Saturday, May 28, 2022
Powertv Logo
Homeಸಿನಿಮಾಪುನೀತ್ ಪತ್ನಿಯಿಂದ ಪುಟಾಣಿಗಳಿಗೆ ಬೆಸ್ಟ್ ಗಿಫ್ಟ್​​​

ಪುನೀತ್ ಪತ್ನಿಯಿಂದ ಪುಟಾಣಿಗಳಿಗೆ ಬೆಸ್ಟ್ ಗಿಫ್ಟ್​​​

ಏಪ್ರಿಲ್​ 24ರಂದು ಕನ್ನಡದ ಕಣ್ಮಣಿ ಡಾ.ರಾಜ್​ಕುಮಾರ್​ ಅವ್ರ ಹುಟ್ಟುಹಬ್ಬ. ಈ ಬಾರಿ ಅಪ್ಪು ಇಲ್ಲದೆ ಅಣ್ಣಾವ್ರ ಹುಟ್ಟುಹಬ್ಬವನ್ನು ಆಚರಿಸುವಂತಹ ಸಂದರ್ಭ ಎದುರಾಗಿದೆ. ಆದ್ರೆ ಪವರ್​ ಸ್ಟಾರ್​ ಅಗಲಿಕೆ ನೋವಿನಲ್ಲೂ ಅಭಿಮಾನಿಗಳು ಡಾ.ರಾಜ್​ ಬರ್ತ್​ಡೇ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಅಣ್ಣಾವ್ರ ಹುಟ್ಟುಹಬ್ಬ ಬಂತು ಅಂದರೆ, ಇಡೀ ರಾಜ್ಯವೇ ಸಂಭ್ರಮಿಸುತ್ತೆ. ಇದೇ ಏಪ್ರಿಲ್ 24ರಂದು ಅಣ್ಣಾವ್ರ 94ನೇ ಜನ್ಮದಿನೋತ್ಸವವನ್ನು ಆಚರಿಸಲು ಅಭಿಮಾನಿಗಳು ಯಾವ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ..? ಪುನೀತ್ ಅಗಲಿದ ನೋವಿದ್ದರೂ, ಅಪ್ಪು ನೆನಪಿನಲ್ಲಿಯೇ ಮಾವನ ಬರ್ತ್ಡೇ ಅಂಗವಾಗಿ ಅಶ್ವಿನಿ ಪುನೀತ್ ರಾಜ್​ಕುಮಾರ್ ವಿದ್ಯಾರ್ಥಿಗಳಿಗೆ ಕೊಟ್ಟ ಆ ಮಹತ್ವದ ಗಿಪ್ಟ್ ಏನು..?

ಡಾ. ರಾಜ್​ಕುಮಾರ್ ನಮ್ಮನ್ನೆಲ್ಲ ಅಗಲಿ ಒಂದೂವರೆ ದಶಕಗಳೇ ಕಳೆದಿವೆ. ಆದರೂ ಅವರ ಸಿನಿಮಾಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ನಟನೆ, ಗಾಯನ ಎರಡರಲ್ಲೂ ಪ್ರೇಕ್ಷಕರ ಮನಮೆಚ್ಚುಗೆ ಗಳಿಸಿದ್ದಾರೆ. ಏಪ್ರಿಲ್ 24ರಂದು ಮೇರುನಟ ರಾಜ್​ಕುಮಾರ್ 94ನೇ ಜನ್ಮದಿನವನ್ನ  ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲು ಸಿದ್ದತೆಗಳು ನಡೆದಿವೆ. ಈಗಾಗಲೇ ಕಾರ್ಯಕ್ರಮಗಳು ಆರಂಭಗೊಂಡಿದ್ದು ಇಂದು ಡಾ. ರಾಜ್ ಅಭಿಮಾನಿಗಳಿಂದ ವಿಶೇಷ ಕಾರ್ಯಕ್ರಮ ನಡೆದಿದೆ. ಭಾರತಿನಗರ ರೆಸಿಡೆನ್ಸ್ ಪೋರಂ ವತಿಯಿಂದ ಮಕ್ಕಳಿಗೆ ಕೇಕ್, ಪುಸ್ತಕಗಳು ವಿತರಣೆ ಮಾಡಲಾಗಿದೆ.

ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರು ಬಡ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ್ದು, ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಾಮಾಜಿಕ ಕಳಕಳಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಡಾ.ರಾಜ್ ಜನ್ನದಿನಕ್ಕೆ ಒಂದು ದಿನ ಮುಂಚಿತವಾಗಿಯೇ ಭಾರತಿನಗರ  ರೆಸಿಡೆನ್ಸ್ ಪೋರಂ ರವಿ ಹಾಗೂ ತಂಡದಿಂದ ಈ ಕಾರ್ಯ ನೆರವೇರಿದೆ.

