದಾಗ ಫೈರ್ ಎಂಜಿನ್​ಗಳು, ಪಂಪ್​ಗಳು ಸೇರಿದಂತ ತುರ್ತು ವ್ಯವಸ್ಥೆಗಳು ಅಲರ್ಟ್​ ಆಗಿರುವಂತೆ ಆದೇಶಿಸಲಾಗಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್​ ಉಗ್ರ ನೆಲೆಗಳ ಮೇಲೆ ಭಾರತದ ವಾಯುಪಡೆ ದಾಳಿ ನಡೆಸಿರೋ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಇನ್ನಷ್ಟು ಬಿಗಡಾಯಿಸಿದೆ. ಪಾಪಿ ಪಾಕ್​ ಪದೇ ಪದೇ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದು, ಭಾರತದ ದಾಳಿಗೆ ಮುಖಭಂಗ ಅಸನುಭವಿಸಿ ಹಿಂದಿರುಗ್ತಾ ಇದೆ. ಈಗಾಗಲೇ ಪಾಕ್​ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಇತ್ತ ಭಾರತದಲ್ಲಿ ಪ್ರಧಾನಿ ಮೋದಿ ಸೇನಾ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here