Home ಸಿನಿ ಪವರ್ 50ರ ಸಿನಿ ಜರ್ನಿ ಸಂಭ್ರಮದಲ್ಲಿ 'ಪ್ರಚಂಡ ಕುಳ್ಳ' - ಅಂದು ರಾಜಣ್ಣ, ಇಂದು ಶಿವಣ್ಣ

50ರ ಸಿನಿ ಜರ್ನಿ ಸಂಭ್ರಮದಲ್ಲಿ ‘ಪ್ರಚಂಡ ಕುಳ್ಳ’ – ಅಂದು ರಾಜಣ್ಣ, ಇಂದು ಶಿವಣ್ಣ

ದ್ವಾರಕೀಶ್ .. ಸ್ಯಾಂಡಲ್​ವುಡ್​ನ ‘ಪ್ರಚಂಡ ಕುಳ್ಳ’ ಕನ್ನಡಿಗರ ಪ್ರೀತಿಯ ನಟ, ನಿರ್ದೇಶಕ, ನಿರ್ಮಾಪಕ. ಚಂದನವನಕ್ಕೆ ಇವರು ನೀಡಿದ ಕೊಡುಗೆ ಅಪಾರ. ದ್ವಾರಕೀಶ್  ಸಿನಿ ಜರ್ನಿಗೀಗ  50ನೇ ವರ್ಷದ ಸಂಭ್ರಮ. ದ್ವಾರಕೀಶ್ ಚೊಚ್ಚಲ ಸಿನಿಮಾ ನಿರ್ಮಿಸಿ ಈ ವರ್ಷಕ್ಕೆ ಬರೋಬ್ಬರಿ 50 ವರ್ಷ. ಈ ಸುದೀರ್ಘ ಜರ್ನಿಯ ಬಗ್ಗೆ ದ್ವಾರಕೀಶ್ ಕೂಡ ತುಂಬಾ ಖುಷಿಯಾಗಿದ್ದಾರೆ.

ಹೌದು.. ಅದು 1969 ಮೇಯರ್ ಮುತ್ತಣ್ಣ ಸಿನಿಮಾ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಡಾ.ರಾಜ್​ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಎವರ್​ ಗ್ರೀನ್ ಮೂವಿ. ಇವತ್ತು ಮತ್ತೆ ರೀ ರಿಲಿಸ್ ಆದ್ರೂ ಪಕ್ಕಾ 100 ಡೇಟ್ ಓಡುತ್ತೆ..! ಈ ಸೂಪರ್ ಹಿಟ್ ಮೂವಿಯನ್ನು ನಿರ್ಮಿಸಿದ್ದು ಕನ್ನಡಿಗರ ಪ್ರೀತಿಯ ಕುಳ್ಳ ದ್ವಾರಕೀಶ್ ಅವರು. ಇದು ದ್ವಾರಕೀಶ್ ನಿರ್ಮಾಣದ ಚೊಚ್ಚಲ ಚಿತ್ರ.

ಮೇಯರ್ ಮುತ್ತಣ್ಣ ತೆರೆಕಂಡು ಈ ವರ್ಷಕ್ಕೆ 50 ವರ್ಷ ಆಗುತ್ತೆ. ಅಂತೆಯೇ ದ್ವಾರಕೀಶ್ ಸಿನಿ ಪಯಣಕ್ಕೂ  50 ವರ್ಷದ ಹಬ್ಬ..! ಈ ಸುದೀರ್ಘ ಪಯಣದಲ್ಲಿ ದ್ವಾರಕೀಶ್ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಗೆದ್ದಿದ್ದಾರೆ… ಸೋತಿದ್ದಾರೆ.. ಸೋತು ಮತ್ತೆ ಗೆದ್ದಿದ್ದಾರೆ. ಭಾರತದಿಂದಾಚೆಗೆ ಅಂದರೆ ವಿದೇಶದಲ್ಲಿ ಕನ್ನಡ ಸಿನಿಮಾ ಮಾಡಿದ ಮೊಟ್ಟ ಮೊದಲ ಸ್ಯಾಂಡಲ್​ವುಡ್​ ನಿರ್ಮಾಪಕ ಕೂಡ ನಮ್ಮ ಈ ದ್ವಾರಕೀಶ್ ​.  1978ರಲ್ಲಿ ಸಿಂಗಾಪುರದಲ್ಲಿ ರಾಜಕುಳ್ಳ ಸಿನಿಮಾವನ್ನು ದ್ವಾರಕೀಶ್ ನಿರ್ಮಿಸಿದ್ದರು. ಆ ಸಿನಿಮಾ ವಿದೇಶದಲ್ಲಿ ಚಿತ್ರೀಕರಣವಾದ ಮೊದಲ ಕನ್ನಡ ಸಿನಿಮಾ.

ಅದೇನೇ ಇರಲಿ. ದ್ವಾರಕೀಶ್ ನಟ, ನಿರ್ದೇಶಕ, ನಿರ್ಮಾಪಕರಾಗಿ ಸಾಕಷ್ಟು ಹೆಸರು, ಜನಪ್ರಿಯತೆಗಳಿಸಿದ್ದಾರೆ. ಚಿತ್ರರಂಗದಲ್ಲಿ 50 ವರ್ಷದ ಸುಂದರ ಪಯಣ ಅವರದ್ದು.  50ನೇ ವರ್ಷದ ಸಡಗರಲ್ಲಿ ದ್ವಾರಕೀಶ್ ಆಯುಷ್​ಮಾನ್ ಭವ ಎಂಬ ಸಿನಿಮಾ ನಿರ್ಮಿಸಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾ ನಾಯಕ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್.

ದ್ವಾರಕೀಶ್ ನಿರ್ಮಾಣದ ಮೊದಲ ಮೇಯರ್ ಮುತ್ತಣ್ಣ ಸಿನಿಮಾದ ನಾಯಕ ವರನಟ ಡಾ. ರಾಜ್​ಕುಮಾರ್. ಇಂದು 50ನೇ ವರ್ಷದ ಪಯಣದ ಸಂಭ್ರಮದಲ್ಲಿ ನಿರ್ಮಾಣ ಮಾಡಿರುವ ಆಯುಷ್​ಮಾನ್ ಭವ ಸಿನಿಮಾ ನಾಯಕ ರಾಜ್​ ಅವರ ಪುತ್ರ ಶಿವರಾಜ್​ಕುಮಾರ್. ಈ ಬಗ್ಗೆ ಸಂತಸದಿಂದ ಮಾತಾಡಿರೋ ದ್ವಾರಕೇಶ್ ಇದು ಕಾಕತಾಳಿಯ… ರಾಘವೇಂದ್ರ ಸ್ವಾಮಿಯ ಆಶೀರ್ವಾದ. ಹೀಗಾಗಿ 50ವರ್ಷಕ್ಕೆ ಸಿಂಕ್ ಆಗಿದೆ. ನಾನು ಹೀಗೇ ಆಗಬೇಕು ಅಂತ ಶಿವರಾಜ್​ಕುಮಾರ್ ಅವರ ಸಿನಿಮಾ ನಿರ್ಮಾಣ ಮಾಡೋ ಪ್ಲಾನ್ ಮಾಡಿಕೊಂಡಿದ್ದಲ್ಲ ಅಂತ ಹೇಳಿದ್ದಾರೆ.

ಆಯುಷ್​ ಮನ್ ಭವ ಸಿನಿಮಾ ಪ್ರೆಸ್ ಮೀಟ್​ನಲ್ಲಿ ಮಾತನಾಡಿದ ಅವರು, ರಾಜ್​ಕುಮಾರ್,. ವಿಷ್ಣುವರ್ಧನ್, ಅಂಬರೀಶ್, ಶಂಕರ್​ ನಾಗ್​, ರಜನಿಕಾಂತ್ ಅವರೊಡನೆಯ ಸ್ನೇಹವನ್ನು ಸ್ಮರಿಸಿಕೊಂಡ್ರು. ತನ್ನ ಈ ಸುಧೀರ್ಘ ಯಶಸ್ವಿ ಪಯಣ  ತನ್ನೊಬ್ಬನ ಸಾಧನೆಯಲ್ಲ ನನ್ನ ಜೊತೆಗಿದ್ದ ಎಲ್ಲರ ಸಹಕರಾದಿಂದ ಇದು ಸಾಧ್ಯವಾಯ್ತು ಅಂತ ಜೊತೆಗಿದ್ದವರಿಗೆಲ್ಲಾ ಧನ್ಯವಾದ ಹೇಳಿದ್ರು.

ಇನ್ನು ಆಯುಷ್ಮಾನ್ ಭವ ಸಿನಿಮಾವನ್ನು ಆ್ಯಕ್ಷನ್ ಕಟ್ ಹೇಳಿರೋದು ಡೈರೆಕ್ಟರ್ ಪಿ.ವಾಸು. ಈ ಸಿನಿಮಾದಲ್ಲಿ ಶಿವಣ್ಣಗೆ ನಾಯಕಿ ರಚಿತಾ ರಾಮ್. ಸದ್ಯ ಸಿನಿಮಾದ ಪೋಸ್ಟ್​​​ ಪ್ರೊಡಕ್ಷನ್ ವರ್ಕ್ಡ್ ನಡೀತಾ ಇದ್ದು,  ನವೆಂಬರ್ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here

- Advertisment -

Most Popular

ಸಚಿನ್ ಗೆ ಸೆಡ್ಡುಹೊಡೆದ ಕನ್ನಡಿಗ ರಾಹುಲ್ ದ್ರಾವಿಡ್ !

ಕನ್ನಡಿಗ ರಾಹುಲ್ ದ್ರಾವಿಡ್ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಸೆಡ್ಡು ಹೊಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ದ್ರಾವಿಡ್ಡೇ ದಿ ಬೆಸ್ಟ್ ಅಂತ ಜನ ಮತಹಾಕಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗಿಂತ...

ಕೊರೋನಾ ಇದ್ರೂ ಕಾರ್ಖಾನೆ ಸೀಲ್​ಡೌನ್​ ಯಾಕಿಲ್ಲ? ಐಟಿಸಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ದೇವನಹಳ್ಳಿ : ಬೆಂಗಳೂರು ಹೊರವಲಯದ ಯಲಹಂಕ ತಾಲೂಕು ತರಬಹಳ್ಳಿ ಗ್ರಾಮದ ಸಮೀಪವಿರುವ ಪ್ರತಿಷ್ಠಿತ ಐಟಿಸಿ ಕಂಪನಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಐಟಿಸಿ ಕಾರ್ಖಾನೆಯಲ್ಲಿ ಸಿಗರೇಟ್ ತಯಾರಿಕೆ ಮಾಡಲಾಗುತ್ತಿದ್ದು ಈ ಕಾರ್ಖಾನೆಯಲ್ಲಿ...

ಕೊವಿಡ್ ಸೋಂಕಿತರ ಭೇಟಿ ಮಾಡಿ ಧೈರ್ಯ ತುಂಬಿದ ಸಚಿವ ಆನಂದ್ ಸಿಂಗ್ !!

ಬಳ್ಳಾರಿ : ಬಳ್ಳಾರಿಯ ದಂತ ವೈದ್ಯ ಕಾಲೇಜಿನ ಕೊವಿಡ್ ಅಸ್ಪತ್ರೆಗೆ ಉಸ್ತುವಾರಿ ಮತ್ತು ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನಿಡಿದರು. ಪಿಪಿಇ ಕಿಟ್ ಧರಿಸಿ ಐಸೋಲೇಷನ್ ವಾರ್ಡ್ ಗೆ ಭೇಟಿ ಕೊಟ್ಟ...

ಕೊರೋನಾ ಟೆಸ್ಟ್ ಗಾಗಿ ಶವ ಕೊಳೆಯಲು ಬಿಟ್ಟ ಬ್ರಹ್ಮಾವರ ಸರಕಾರಿ ಆಸ್ಪತ್ರೆ

ಉಡುಪಿ : ಕೊರೋನಾ ವಕ್ಕರಿಸಿದ ಬಳಿಕ ಮಾನವೀಯತೆ ಮರೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದು ನಿಜ ಎನ್ನುವದನ್ನು ಬ್ರಹಾವ್ಮರ ಸಮುದಾಯ ಆರೋಗ್ಯ ಕೇಂದ್ರ ಸಾಬೀತು ಮಾಡಿದೆ ಎಂದರೆ ತಪ್ಪಾಗಲಾರದು. ಕೊರೋನಾ ವಿಚಾರವಾಗಿ...