Home ಸಿನಿ ಪವರ್ ವರನಟನಿಗೆ 92 ನೇ ಹುಟ್ಟುಹಬ್ಬ: ಅಪ್ಪಾಜಿ ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡಲಿದ್ದಾರೆ ಅಪ್ಪು

ವರನಟನಿಗೆ 92 ನೇ ಹುಟ್ಟುಹಬ್ಬ: ಅಪ್ಪಾಜಿ ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡಲಿದ್ದಾರೆ ಅಪ್ಪು

ಇಂದು ಕನ್ನಡ ಚಿತ್ರರಂಗದ ವರನಟ, ನಟ ಸಾರ್ವಭೌಮ ಡಾ. ರಾಜ್​ಕುಮಾರ್ 92ನೇ ಹುಟ್ಟುಹಬ್ಬ. ಅವರ ಅಭಿಮಾನಿಗಳಿಗಿಂದು ಸಂಭ್ರಮದ ದಿನ. ಪ್ರತಿವರ್ಷ ಅವರ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ -19 ಪರಿಣಾಮವಾಗಿ ಯಾರೂ ಮನೆಯಿಂದ ಹೊರಬರದೇ ಇದ್ದಲ್ಲಿಯೇ ನೆಚ್ಚಿನ ನಟನನ್ನು ಸ್ಮರಿಸಿ ಎಂದು ರಾಜ್​ ಕುಟುಂಬ ಮನವಿ ಮಾಡಿಕೊಂಡಿದೆ. ಭಾರತೀಯ ಚಿತ್ರರಂಗ ಎಂದಿಗೂ ಮರೆಯಲಾಗದ ವ್ಯಕ್ತಿತ್ವ ಇವರದು. ಚಿತ್ರರಂಗದಲ್ಲೇ ಇದ್ದುಕೊಂಡು ಕನ್ನಡ ನಾಡು ನುಡಿ ನೆಲ ಜಲಕ್ಕಾಗಿ ದುಡಿದವರು ರಾಜ್​ಕುಮಾರ್.

ರಾಜ್​ಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್, ‘ಇಂದು ನಮ್ಮ ಕುಟುಂಬ ಸೇರಿಕೊಂಡು ಅಪ್ಪಾಜಿ ಫೋಟೋಗೆ ಪೂಜೆ ಮಾಡಿ ಸಿಹಿ ಹಂಚಿ ಹುಟ್ಟುಹಬ್ಬ ಆಚರಿಸುತ್ತೇವೆ. ಹಾಗೆಯೇ ದಯಾಮಾಡಿ ಅಭಿಮಾನಿಗಳು ಯಾರೂ ಹೊರಗೆ  ಬರದೆ ಲಾಕ್​ಡೌನ್ ಪಾಲಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಇಂದು ಅಪ್ಪಾಜಿಯವರ ಸಿನಿಮಾಗಳನ್ನು  ನೋಡುತ್ತಾ ಹುಟ್ಟುಹಬ್ಬ ಆಚರಿಸಿ. ಇದೇ ನಾವು ಅವರಿಗೆ ಕೊಡುವ ಗೌರವ‘ ಎಂದು ಹೇಳಿದ್ದಾರೆ.

ಇನ್ನು ಪುನೀತ್ ರಾಜ್​ಕುಮಾರ್, ‘ನಾನು ಮಧ್ಯಾಹ್ನ 12.30 ಕ್ಕೆ ಇನ್​ಸ್ಟ್ರಾಗ್ರಾಂನಲ್ಲಿ ಲೈವ್ ಬಂದು  ಅಪ್ಪಾಜಿಯವರ ಅಭಿಮಾನಿಗಳಿಗೆ ಒಂದು ಸರ್​ಪ್ರೈಸ್​ ಅನ್ನು ನೀಡುತ್ತೇನೆ‘ ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments