Home ಸಿನಿ ಪವರ್ ರಿಜಿಸ್ಟರ್ ಆಯ್ತು 'ಎಲ್ಲಿದ್ದೀಯಪ್ಪಾ' ಟೈಟಲ್..! 'ನಿಖಿಲ್​ ಎಲ್ಲಿದ್ದೀಯಪ್ಪಾ' ಕಥೆ?

ರಿಜಿಸ್ಟರ್ ಆಯ್ತು ‘ಎಲ್ಲಿದ್ದೀಯಪ್ಪಾ’ ಟೈಟಲ್..! ‘ನಿಖಿಲ್​ ಎಲ್ಲಿದ್ದೀಯಪ್ಪಾ’ ಕಥೆ?

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಿದ್ದಂತೆ ಸಖತ್ ಟ್ರೋಲ್ ಆದ ಡೈಲಾಗ್ ‘ನಿಖಿಲ್ ಎಲ್ಲಿದ್ದೀಯಪ್ಪಾ’? ಅದೇ ಹೆಸ್ರಲ್ಲಿ ಸಿನಿಮಾ ಮಾಡೋ ಚರ್ಚೆಯೂ ನಡೀತಾ ಇದೆ. ಈ ಮಧ್ಯೆ ‘ಎಲ್ಲಿದ್ದೀಯಪ್ಪಾ’ ಟೈಟಲ್ ರಿಜಿಸ್ಟರ್ ಆಗಿದೆ. ನಿಖಿಲ್ ಎಲ್ಲಿದ್ದೀಯಪ್ಪಾ ಮೂವಿ ಬರುತ್ತೋ ಇಲ್ವೋ.. ‘ಎಲ್ಲಿದ್ದೀಯಪ್ಪಾ’? ಮೂವಿ ಬರೋದು ಕನ್ಫರ್ಮ್ ಆಗಿದೆ. ಈ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.
ನಿಖಿಲ್ ಎಲ್ಲಿದ್ದೀಯಪ್ಪಾ… ಸಿಎಂ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಅವರ ಚೊಚ್ಚಲ ಸಿನಿಮಾ ‘ಜಾಗ್ವಾರ್’ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕೂಗಿ ಕರೆದಿದ್ದು ಹೀಗೆ..! ಅಂದು ಕುಮಾರಸ್ವಾಮಿ ಅವರು ‘ನಿಖಿಲ್ ಎಲ್ಲಿದ್ದೀಯಪ್ಪಾ’ ಅಂತ ಕರೆದಿದ್ದು ಲೋಕಸಭಾ ಚುನಾವಣಾ ಕಣಕ್ಕೆ ನಿಖಿಲ್ ಇಳಿಯುತ್ತಿದ್ದಂತೆ ಸಖತ್ ಸೌಂಡು ಮಾಡ್ತು. ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಯ್ತು… ಆಮೇಲೆ ಇದೇ ಟೈಟಲ್​ನಲ್ಲಿ ಸಿನಿಮಾ ಮಾಡೋ ಚರ್ಚೆಯೂ ನಡೆದಿದೆ… ಇದೀಗ ‘ಎಲ್ಲಿದ್ದೀಯಪ್ಪಾ’ ಸಿನಿಮಾನ ರೆಡಿಯಾಗ್ತಾ ಇದೆ.
ಹೌದು, ಫಿಲ್ಮ್​ ಚೇಂಬರ್​ನಲ್ಲಿ ‘ಎಲ್ಲಿದ್ದೀಯಪ್ಪಾ’ ಟೈಟಲ್ ರಿಜಿಸ್ಟರ್ ಆಗಿದೆ. ಪ್ರೊಡ್ಯೂಸರ್ ಎ.ಗಣೇಶ್ ಅವರು ಎಲ್ಲಿದ್ದೀಯಪ್ಪಾ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಸಿನಿಮಾ ಟೈಟಲ್​ ಅನ್ನು ರಿಜಿಸ್ಟರ್ ಮಾಡಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದ್ದು, ಕಲಾವಿದರ ಹುಡುಕಾಟ ನಡೆಯುತ್ತಿದೆ ಎನ್ನಲಾಗಿದೆ.
”ಇನ್ನು ಪುಟ್ಟರಾಜು ಅವರು ‘ನಿಖಿಲ್ ಎಲ್ಲಿದ್ದೀಯಪ್ಪಾ’ ಅನ್ನೋ ಟೈಟಲ್​ನಲ್ಲಿ ಸಿನಿಮಾ ಮಾಡೋದಾಗಿ ಸಭೆಯಲ್ಲಿ ಹೇಳಿದ್ದನ್ನು ಮೀಡಿಯಾಗಳಲ್ಲಿ ನೋಡಿದ್ದೀನಿ. ನಾನು ಎಲ್ಲಿದ್ದೀಯಪ್ಪಾ ಟೈಟಲ್ ರಿಜಿಸ್ಟರ್ ಮಾಡಿಸಿದ್ದು, ಈ ಎಲ್ಲಿದ್ದೀಯಪ್ಪಾ ಶೀರ್ಷಿಕೆಗೆ ಹಿಂದೆ- ಮುಂದೆ ಯಾವ್ದೇ ಪದ ಸೇರಿಸಿ ಹೊಸ ಟೈಟಲ್ ಕೊಡಬಾರದು” ಅಂತ ಗಣೇಶ್ ಅವರಿ ಫಿಲ್ಮ್​ ಚೇಂಬರ್ ಬಳಿ ಮನವಿ ಮಾಡಿದ್ದಾರೆ.
ಒಟ್ನಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಅನ್ನೋ ಸಿನಿಮಾ ಟೈಟಲ್ ಗಾಗಿ ಪೈಪೋಟಿ ಇದ್ದು. ಈ ನಡುವೆ ಬರೀ ಎಲ್ಲಿದ್ದೀಯಪ್ಪಾ ಅನ್ನೋ ಟೈಟಲ್ ರಿಜಿಸ್ಟರ್ ಆಗಿದ್ದು.. ಫಿಲ್ಮ್​ ಚೇಂಬರ್ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಟೈಟಲ್ ಅನ್ನು ಬೇರೆ ಚಿತ್ರತಂಡಕ್ಕೆ ನೀಡುತ್ತಾ ಅನ್ನೋದು ಕುತೂಹಲ. 

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments