ಕೊನೆಗೂ ಮೌನ ಮುರಿದ ಬಿಜೆಪಿ ಭೀಷ್ಮ ಲಾಲ್​ ಕೃಷ್ಣ ಅಡ್ವಾಣಿ..!

0
146

ಬಿಜೆಪಿಯ ಭೀಷ್ಮ ಎಲ್​.ಕೆ ಅಡ್ವಾಣಿ ಅವರು ಕೊನೆಗೂ ಮೌನ ಮುರಿದಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಬ್ಲಾಗ್​ ಮೂಲಕ ಅಡ್ವಾಣಿ ಅಂತರಂಗ ಬಹಿರಂಗವಾಗಿದೆ.
ಅಮಿತ್‌ ಶಾ ಅಖಾಡಕ್ಕೆ ಇಳಿಯುತ್ತಿದ್ದಂತೆ ಗಾಂಧಿನಗರದ ನಂಟು ಬಿಚ್ಚಿಟ್ಟಿರುವ ಅಡ್ವಾಣಿ ಅವರು 6 ಬಾರಿ ಸತತ ಗೆಲುವು ತಂದುಕೊಟ್ಟ ಗಾಂಧಿನಗರವನ್ನು ನೆನಪು ಮಾಡಿಕೊಂಡಿದ್ದಾರೆ.
ಏಪ್ರಿಲ್​ 6ರಂದು ಬಿಜೆಪಿಯ ಸಂಸ್ಥಾಪನಾ ದಿನಾಚರಣೆಯಿದೆ. ಈ ಹಿನ್ನೆಲೆಯಲ್ಲಿ ಬ್ಲಾಗ್​ನಲ್ಲಿ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ ಬಿಜೆಪಿಯ ಹಿರಿಯ ನಾಯಕ.
‘ದೇಶ ಮೊದಲು, ಪಕ್ಷ ನಂತರ, ವಯಕ್ತಿಕ ವಿಚಾರ ಕೊನೆಗೆ. ಈ ಸಂದರ್ಭದಲ್ಲಿ ಹಿಂದಿನ ದಿನಗಳನ್ನು ಭವಿಷ್ಯವನ್ನು ನೋಡುವುದು ಅಗತ್ಯವಿದೆ. ನಮ್ಮೊಳಗೆ ನಾವು ನೋಡಿಕೊಳ್ಳುವುದು ಕೂಡ ಅಗತ್ಯವಾಗಿದೆ ಎಂದಿದ್ದಾರೆ.
ನಮಗೆಲ್ಲರಿಗೂ ಇದೊಂದು ಸುಸಂದರ್ಭವಾಗಿದ್ದು, ಬಿಜೆಪಿ ನಡೆದು ಬಂದ ದಾರಿ, ಪ್ರಸ್ತುತ ಹಾಗು ಪಕ್ಷದ ಮುಂದಿನ ಭವಿಷ್ಯವನ್ನು ಅರಿಯಬೇಕಿದೆ ಅಂತ ಹೇಳಿದ್ದಾರೆ.
ಗಾಂಧಿನಗರದ ಜನರಿಗೆ ಧನ್ಯವಾದ ತಿಳಿಸಿರೋ ಅಡ್ವಾಣಿಯವರು, 1991ರಿಂದ 6 ಬಾರಿ ನನ್ನನ್ನು ಲೋಕಸಭೆಗೆ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ತಿಳಿಸಿದ್ದಾರೆ. ನನ್ನ 14 ನೇ ವಯಸ್ಸಿನಲ್ಲಿ ಆರ್‌ಎಸ್‌ಎಸ್‌ ಸೇರಿಕೊಂಡೆ. ನನ್ನ ರಾಜಕೀಯ ಜೀವನ ಎಂದೆಂದಿಗೂ ಬೇರ್ಪಡಿಸಲಾಗದ ನಂಟಾಗಿ ಹಲವು ದಶಕಗಳ ಕಾಲ ನನ್ನ ಪಕ್ಷ ಸಹಕಾರ ಮಾಡಿದೆ ಅಂತ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here