150 ಅಡಿ ಎತ್ತರದಲ್ಲಿ ‘ಭದ್ರಾ’ ಅಭದ್ರ..!

0
256

ಚಿಕ್ಕಮಗಳೂರು: ಒಂದೆಡೆ ಜನ ಕುಡಿಯಲು ನೀರಿಲ್ಲದೆ ಪರದಾಡ್ತಿದ್ರೆ ಚಿಕ್ಕಮಗಳೂರಿನಲ್ಲಿ ಭದ್ರಾ ನದಿಯ ನೀರು ಪೋಲಾಗ್ತಾ ಇದೆ. ಚಿಕ್ಕಮಗಳೂರಿನ ತರೀಕೆರೆ ಹೊರ ಹೊರವಲಯದಲ್ಲಿ ಕುಡಿಯುವ ನೀರಿನ ಪೈಪ್​ ಒಡೆದು 150 ಅಡಿ ಎತ್ತರಕ್ಕೆ ನೀರು ಚಿಮ್ಮಿ ಪೋಲಾಗ್ತಾ ಇದೆ. ಸುಮಾರು ಒಂದು ಗಂಟೆಯಿಂದ ನೀರು ಪೋಲಾಗುತ್ತಿದ್ದು, ವಿಷಯ ತಿಳಿದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದಿಲ್ಲ.

ಭದ್ರಾ ನದಿಯಿಂದ ಬೀರೂರು, ಅಜ್ಜಂಪುರದ ಜನರಿಗೆ ಕುಡಿಯುವ ನೀರು ಪೂರೈಸುವ ದೊಡ್ಡ ಪೈಪ್​ ಒಡೆದಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ವ್ಯರ್ಥವಾಗುತ್ತಿದೆ. ಒಂದು ಗಂಟೆಯಿಂದ ನಿರಂತರ ನೀರು ಪೋಲಾಗುತ್ತಿದ್ದು, ಸುಮಾರು 150 ಅಡಿಗೂ ಎತ್ತರಕ್ಕೆ ನೀರು ಚಿಮ್ಮುತ್ತಿದೆ. ಪೈಪ್ ಒಡೆದು ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಸುಮ್ಮನಿದ್ದಾರೆ.

LEAVE A REPLY

Please enter your comment!
Please enter your name here