ಬೆಂಗಳೂರು : ಕ್ವಾರಂಟೀನ್ ನಿಯಮ ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಡ್ರೋನ್ ಪ್ರತಾಪ್ ಇದೀಗ ಕ್ವಾರಂಟೀನಲ್ಲಿರುವ ವಿಷಯದಲ್ಲಿ ಕಿರಿಕ್ ಮಾಡಿದ್ದಾನೆ!
ಹೈದರಾಬಾದ್ನಿಂದ ಬಂದಿದ್ದ ಪ್ರತಾಪ್ ಕ್ವಾರೆಂಟೀನ್ ನಿಯಮ ಉಲ್ಲಂಘಿಸಿ ತಿರುಗಾಡಿದ್ದ. ಮನೆಯಲ್ಲೂ ಇರದೆ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಆದ್ದರಿಂದ ಪಶುವೈದ್ಯ ಮತ್ತು ವಿಧಿವಿಜ್ಞಾನ ತಜ್ಞ ಡಾ.ಹೆಚ್.ಎಸ್ ಪ್ರಯಾಗ್ ತಲಘಟ್ಟ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರತಾಪ್ ಹುಡಕಾಟಕ್ಕೆ ಮೂರು ಟೀಮ್ಗಳನ್ನು ಕೂಡ ರಚನೆ ಮಾಡಲಾಗಿತ್ತು. ಮೈಸೂರಿನಲ್ಲಿ ಆತ ಪೊಲೀಸರಿಗೆ ಸಿಕ್ಕಿದ್ದ. ಅಲ್ಲಿಂದ ಬೆಂಗಳೂರಿಗೆ ಕರೆತರಲಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಆತನನ್ನು ತಮ್ಮ ವಶಕ್ಕೆ ಪಡೆದಿದ್ದು, ಖಾಸಗಿ ಹೋಟೆಲ್ವೊಂದರಲ್ಲಿ ಸಾಂಸ್ಥಿಕ ಕ್ವಾರಂಟೀನ್ಗೆ ಒಳಪಡಿಸಿದ್ದಾರೆ. ಆದರೆ, ಪ್ರತಾಪ್ ತನಗೆ ಬೆಂಗಳೂರು ಬೇಡ ಮೈಸೂರಲ್ಲಿಯೇ ಕ್ವಾರಂಟೀನ್ ಹಾಕಿ ಅಂತ ಪಟ್ಟುಹಿಡಿದಿದ್ದ ಅನ್ನೋದು ತಿಳಿದುಬಂದಿದೆ.