ಸುದೀಪ್ ‘ಸಲಗ’ ಇದ್ದಂತೆ ಅಂದಿದ್ದೇಕೆ ದುನಿಯಾ ವಿಜಿ?

0
128

ಬೆಂಗಳೂರು : ನಟ ದುನಿಯಾ ವಿಜಯ್ ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ‘ಸಲಗ’ ಇದ್ದಂತೆ ಅಂದಿದ್ದಾರೆ.
ಇಂದು ಬಂಡೆ ಮಾರಮ್ಮ ದೇವಸ್ಥಾನದಲ್ಲಿ ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಸಲಗ’ದ ಮುಹೂರ್ತ ನೆರವೇರಿತು. ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್, ಸುದೀಪ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ವಿಜಿ ಅವರ ಹೊಸ ಪ್ರಯತ್ನಕ್ಕೆ ಶುಭಹಾರೈಸಿದ್ರು.
ಕಾರ್ಯಕ್ರಮದಲ್ಲಿ ಮಾತನಾಡಿದ ದುನಿಯಾ ವಿಜಿ, ‘ಇಂಡಸ್ಟ್ರಿಯಲ್ಲಿ ಸುದೀಪ್ ಅವ್ರು ದೊಡ್ಡ ಸಲಗ ಇದ್ದಂತೆ ಅಂದ್ರೆ ತಪ್ಪಲ್ಲ. ಹೊಸಬರು ಬರಬೇಕು, ಬೆಳಿಬೇಕು ಅಂತ ಅವರು ಹೇಳಿದ್ದ ಮಾತುಗಳು ಇನ್ನೂ ನೆನಪಲ್ಲಿವೆ ಎಂದರು. ಜೊತೆಗೆ ತನ್ನನ್ನು ಆಶೀರ್ವದಿಸಲು ಬಂದಿರೋ ಎಲ್ರಿಗೂ ಧನ್ಯವಾದಗಳು. ನಾನು ಹೆಚ್ಚಾಗಿ ಈ ಮಾತನಾಡಲ್ಲ. ಕೆಲಸ ಆದಮೇಲೆ ಬಂದು ಮಾತನಾಡ್ತೀನಿ ಅಂತ ಹೇಳಿದ್ರು.

LEAVE A REPLY

Please enter your comment!
Please enter your name here