ಬೆಂಗಳೂರು : ಹಿಜಾಬ್, ಹಲಾಲ್ ಕಟ್, ಆಜಾನ್ ವಿವಾದದ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದ ಶುರುವಾಗಿದೆ.
ನಗರದ ಕ್ಲಾರೆನ್ಸ್ ಶಾಲೆಯಲ್ಲಿ ಕ್ರೈಸ್ತ ಧರ್ಮದ ಹೇರಿಕೆ ಆರೋಪ ಕೇಳಿ ಬಂದಿದ್ದು ಶಾಲಾ ಆಡಳಿತ ಮಂಡಳಿ ನಿರ್ಧಾರದ ವಿರುದ್ದ ಹಿಂದೂ ಜನಜಾಗೃತಿ ಸಮಿತಿ ಸಿಡಿದೆದ್ದಿದೆ. ಹಿಂದೂ ಪರ ಸಂಘಟನೆಗಳು ಈಗಾಗಲೇ ದೂರವಾಣಿ ಮೂಲಕ ಶಿಕ್ಷಣ ಸಚಿವರಿಗೆ ಈ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ಮತ್ತು ರಿಚರ್ಡ್ ಟೌನ್ನಲ್ಲಿರುವ ಕ್ಲಾರೆನ್ಸ್ ಹೈಸ್ಕೂಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ರನ್ನ ಭೇಟಿ ಮಾಡಿ ಬೈಬಲ್ ಕಡ್ಡಾಯ ಪರಿಶೀಲನೆ ಮಾಡುವಂತೆ ಒತ್ತಾಯಿಸಿದ್ದು, ಬಿಇಓ ಹಾಗೂ ಅಧಿಕಾರಿಗಳಿಂದ ಇಂದು ಕ್ಲಾರೆಸ್ಟ್ ಶಾಲೆಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಪಠ್ಯ ಪರಿಶೀಲಿಸಿ, ಬೈಬಲ್ ಇದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಯಾವುದೇ ಧರ್ಮದ ಬಗ್ಗೆ ಪಾಠ-ಪ್ರವಚನ ಮಾಡುವಂತಿಲ್ಲ. ಪಠ್ಯದಲ್ಲಿ ಧರ್ಮದ ಒಂದು ಭಾಗವನ್ನು ಇಡಬಹುದು ಅಷ್ಟೆ. ಆದ್ರೆ ಬೈಬಲ್ ಓದುವುದನ್ನು ಕಡ್ಡಾಯಗೊಳಿಸಿದರೆ ಪರಿಶೀಲಿಸಿ ಕ್ರಮ ಕೈಗೊಂಡು & ಕ್ರಮ ಜರುಗಿಸೋದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಈ ಶಾಲೆ ಕೇವಲ ಉದಾಹರಣೆ ಅಷ್ಟೆ, ಬಹುತೇಕ ಕ್ರೈಸ್ತ ಶಾಲೆಗಳು ಇದೇ ರೀತಿ ಅನುಸರಿಸುತ್ತಿದೆ ಎಂದು ಹಿಂದೂಪರ ಸಂಘಟನೆಗಳು ಗಂಭೀರ ಆರೋಪ ಮಾಡಿದ್ದಾರೆ.