Home ರಾಜ್ಯ ನಿಮ್ಮ ಕಾಲಿಗ್ ಬೀಳ್ತೀನಿ ಹತ್ರ ಬರ್ಬೇಡಿ : ದುನಿಯಾ ವಿಜಿ

ನಿಮ್ಮ ಕಾಲಿಗ್ ಬೀಳ್ತೀನಿ ಹತ್ರ ಬರ್ಬೇಡಿ : ದುನಿಯಾ ವಿಜಿ

ಹುಬ್ಬಳ್ಳಿ : ನಗರದಲ್ಲಿಂದು ಸಲಗ ಚಿತ್ರತಂಡದಿಂದ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ದುನಿಯಾ ವಿಜಿ ಅವರು, ಸಿನಿಮಾ ಥಿಯೇಟರ್ ಗಳ ಮೇಲೆ ಸರ್ಕಾರ ಹೇರಿರುವ ಕೋವಿಡ್ ನಿಯಮಗಳ ಬಗ್ಗೆ ದುನಿಯಾ ವಿಜಿ ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್ ನಿಯಮಗಳು ನಮಗೆ ಸಮಾಧಾನ ತಂದಿಲ್ಲ ಸಿನಿಮಾ ಮಂದಿರಗಳಿಗೆ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಸರ್ಕಾರದ ಮುಂದಿನ ನಿರ್ಧಾರ ನೋಡಿಕೊಂಡು ಸಿನಿಮಾ ರೀಲಿಸ್ ಮಾಡ್ತಿವಿ, ಸರ್ಕಾರದ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇಲ್ಲ. ಜಿಮ್ ಮತ್ತು ಸಿನಿಮಾ ಥಿಯೇಟರ್ ನಲ್ಲಿ ಮಾತ್ರ ಕೊರೋನಾ ಬರುತ್ತಾ ಎಂದು ಸರ್ಕಾರಕ್ಕೆ ದುನಿಯಾ ವಿಜಯ್ ಖಡಕ್ಕಾಗಿ ಪ್ರಶ್ನೆ ಮಾಡಿದರು. 

ರಾಜಕೀಯ ಸಮಾವೇಶಗಳಿಗೆ ಕೋರೊನಾ ಬರುವುದಿಲ್ವಾ?

ಜಿಮ್ ಮತ್ತು ಸಿನಿಮಾ ಥಿಯೇಟರ್ ನಲ್ಲಿ ಕಡಿಮೆ ಜನಾ ಇರ್ತಾರೆ. ಏಪ್ರಿಲ್ 7 ರವರೆಗೆ ಥಿಯೇಟರ್ ಗಳಲ್ಲಿ 100 % ಅವಕಾಶ ಕೊಟ್ಟಿರುವುದು ನಮಗೆ ಸಮಾಧಾನವಿಲ್ಲ. ಥಿಯೇಟರ್ ಗಳಲ್ಲಿ 100% ಪ್ರೇಕ್ಷಕರಿಗೆ ಅವಕಾಶ ಕೊಟ್ಟ ನಂತರವೆ ಸಿನಿಮಾ ರಿಲೀಸ್ ಮಾಡುತ್ತೇವೆ. ಸಿನಿಮಾದವರಿಂದಲೆ ಕೋವಿಡ್ ಬರುತ್ತಿದೆ ಎಂದು ಸರಕಾರ ಹೇಳುತ್ತಿದೆ. ಹಾಗಾಗಿ ಸೆಲ್ಪಿ‌ ಪಡೆಯಲು ಅಭಿಮಾನಿಗಳು ಹತ್ತಿರ ಬರಬೇಡಿ, ದಯವಿಟ್ಟು ಕಾಲಿಗೆ ಬೀಳ್ತಿನಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.

ನಟನಾಗಿ 14 ವರ್ಷ ಆಗಿದೆ, ಉತ್ತರ ಕರ್ನಾಟಕ ಅಂದಾಗ ಹೆಚ್ಚಿನ ಪ್ರೀತಿ. ಸಲಗ ಸಿನಿಮಾದಲ್ಲಿ ನಾನು ಮತ್ತು ಡಾಲಿ ಧನಂಜಯ ಇಬ್ಬರು ನಟರು. ಸವದತ್ತಿಯಿಂದ ಚಿತ್ರದ ಶೂಟಿಂಗ್ ಶುರು ಮಾಡಿದ್ವಿ ಎಂದರು. 

