Saturday, May 21, 2022
Powertv Logo
Homeರಾಜ್ಯಸದ್ದಿಲ್ಲದೇ ಸದ್ದು ಮಾಡುತ್ತಿವೆ ಇ-ವಾಹನಗಳು..!

ಸದ್ದಿಲ್ಲದೇ ಸದ್ದು ಮಾಡುತ್ತಿವೆ ಇ-ವಾಹನಗಳು..!

ಬೆಂಗಳೂರು: ಭಾರತವು ವಿಶ್ವದ ನಾಲ್ಕನೇ ಅತೀ ದೊಡ್ಡ ವಾಹನಗಳ ಮಾರುಕಟ್ಟೆಯಾಗಿದ್ದು, ಇಲ್ಲಿ ವಾಹನಗಳಿಗೆ ಭಾರೀ ಬೇಡಿಕೆ ಇದೆ. ಆದ್ರೆ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಜಿಗಿಯುತ್ತಿರುವ ಕಾರಣ ಬ್ಯಾಟರಿ ಚಾಲಿತ ವಾಹನಗಳ ಮೊರೆಹೋಗ್ತಿದ್ದಾರೆ. ಇ-ವೆಹಿಕಲ್​ಗಳ ಖರೀದಿಗೆ ಸರ್ಕಾರ ಕೂಡ ಉತ್ತೇಜನ ನೀಡುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ನೋಂದಣಿ ಶುಲ್ಕಕ್ಕೆ ವಿನಾಯಿತಿ ನೀಡಿದೆ.

ಇ-ಕಾರಿಗಿಂತ ಇ-ಸ್ಕೂಟರ್​ಗಳು ಜನರನ್ನ ಹೆಚ್ಚು ಹೆಚ್ಚು ಆಕರ್ಷಿಸುತ್ತಿವೆ. ಆಧ್ಯಯನವೊಂದರ ಪ್ರಕಾರ, ಬೆಂಗಳೂರಲ್ಲಿ 2019 ಹಾಗೂ 2021ರ ನಡುವೆ ಒಟ್ಟು 23 ಸಾವಿರದ 570 ಇ-ಸ್ಕೂಟರ್​​ಗಳು ನೋಂದಣಿ ಆಗಿವೆ. ಇ-ಕಾರುಗಳಿಗೆ ಹೋಲಿಸಿದರೆ ಶೇ. 85ರಷ್ಟು ಇ- ಸ್ಕೂಟರ್​ಗಳು ಮಾರಾಟವಾಗಿವೆ. ಕಳೆದ ಎರಡು ವರ್ಷಗಳಲ್ಲಿ ಕೇವಲ 2 ಸಾವಿರದ 141 ಕಾರುಗಳು ಮಾತ್ರ ರಿಜಿಸ್ಟ್ರರ್ ಆಗಿವೆ.

ಬ್ಯಾಟರಿ ಚಾಲಿತ ವಾಹನಗಳು ಪರಿಸರ ಸ್ನೇಹಿ ಆಗಿದ್ದು, ವಾಯು ಮಾಲಿನ್ಯ ತಡೆಗಟ್ಟುವುದಕ್ಕೆ ಸಹಕಾರಿ ಆಗುತ್ತಿದೆ. ವಿದ್ಯುತ್​ ಸಮಸ್ಯೆಯಿಂದ ಎಲೆಕ್ಟ್ರಿಕ್​ ವಾಹನಗಳು ದೂರ ಪ್ರಯಾಣಕ್ಕೆ ಯೋಗ್ಯವಲ್ಲ. ಹತ್ತಿರದ ಪ್ರಯಾಣಕ್ಕೆ ಅನುಕೂಲಕರವಾಗಿವೆ. ಡೀಸೆಲ್​​-ಪೆಟ್ರೋಲ್​​ ಬೆಲೆ ಏರಿಕೆ ಬಿಸಿಯಿಂದ ಪಾರಾಗಲು ಉತ್ತಮ ವಾಹನವಾಗಿದೆ.

ವಿದ್ಯುತ್ ಚಾಲಿತ ವಾಹನಗಳ ಮೇಲೆ ಜನರಿಗಿರುವ ಆಸಕ್ತಿ ನೋಡಿದ್ರೆ ಮುಂದೆ ಬೆಂಗ್ಳೂರು ಸೇರಿ ದೇಶದೆಲ್ಲೆಡೆ ಇ- ವಾಹನಗಳ ದರ್ಬಾರು ಶುರುವಾಗುವ ಲಕ್ಷಣ ಕಂಡುಬರ್ತಿದೆ. ಅಲ್ಲದೆ, ಇಂಥ ಆವಿಷ್ಕಾರವನ್ನ ಬಳಸುವುದು ಪ್ರಸ್ತುತ ಪರಿಸ್ಥಿತಿಗೆ ಅನಿವಾರ್ಯವಾಗಿದ್ದು, ಇದಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿರುವುದು ಗಮನಾರ್ಹ ವಿಷಯವಾಗಿದೆ.

- Advertisment -

Most Popular

Recent Comments