Monday, May 23, 2022
Powertv Logo
Homeರಾಜ್ಯಜಿ.ಪಂ ಸಿಇಒ ವಿರುದ್ಧ FIR ; ಜೊತೆಗೇ ಬಂತು ಟ್ರಾನ್ಸ್​ಫರ್ ಆರ್ಡರ್..!

ಜಿ.ಪಂ ಸಿಇಒ ವಿರುದ್ಧ FIR ; ಜೊತೆಗೇ ಬಂತು ಟ್ರಾನ್ಸ್​ಫರ್ ಆರ್ಡರ್..!

ಮೈಸೂರು : ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ ಸಾಕಷ್ಟು ತಿರುವುಗಳನ್ನ ಪಡೆಯುತ್ತಿದೆ. ಡಾ.ನಾಗೇಂದ್ರ ಸಾವಿನ ಹಿನ್ನಲೆ ಜಿಲ್ಲಾ ಪಂಚಾಯ್ತಿ ಸಿಇಒ ಪ್ರಶಾಂತ್ ಕುಮಾರ್ ಮೇಲೆ ತೂಗು ಕತ್ತಿ ತೂಗಾಡುತ್ತಿದೆ. ಸರ್ಕಾರಕ್ಕಂತೂ ಭಾರಿ ತಲೆ ನೋವು ತಂದಿದೆ. ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ  ಒತ್ತಡ ಹಾಕಿ ಕೆಲಸ ಮಾಡಿಸಿದ್ದಾರೆಂದು ಆರೋಪಿಸಿದ ಸರ್ಕಾರಿ ವೈದ್ಯರು ಸಸ್ಪೆಂಡ್ ಮಾಡುವಂತೆ ಪಟ್ಟು ಹಿಡಿದಿದ್ದರು.

ಇಂದು ಮೂರನೇ ದಿನಕ್ಕೆ ಮುಷ್ಕರ ಕಾಲಿಟ್ಟಿತು .ನಜರಬಾದ್ ನಲ್ಲಿರುವ ಡಿಹೆಚ್ ಒ ಕಚೇರಿ ಆವರಣದಲ್ಲಿ ಇಂದು ಮುಷ್ಕರ ಮುಂದೆವರೆಸಿದ ವೇಳೆಯಲ್ಲೇ ಸಿಇಒ ವಿರುದ್ಧ FIR ದಾಖಲಾದ ಸುದ್ದಿ ಬಹಿರಂಗವಾಗಿದೆ. ಡಾ.ನಾಗೇಂದ್ರ ತಂದೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ಕೊರೋನಾ ಕರ್ತವ್ಯದಲ್ಲಿ ತೀವ್ರ ಒತ್ತಡ ಹೇರಿದ್ದರೆಂದು ಆರೋಪಿಸಿದ್ದಾರೆ.

FIR ದಾಖಲಾಗುತ್ತಿದ್ದಂತೆಯೇ ಇದರ ಬೆನ್ನ ಹಿಂದೆಯೇ ಸರ್ಕಾರ ಸಿಇಒ ಪ್ರಶಾಂತ್ ಕುಮಾರ್ ಶರ್ಮಾರನ್ನ ವರ್ಗಾವಣೆ ಮಾಡಿದೆ. ಸ್ಥಳ ನಿಯೋಜಿಸದೆ ವರ್ಗಾವಣೆ ಆದೇಶ ಹೊರಡಿಸಿದೆ. ಈ ಬೆಳವಣಿಗೆಯಿಂದ ಮುಷ್ಕರ ನಿರತ ವೈದ್ಯರಿಗೆ ತೃಪ್ತಿ ತಂದಿಲ್ಲ. ತಪ್ಪು ಮಾಡಿರುವುದರಿಂದ ವರ್ಗಾವಣೆ ಮಾಡಲಾಗಿದೆ. ಆದ್ದರಿಂದ ವರ್ಗಾವಣೆ ಬದಲಾಗಿ ನೇರವಾಗಿ ಅಮಾನತು ಮಾಡಬೇಕಿತ್ತೆಂದು ಆಗ್ರಹಿಸಿದ್ದಾರೆ.

ಸಿಇಒ ರನ್ನ ಸಸ್ಪೆಂಡ್ ಮಾಡುವವರೆಗೂ ಮುಷ್ಕರ ಕೈ ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ದ FIR ದಾಖಲಾಗಿ ವರ್ಗಾವಣೆ ಆದ್ರೂ ಸರ್ಕಾರಿ ವೈದ್ಯರ ಪಟ್ಟು ಸಡಿಲವಾಗಿಲ್ಲ. ಸಸ್ಪೆಂಡ್ ಆಗಲೇಬೇಕೆಂದು ಪಟ್ಟು ಹಿಡಿದಿದ್ದಾರೆ.

ನಾಳೆಯೂ ಮುಷ್ಕರ ಮುಂದುವರೆಯುವ ಸಾಧ್ಯತೆ ಇದೆ. ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿರೋದಂತೂ ನಿಜ. ವೈದ್ಯಕೀಯ ಸಚಿವರ ಮನವಿಗೂ ಸ್ಪಂದಿಸದ ಮುಷ್ಕರ ನಿರತ ವೈದ್ಯರು ನಾಳೆಯೂ ಹೋರಾಟ ಮುಂದುವರೆಸಿದರೆ ಕೊರೊನಾ ನಿಯಂತ್ರಣ ಕಾರ್ಯಕ್ಕೆ ಭಾರಿ ತೊಡಕಾಗಲಿದೆ.

ಈಗಾಗಲೇ ಒಂದು ದಿನದ ಮುಷ್ಕರದಿಂದ ಚಿಕಿತ್ಸೆ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಸದ್ಯಕ್ಕೆ ತುರ್ತು ಚಿಕಿತ್ಸೆಗೆ ಮಾತ್ರ ಸ್ಪಂದಿಸುವುದಾಗಿ ವೈದ್ಯರ ನಿರ್ಧಾರವಾಗಿದೆ. ಹಾಗೊಂದು ವೇಳೆ ನಾಳೆ ಮುಷ್ಕರ ಮುಂದುವರೆದರೆ ಕೊರೊನಾ ಕಾರ್ಯಾಚರಣೆಗಳು ಮತ್ತಷ್ಟು ಜಠಿಲವಾಗಲಿದೆ.

22 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments