ಬೆಂಗಳೂರು : ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಚಂದನವನ `ಮಾದಕ’ವನ ಆಯ್ತಾ ಅನ್ನೋ ಆತಂಕ ಮನೆ ಮಾಡಿದೆ. ಕೆಲವು ಯುವ ನಟ – ನಟಿಯರು ಮಾದಕ ವ್ಯಸನಿಗಳಾಗಿದ್ದಾರೆ ಎಂಬ ಗಂಭೀರ ಆರೋಪ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ. ಇದು ಸ್ಯಾಂಡಲ್ವುಡ್ ತಲೆತಗ್ಗಿಸುವ ಸುದ್ದಿಯೇ.
ಇನ್ನು ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ತೆಗೆದುಕೊಳ್ಳುವುದಕ್ಕೆ ಕೋರ್ಡ್ ವರ್ಡ್ ಕೂಡ ಇದೆ ಅಂತ ತಿಳಿದುಬಂದಿದೆ. ಶೂಟಿಂಗ್ ವೇಳೆಯಲ್ಲಿ ಕೆಲವು ನಟ – ನಟಿಯರು ` ಡ್ರಗ್ಸ್ ಸೇವನೆಗೆ ಹೋಗುವಾಗ ` ಲೈನ್ ಹೊಡಿಯೋಣ ಬಾ’ ಅಂತ ಕೋಡ್ವರ್ಡ್ ಬಳಸುತ್ತಾರೆ ಎನ್ನಲಾಗಿದೆ. ಈ ಕೋಡ್ವರ್ಡ್ ಗಮನಕ್ಕೆ ಬಂದಾಗ ಹಿರಿಯ ನಟರು ಬೈದು ಬುದ್ಧಿ ಹೇಳಿದ್ದೂ ಇದೆ ಎಂದು ಹೇಳಲಾಗುತ್ತಿದೆ.