ಬಳಿಕ ಮಾತನಾಡಿದ ನಟ ಡಾಲಿ ಧನಂಜಯ್, ಸರ್ಕಾರ ಕಾನೂನು ಮಾಡುವಾಗ ಕೆಳ ಮಟ್ಟದ ಕಾರ್ಮಿಕರನ್ನು ಗಮನದಲ್ಲಿ ಇಟ್ಟುಕೊಂಡು ಕಾನೂನು ಮಾಡಬೇಕು ಅಗ ಕಾನೂನು ಪರಿಣಾಮಕಾರಿಯಾಗುತ್ತದೆ. ಸರ್ಕಾರ ಚಿತ್ರಮಂದಿರಗಳಿಗೆ ಸೀಟು ಕಡಿವಾಣ ಹಾಕುವುದು ಸರಿಯಲ್ಲ. ಯುವರತ್ನ ಚಲನಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ನನ್ನ ಕೈಯಲ್ಲಿ ಮುಂದೆ ಮೂರು ನಾಲ್ಕು ಪ್ರೊಜೆಕ್ಟ್ ಗಳಿವೆ ಎಂದರು.

LEAVE A REPLY

Please enter your comment!
Please enter your name here

- Advertisment -

Most Popular

ಸೋಂಕಿತನ ಅಂತ್ಯಕ್ರಿಯೇ ನೆರವೇರಿಸಿದ ಮುಸಲ್ಮಾನ್ ಯುವಕರು..!  

ಶಿವಮೊಗ್ಗ : ಕೊರೋನಾದಿಂದ ಸಾವನಪ್ಪಿದವನಿಗೆ, ಕುಟುಂಬಸ್ಥರು, ಮತ್ತು ನೆರೆಹೊರೆಯವರು, ಅಂತ್ಯಕ್ರಿಯೇ ಮಾಡಲು ಹಿಂಜರಿದ ಹಿನ್ನೆಲೆಯಲ್ಲಿ, ಮುಸಲ್ಮಾನ್ ಯುವಕರೇ ನಿಂತು ಅಂತ್ಯಕ್ರಿಯೇ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಶಿವಮೊಗ್ಗದ  ಶಿರಾಳಕೊಪ್ಪದಲ್ಲಿಯೇ ಈ ಘಟನೆ ನಡೆದಿದ್ದು, ಇಲ್ಲಿನ...

ಲಾಕ್ ಡೌನ್ ವೇಳೆಯೇ ಅರಣ್ಯ ಲೂಟಿಗೆ ಯತ್ನಿಸಿದ ಖದೀಮರು..!

ಶಿವಮೊಗ್ಗ : ಇತ್ತ ರಾಜ್ಯದೆಲ್ಲೆಡೆ ಲಾಕ್ ಡೌನ್ ಘೋಷಣೆಯಾಗಿದೆ. ಅದೆಷ್ಟೊ ಜನರು ಮನೆ ಸೇರಿಕೊಂಡಿದ್ದರೆ, ಮತ್ತೆ ಕೆಲವರು ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ.  ಇನ್ನೂ ಕೆಲವರು ಹೇಗಪ್ಪಾ ಲಸಿಕೆ ಪಡೆದುಕೊಳ್ಳೋದು ಎಂಬ ಯೋಚನೆಯಲ್ಲಿದ್ದಾರೆ. ಆದ್ರೆ ಇಲ್ಲಿನ...

‘ನನ್ನಿಂದ ಮನೆಯವರೆಗೂ ಸೋಂಕು ತಗುಲಿದೆ ಎಂದು ತಹಶೀಲ್ದಾರ್ ಸೂಸೈಡ್’

ಚಿಕ್ಕಮಗಳೂರು: ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೋನ ಬಂತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು...

ಮನೆ, ಮನೆಗೆ ಹಾಲು ವಿತರಣೆಗೆ ಪೊಲೀಸರ ಅಡ್ಡಿ..!  

ಶಿವಮೊಗ್ಗ: ನಗರ ಪ್ರದೇಶದ ಮನೆಮನೆಗಳಿಗೆ ಹಾಲು ಮಾರಾಟ ಮಾಡುವ ರೈತರಿಗೂ ಬಿಡದೇ ಪೊಲೀಸರು, ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.  ಹಾಲು, ತರಕಾರಿ ಮನೆಮನೆಗೆ ತೆರಳಿ ಮಾರಾಟ ಮಾಡಬಹುದು ಎಂದು ಜಿಲ್ಲಾಡಳಿತ ಸೂಚನೆ...

Recent Comments