ಮಲೆನಾಡಿಗೆ ಮತ್ತೊಂದು ಆತಂಕ: 2.2 ರಷ್ಟು ತೀವ್ರತೆಯಲ್ಲಿ ಭೂಕಂಪ

0
207

ಶಿವಮೊಗ್ಗ: ಮಲೆನಾಡು ಭಾಗದ ಜನರಲ್ಲಿ ಭೂಕಂಪ ಹೊಸ ಆತಂಕವನ್ನು ಸೃಷ್ಟಿಮಾಡಿದೆ. ಕಳೆದ ತಿಂಗಳು ವರಾಹಿ ಜಲವಿದ್ಯುತ್ ಯೋಜನೆಗಾಗಿ ನಿರ್ಮಾಣ ಮಾಡಿದ್ದ ಮಾಣಿ ಜಲಾಶಯದ ಹಿನ್ನೀರು ವ್ಯಾಪ್ತಿಯ ಗ್ರಾಮಗಳಲ್ಲಿ ಭೂಕಂಪ ಅನುಭವವಾಗಿದೆ. ರೆಕ್ಟರ್ ಮಾಪನದಲ್ಲಿ 2.2 ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ.

ಜಿಲ್ಲಾಡಳಿತ ಈ ಕುರಿತು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದರೂ, ಮತ್ತೊಂದು ಕಡೆ ಪರಿಸರವಾದಿಗಳು ಮುಂದೊಂದು ದಿನ ಗಂಡಾಂತರ ಕಾದಿದೆ ಎಂದು ಹೇಳುತ್ತಿದ್ದಾರೆ. ರಾಜ್ಯದ ಸೂಕ್ಷ್ಮ ತಾಣಗಳಲ್ಲೊಂದಾದ ಯಡೂರು ಸಮೀಪದ ವಾರಾಹಿ ಯೋಜನಾ ಪ್ರದೇಶದಲ್ಲಿ ಮಾಣಿ ಜಲವಿದ್ಯುತ್ ಘಟಕ, ಪಿಕಪ್ ಡ್ಯಾಂ ಸೇರಿದಂತೆ ವಾರಾಹಿ ಭೂವಿದ್ಯುದಾಗಾರದ ಪವರ್ ಹೌಸ್ ಕೂಡ ಇರುವುದರಿಂದ ಭೂಕಂಪ ಜನರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ.

ಪಶ್ಚಿಮಘಟ್ಟ ಪ್ರದೇಶವನ್ನು ಗಣಿಗಾರಿಕೆ, ಮರಗಳ ಸಂಪನ್ಮೂಲ ಸೇರಿ ವ್ಯಾವಹಾರಿಕವಾಗಿ ನೋಡುವುದನ್ನು ಬಿಟ್ಟು ಪರಿಸರದ ನಿಟ್ಟಿನಲ್ಲಿಯೂ ನೋಡಬೇಕಾಗಿದೆ. ಲಿಂಗನಮಕ್ಕಿ, ತಳಕಳಲೆ, ಚಕ್ರಾ, ಸಾವೆಹಕ್ಲು, ವರಾಹಿ, ಮಾಣಿ ಆಣೆಕಟ್ಟುಗಳಲ್ಲಿ, ನೀರಿನ ಶೇಖರಣೆಯಿಂದಾಗಿ ಈ ಭಾಗದ ಭೂ ಪ್ರದೇಶದ ಮೇಲೆ ಹೆಚ್ಚು ಒತ್ತಡವಿದ್ದು ಇದೂ ಕೂಡ ಅಸಮತೋಲನಕ್ಕೆ ಕಾರಣ ಎಂಬುದು ಪರಿಸರ ತಜ್ಞ ಬಿ.ಎಂ. ಕುಮಾರಸ್ವಾಮಿ ಅಭಿಪ್ರಾಯ.

LEAVE A REPLY

Please enter your comment!
Please enter your name here