ರಾಜ್​ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ದೊಡ್ಮನೆ ಅಭಿಮಾನಿಗಳು ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗಲಿದ್ದಾರೆ. ಪವರ್  ಸ್ಟಾರ್ ಪುನೀತ್ ರಾಜ್​ಕುಮಾರ್  ಅಗಲಿಕೆಯ ನೋವಿದ್ದರೂ, ಅಪ್ಪು ನೆನಪಿನಲ್ಲಿಯೇ  ಅಪ್ಪಾಜಿ ಬರ್ತ್ಡೇ ಆಚರಿಸಲಿದ್ದಾರೆ ಪ್ಯಾನ್ಸ್ ಹಾಗೂ ಕುಟುಂಬಸ್ಥರು. ಅವರ ಹುಟ್ಟು ಹಬ್ಬದಂದು ಕುಟುಂಬಸ್ಥರು ಕಂಠೀರವ ಸ್ಟೂಡಿಯೋದಲ್ಲಿರುವ ಅಪ್ಪಾಜಿ ಪುಣ್ಯ ಭೂಮಿಗೆ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ.

ಇನ್ನೂ ಅಭಿಮಾನಿಗಳು ಅಣ್ಣವ್ರ ಹುಟ್ಟುಹಬ್ಬದಂದೇ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈಗಾಗಲೇ ಸಕಲ ಸಿದ್ದತೆಗಳು ಮಾಡಿಕೊಂಡಿದ್ದಾರೆ. ಅನ್ನಧಾನ, ರಕ್ತಧಾನ  ಶಿಬಿರ, ಅನಾಥಶ್ರಮದ ಮಕ್ಕಳಿಗೆ ಭರ್ಜರಿ ಭೋಜನ ಹೀಗೆ ಹತ್ತು ಹಲವು ಸಮಾಜಮುಖಿ ಕೆಲಸಗಳಲ್ಲಿ ಅಭಿಮಾನಿಗಳು ಭಾಗಿಯಾಗಲಿದ್ದಾರೆ.

ಅಸಾಧ್ಯ ಕೆಲಸವನ್ನ ಸಾಧಿಸಿ ಗಾಜನೂರಿನಲ್ಲಿ ಜನಿಸಿ ಇಂದು ಕರ್ನಾಟಕದ ಗಂಡುಗಲಿಯಾಗಿ ಪ್ರತಿಯೊಬ್ಬ ಅಭಿಮಾನಿಗಳ ಉಸಿರಿನಲ್ಲಿ ಬೆರೆತಿರುವ ರಾಜ್​ಕುಮಾರ್ ಎಂದೆಂದಿಗೂ ಈ ನಾಡಿನ ಹಸಿರು. ಇದೇ ಮೊದಲ ಭಾರಿಗೆ ಅಪ್ಪು ಇಲ್ಲದ ಅಪ್ಪಾಜಿ ಬರ್ತ್ಡೇ ನಡೆಯುತಿದೆ. ದುಖವೋ… ಆನಂದವೋ…ತಿಳಿಯದ ಜಂಜಾಟದಲ್ಲಿ ಅಭಿಮಾನಿಗಳು ಹಾಗೂ ಕುಟುಂಬ್ಥರು ಮೌನಿಯಾಗಿದ್ದಾರೆ.

ಒಟ್ಟಾರೆಯಾಗಿ ರಾಜ್​ ಕುಟುಂಬ ಕನ್ನಡಿಗರ ಸ್ವತ್ತು. ನೋವು  ನಲಿವೂ ಪ್ರತಿಕ್ಷಣದಲ್ಲೂ ದೊಡ್ಮನೆ ಪ್ಯಾನ್ಸ್ ಭಾಗಿಯಾಗಿ ಹೆಗಲು ನೀಡಿದ್ದಾರೆ. ಸುಖ ದುಖ ಎರಡು ಶಾಶ್ವತವಲ್ಲ…ರಾಜ್​ಕುಮಾರ್ ಬಿಟ್ಟು ಹೋದ ತತ್ವಗಳನ್ನ ಅಭಿಮಾನಿಗಳು ಇಂದಿಗೂ ಪಾಲಿಸುತಿದ್ದಾರೆ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಪವರ್ ಟಿವಿ.

- Advertisment -

Most Popular

Recent Comments