ದುಬೈನಲ್ಲಿ ಬಸ್​ ಆ್ಯಕ್ಸಿಡೆಂಟ್​ ; 8 ಮಂದಿ ಭಾರತೀಯರ ದುರ್ಮರಣ

0
144

ದುಬೈನಲ್ಲಿ ಸಂಭವಿಸಿದ ಬಸ್​ ಆ್ಯಕ್ಸಿಡೆಂಟ್​ನಲ್ಲಿ ಮೃತಪಟ್ಟ 17 ಮಂದಿ ಪ್ರಯಾಣಿಕರಲ್ಲಿ 8 ಮಂದಿ ಭಾರತೀಯರಾಗಿದ್ದಾರೆ ಎಂದು ತಿಳಿದು ಬಂದಿದೆ.
ಓಮನ್​ನಿಂದ ಪ್ರಯಾಣಿಸುತ್ತಿದ್ದ ಬಸ್​ ದುಬೈನಲ್ಲಿ ಅಪಘಾತಕ್ಕೀಡಾಗಿತ್ತು. ನಾನಾ ದೇಶಗಳ 31 ಮಂದಿ ಪ್ರಯಾಣಿಕರಿದ್ದರು. ಅವರುಗಳಲ್ಲಿ 17 ಮಂದಿ ಮೃತಪಟ್ಟಿದ್ದರು. ಈ 17ರಲ್ಲಿ 8 ಮಂದಿ ಭಾರತೀಯರಾಗಿದ್ದಾರೆ.
ನಿನ್ನೆ ಸಂಜೆ ದುಬೈಯ ರಶಿದಿಯಾ ಸಮೀಪ ಟ್ರಾಫಿಕ್​ ಸಿಗ್ನಲ್​ನಲ್ಲಿ ಬಸ್ ಮಗುಚಿ ಬಿದ್ದಿತ್ತು. ಘಟನೆಯಲ್ಲಿ 17 ಮಂದಿ ಸಾವನ್ನಪ್ಪಿರೋದಲ್ಲದೆ ಐವರಿಗೆ ಗಾಯಗಳಾಗಿವೆ ಅಂತ ವರದಿಯಾಗಿದೆ. 8 ಮಂದಿ ಭಾರತೀಯರು ಮೃತಪಟ್ಟಿದ್ದಾರೆ ಅಂತ ದುಬೈನ ಭಾರತೀಯ ರಾಯಭಾರಿ ಖಚಿತಪಡಿಸಿದ್ದಾರೆ. ರಾಜಗೋಪಾಲನ್, ಫೆರೋಜ್ ಖಾನ್ ಪಠಾಣ್, ರೇಶ್ಮಾ ಫೆರೊಜ್ ಖಾನ್ ಪಠಾಣ್, ದೀಪಕ್ ಕುಮಾರ್, ಜಮಾಲುದ್ದೀನ್ ಅರಕ್ಕವೀಟ್ಟಿಲ್, ಕಿರಣ್ ಜಾನ್ನಿ, ವಾಸುದೇವ್ ಹಾಗೂ ತಿಲಕ್ರಾಮ್ ಜವಾಹರ್ ಠಾಕೂರ್ ಮೃತ ಭಾರತೀಯರು ಎಂದು ಹೇಳಲಾಗಿದೆ

LEAVE A REPLY

Please enter your comment!
Please enter your name here