ಬ್ರಿಟನ್: ನೀವು ಸೋಶಿಯಲ್ ಮೀಡಿಯಾದಲ್ಲಿ ನಿಸ್ಸೀಮರಾಗಿದ್ದರೆ ನಿಮಗೊಂದು ಸಿಹಿಸುದ್ದಿ ಇಲ್ಲಿದೆ. ಸೋಶಿಯಲ್ ಮೀಡಿಯಾಕ್ಕೆ ಸಂಬಂಧಪಟ್ಟಂತೆ ಜಾಬ್ ಓಪನಿಂಗ್ ಇದೆ. ಇದರ ಸಂಬಳ ಎಷ್ಟು ಗೊತ್ತಾ? ತಿಂಗಳಿಗೆ ಲಕ್ಷಗಟ್ಟಲೆ ದುಡಿಯಬಹುದು. ಇದು ರಾಜಮನೆತನದಲ್ಲಿ ಕೆಲಸ ಮಾಡೋಕೆ ಉತ್ತಮ ಅವಕಾಶ.ಇಲ್ಲಿ ರಾಣಿ ಎಲಿಜಬೆತ್ ಸೋಶಿಯಲ್ ಮೀಡಿಯಾ ಅಕೌಂಟನ್ನು ಹ್ಯಾಂಡಲ್ ಮಾಡೋದು ಅಷ್ಟೇ ಕೆಲಸ.
ಸೋಶಿಯಲ್ ಮೀಡಿಯಾದಲ್ಲಿ ರಾಣಿಯ ಅಕೌಂಟ್ಗಳನ್ನು ಹ್ಯಾಂಡಲ್ ಮಾಡೋಕೆ ಡಿಜಿಟಲ್ ಮ್ಯಾನೇಜ್ಮೆಂಟ್ಗೆ ಹೊಸ ಮುಖ್ಯಸ್ಥನ ಹುಡುಕಾಟದಲ್ಲಿದ್ದೀವಿ ಅಂತ ಪೋಸ್ಟ್ ಮಾಡಿದ್ದಾರೆ. ಪ್ರಪಂಚದಾದ್ಯಂತ ಜನರ ಜೊತೆ ಕನೆಕ್ಟ್ ಆಗಿ ರಾಜಮನೆತನ ಹಾಗೂ ರಾಣಿ ಮಾಡ್ತಿರೋ ಕೆಲಸಗಳ ಬಗ್ಗೆ ಮಾಹಿತಿ ನೀಡಬೇಕು. ಅಷ್ಟೆ ಅಲ್ಲದೇ ಜನರ ಜೊತೆ ಉತ್ತಮ ಸಂಪರ್ಕ ಸಾಧಿಸುವಂತೆ ನೋಡಿಕೊಳ್ಳೋದು ಡಿಜಿಟಲ್ ಮ್ಯಾನೇಜ್ಮೆಂಟ್ ಮುಖ್ಯಸ್ಥನ ಜಾಬ್ ಆಗಿದೆ.
ಇನ್ನು ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡುವ ಕೆಲಸಕ್ಕೆ ಸಂಭಾವನೆ ಕೇಳಿದ್ರೆ ನೀವು ಆಶ್ಚರ್ಯಪಡೋದು ಖಂಡಿತಾ. ವರ್ಷಕ್ಕೆ 45,000 ಪೌಂಡ್ನಿಂದ 50,000 ಪೌಂಡ್. ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಹೇಳೋದಾದ್ರೆ ಸುಮಾರು 42,38,715 ರೂಪಾಯಿಯಿಂದ 47,09,684 ರೂಪಾಯಿಗಳು. ಇದರಂತೆ ತಿಂಗಳಿಗೆ ಕಮ್ಮಿ ಅಂದ್ರೂ 3,92,000 ರೂಪಾಯಿ. ಬರೀ ಒಂದು ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡೋದಕ್ಕೂ ಇಷ್ಟೊಂದು ಸಂಭಾವನೆ ಸಿಗುತ್ತಾ ಅಂತ ಯೋಚ್ನೆ ಮಾಡ್ತಿದ್ದೀರಾ? ಹೌದು ಆಶ್ಚರ್ಯವಾದ್ರೂ ಇದು ನಿಜ. ವರ್ಷಕ್ಕೆ ಲಕ್ಷಗಟ್ಟಲೆ ಸಂಬಳ ಪಡೆಯಬೇಕಾದ್ರೆ ನೀವು ಜಸ್ಟ್ ವಾರಕ್ಕೆ 37.5 ಗಂಟೆ ಕೆಲಸ ಮಾಡಿದ್ರೆ ಸಾಕು. ಸೋಮವಾರದಿಂದ ಶುಕ್ರವಾರದವರೆಗೆ ಕೆಲಸ ಇದ್ರೆ, ವಾರದ ಇನ್ನೆರಡು ದಿನ ರಜೆ ಇರುತ್ತೆ. ಈ ಕೆಲಸಕ್ಕೆ ಅಪ್ಲೈ ಮಾಡೋಕೆ ಇದೇ ತಿಂಗಳು 24 ಕೊನೆಯ ದಿನ, ಹಾಗೂ ಶಾರ್ಟ್ಲಿಸ್ಟ್ ಆದ ಕ್ಯಾಂಡಿಡೇಟ್ಗಳನ್ನು 2020 ರ ಜನವರಿಯಲ್ಲಿ ಸಂದರ್ಶನಕ್ಕೆ ಕರೆಯುತ್ತಾರೆ. ಇನ್ನೂ ಏನು ಯೋಚ್ನೆ ಮಾಡ್ತಿದ್ದೀರಾ ?ನೀವು ಸೋಶಿಯಲ್ ಮೀಡಿಯಾದಲ್ಲಿ ನಿಸ್ಸೀಮರಾಗಿದ್ರೆ, ರಾಜಮನೆತನದಲ್ಲಿ ಕೆಲಸ ಮಾಡುವ ಇಚ್ಛೆ ನಿಮಗಿದ್ರೆ ಇದೊಂದು ಸುವರ್ಣಾವಕಾಶ. ಈಗಲೇ ಜಾಬ್ಗೆ ಅಪ್ಲೈ ಮಾಡಿ, ಕೈತುಂಬ ಸಂಬಳ ಪಡೆಯಿರಿ.