‘ಅದ್ಭುತ’ – ಮೋದಿ ಸುದ್ದಿಗೋಷ್ಠಿ ಬಗ್ಗೆ ರಾಹುಲ್​ ವ್ಯಂಗ್ಯ..!

0
214

ನವದೆಹಲಿ: ಅದ್ಭುತ ಸುದ್ದಿಗೋಷ್ಠಿ. ಮುಂದಿನ ಬಾರಿ ಅಮಿತ್​ ಶಾ ನಿಮಗೆ ಒಂದೆರಡರು ಪ್ರಶ್ನೆಗಳಿಗೆ ಉತ್ತರಿಸುವ ಅವಕಾಶ ನೀಡಬಹುದು ಅಂತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಸುದ್ದಿಗೋಷ್ಠಿ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ಶುಕ್ರವಾರ ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಬಗ್ಗೆ ಪ್ರತಿಕ್ರಿಯಿಸಿ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸದಿರುವುದಕ್ಕೆ ರಾಹುಲ್ ಗಾಂಧಿ ಮೋದಿಯವರನ್ನು ಟೀಕಿಸಿದ್ದಾರೆ. ಅಧಿಕಾರಕ್ಕೆ ಬಂದು 5 ವರ್ಷಗಳಾದರೂ ಇದೇ ಮೊದಲಬಾರಿ ಸುದ್ದಿಗೋಷ್ಠಿ ನಡೆಸಿದರೂ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸದಿರೋ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. “ಶುಭಾಶಯಗಳು ಮೋದಿಜೀ.. ಅದ್ಭುತ ಸುದ್ದಿಗೋಷ್ಠಿ. ಮುಂದಿನ ಬಾರಿ ಅಮಿತ್​ ಶಾ ಇನ್ನೆರಡು ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ನೀಡಬಹುದು. ಚೆನ್ನಾಗಿ ಮಾಡಿದ್ದೀರಿ” ಅಂತ ಟ್ವೀಟ್ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದರು.

LEAVE A REPLY

Please enter your comment!
Please enter your name here