Tuesday, January 18, 2022
Powertv Logo
Homeರಾಜ್ಯಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆ ಮಣ್ಣುಪಾಲು

ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆ ಮಣ್ಣುಪಾಲು

ಗದಗ : ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ ಬೆಳೆ ಮಣ್ಣುಪಾಲಾದ ಘಟನೆ ಗದಗ ಜಿಲ್ಲೆಯ ಕಳಸಾಪೂರ ಗ್ರಾಮದಲ್ಲಿ ನಡೆದಿದೆ.

ಸುಮಾರು 25 ಹೆಕ್ಟರ್ ನಷ್ಟು ದ್ರಾಕ್ಷಿ ಬೆಳೆ ಬೆಳೆದಿದ್ದ ಕಳಸಾಪೂರದ ರೈತ, ಬಸಯ್ಯ ಸಾಸ್ವಿಹಳ್ಳಿಮಠ. ಆದ್ರೆ ಸದ್ಯ ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಸದ್ಯ ಈ ದ್ರಾಕ್ಷಿ ಬೆಳೆಗಾರರ ಬದುಕು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೊ ಹಾಗಾಗಿದೆ. ಮಳೆಗೆ ಬೆಳೆ ಎಲ್ಲ ನೆಲಕಚ್ಚಿ ರೈತರು ಬದುಕು ಬೀದಿಗೆ ಬರೋ ಹಾಗಾಗಿದೆ.

ಹೀಗಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಜಮೀನಿಗೆ ಬಂದು ನಮ್ಮ ಪರಿಸ್ಥಿತಿ ನೋಡಲಿ ಹಾಗೂ ಸರ್ಕಾರ ದ್ರಾಕ್ಷಿ ಬೆಳೆಗಾರರತ್ತ ಗಮನಹರಿಸಬೇಕು ಅಂತ ಬೇಡಿಕೊಳ್ಳುತ್ತಿದ್ದಾರೆ.ಅಲ್ಲದೆ ಮಳೆಗೆ ಹಾನಿಯಾದ ದ್ರಾಕ್ಷಿ ಬೆಳೆಗಳಿಗೆ ಪರಿಹಾರ ನೀಡಿ ಅಂತ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಪರಿಹಾರ ಕೊಡಿ ಇಲ್ಲ ವಿಷ ಕೊಡಿ ಅಂತ ಸರ್ಕಾರದತ್ತ ಮುಖ ಮಾಡಿ ಕುಳಿತ್ತಿದ್ದಾರೆ ದ್ರಾಕ್ಷಿ ಬೆಳೆಗಾರರು.

3 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments