Thursday, October 6, 2022
Powertv Logo
Homeರಾಜ್ಯಕೊರೋನಾ ಎಫೆಕ್ಟ್ : ಹೋಮ್ ಕ್ವಾರಂಟೈನ್​ಗೆ ಒಳಗಾದ ಸಚಿವ ಸುಧಾಕರ್

ಕೊರೋನಾ ಎಫೆಕ್ಟ್ : ಹೋಮ್ ಕ್ವಾರಂಟೈನ್​ಗೆ ಒಳಗಾದ ಸಚಿವ ಸುಧಾಕರ್

ಬೆಂಗಳೂರು: ಮಹಾಮರಿ ಕೊರೋನಾ ಸೋಂಕು ರಾಜ್ಯದ ಸಚಿವರಲ್ಲೂ ಆತಂಕ ಮೂಡಿಸಿದ್ದು, ವೈದ್ಯಕೀಯ ಸಚಿವ ಸುಧಾಕರ್ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮೆನ್​ಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರಿಗೆ ಬೈಟ್ ನೀಡಿದ್ದ ಸುಧಾಕರ್ ಸದ್ಯ 7 ದಿನಗಳ ಕಾಲ ಸೆಲ್ಫ್ ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಕೋವಿಡ್-19 ಪಾಸಿಟಿವ್ ಬಂದಿರುವ ಪತ್ರಕರ್ತ ನನ್ನ ಸಂಪರ್ಕಕ್ಕೆ ಬಂದಿರುವುದು ತಿಳಿಯುತ್ತಿದ್ದಂತೆ, ಪರೀಕ್ಷೆ ಮಾಡಿಸಿಕೊಂಡಿದ್ದು, ರಿಸಲ್ಟ್ ನೆಗೆಟಿವ್ ಬಂದಿದೆ. ಆದರು ಮುನ್ನೆಚ್ಚರಿಕೆ ಕ್ರಮವಾಗಿ 7 ದಿನಗಳ ಕಾಲ ನಾನು ಮನೆಯಲ್ಲಿರಲು ನಿರ್ಧರಿಸಿದ್ದೇನೆ ಹಾಗೂ ಅಲ್ಲಿಂದಲೇ ಕರ್ತವ್ಯ ನಿರ್ವಹಿಸುತ್ತೇನೆ‘ ಎಂದು ಹೇಳಿದ್ದಾರೆ.  

ಇನ್ನು ಅದೇ ಕ್ಯಾಮೆರಾಮನ್ ಸುಧಾಕರ್ ಮಾತ್ರವಲ್ಲದೆ ವಿ. ಸೋಮಣ್ಣ ಹಾಗೂ ಅಶ್ವತ್ಥ್ ನಾರಾಯಣ ಅವರೊಂದಿಗೂ ಬೈಟ್ ಪಡೆದಿದ್ದರು. ಹಾಗಾಗಿ ಅವರು ಕೊರೋನಾ ಟೆಸ್ಟನ್ನು ಮಾಡಿಸಿಕೊಂಡಿದ್ದು, ಟೆಸ್ಟ್​ನಲ್ಲಿ ರಿಸಲ್ಟ್ ನೆಗೆಟಿವ್ ಬಂದಿದೆ. ಸದ್ಯ ಅವರು ಸೆಲ್ಫ್ ಕ್ವಾರಂಟೈನ್​ನಲ್ಲಿದ್ದಾರೆ.

- Advertisment -

Most Popular

Recent Comments