Thursday, October 6, 2022
Powertv Logo
Homeಸಿನಿಮಾಸ್ಯಾಂಡಲ್​​ವುಡ್​ 'ಸಲಗ'ಗೆ 46ನೇ ಹುಟ್ಟುಹಬ್ಬದ ಸಂಭ್ರಮ ; ಜನ್ಮದಿನದ ಜೋಶ್​ನಲ್ಲಿ ವಿಜಿ ವಿವಾದ!

ಸ್ಯಾಂಡಲ್​​ವುಡ್​ ‘ಸಲಗ’ಗೆ 46ನೇ ಹುಟ್ಟುಹಬ್ಬದ ಸಂಭ್ರಮ ; ಜನ್ಮದಿನದ ಜೋಶ್​ನಲ್ಲಿ ವಿಜಿ ವಿವಾದ!

ಬೆಂಗಳೂರು : ಸ್ಯಾಂಡಲ್​​ವುಡ್ ನಟ ದುನಿಯಾ ವಿಜಯ್ ಅವರಿಗಿಂದು 46ನೇ ಹುಟ್ಟುಹಬ್ಬದ ಸಂಭ್ರಮ. ಬರ್ತ್​ಡೇ ಸೆಲೆಬ್ರೇಷನ್ ಜೋಶಲ್ಲಿ ವಿಜಿ ಹೊಸ ವಿವಾದ ಎಳೆದುಕೊಂಡಿದ್ದಾರೆ. 
ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳ ಜೊತೆ ವಿಜಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆದರೆ, ಕತ್ತಿಯಲ್ಲಿ ಕೇಕ್ ಕತ್ತರಿಸುವ ಮೂಲಕ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಸಾರ್ವಜನಿಕವಾಗಿ ಯಾವ್ದೇ ಆಯುಧಗಳನ್ನು ಬಳಸಬಾರದು ಮತ್ತು ಪ್ರದರ್ಶಿಸ ಬಾರದೆಂಬ ಕಾನೂನಿದೆ. ಐದು ಇಂಚಿಗಿಂತ ಉದ್ದದ ಕತ್ತಿಯನ್ನು ಇಟ್ಟುಕೊಂಡಿದ್ರೆ ಲೈಸೆನ್ಸ್ ಪಡೆಯಬೇಕಾಗುತ್ತೆ. ಆದ್ರೆ ಲೈಸೆನ್ಸ್ ಪಡೆಯದೆ ಇಂಥಾ ಆಯುಧಗಳನ್ನು ಇಟ್ಟುಕೊಂಡಿದ್ದರೆ ಆರ್ಮ್ಸ್​ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗುತ್ತೆ. ಸದ್ಯ ಗಿರಿನಗರ ಪೊಲೀಸರು ವಿಜಿ ಕೇಕ್ ಕಟ್ ಮಾಡಿರೋ ವಿಡಿಯೋ ಪರಿಶೀಲನೆ ನಡೆಸುತ್ತಿದ್ದು, ಆ ಕತ್ತಿ ಐದು ಇಂಚಿಗಿಂತ ಉದ್ದವಿದ್ದರೆ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

14 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments