ಕೋಲಾರ: ರೈತರ ಭೂಮಿಯನ್ನ ಪಡೆದು ಶೇಕಡ 50 ರಷ್ಟು ಪಾಲುದಾರಿಕೆಯಲ್ಲಿ ಹೊಸ ಬಡಾವಣೆಗಳಲ್ಲಿ ನಿರ್ಮಿಸಲಾಗುವುದು ಅಂತ ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು ಹೇಳಿದ್ರು. ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ಪ್ರಗತಿ ಪರಿಶೀಲನೆಯನ್ನ ನಡೆಸಿದ ಸಚಿವರು, ರೈತರ ಜಮೀನು ಪಡೆದು ಅವರ ಪಾಲುದಾರಿಕೆಯೊಂದಿಗೆ ಬಡಾವಣೆಗಳನ್ನ ಅಭಿವೃದ್ದಿಪಡಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಇದರಿಂದ ಬಡವರಿಗೆ ನಿವೇಶನಗಳನ್ನ ಹಂಚಲು ಅನುಕೂಲಕರವಾಗಲಿದೆ ಎಂದರು.
ನಗರವನ್ನು ಅಭಿವೃದ್ದಿಪಡಿಸಲು ಸಂಪನ್ಮೂಲ ಕ್ರೂಢೀಕರಣ ಮಾಡಲು ಹೊಸ ಯೋಜನೆಗಳಿಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಅಮೃತಸಿಟಿ ಸೇರಿದಂತೆ ನಾನಾ ಯೋಜನೆಗಳಲ್ಲಿ ಕೈಗೊಂಡಿರುವ ಕಾಂಗಾರಿಗಳನ್ನ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆಕೊಟ್ಟರು. ಕುಡಿಯುವ ನೀರಿನ ಸಮಸ್ಯೆ, ಒಳ ಚರಂಡಿ ವ್ಯವಸ್ಥೆಯನ್ನ ಸರಿಪಡಿಸುವಂತೆ ಹೇಳಿದ್ರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್, ಸಂಸದ ಮುನಿಸ್ವಾಮಿ, ಡೀಸಿ ಸತ್ಯಭಾಮ, ಜಿಲ್ಲಾ ರಕ್ಷಣಾಧಿಕಾರಿ ಕಾರ್ತೀಕ್ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
-ಆರ್.ಶ್ರೀನಿವಾಸಮೂರ್ತಿ