Home ರಾಜ್ಯ ಸಚಿವರಿಗೆ ಖಡಕ್ ಉತ್ತರ ಕೊಟ್ಟ ಡಾಕ್ಟರ್..!

ಸಚಿವರಿಗೆ ಖಡಕ್ ಉತ್ತರ ಕೊಟ್ಟ ಡಾಕ್ಟರ್..!

ಬೆಂಗಳೂರು : ಕೊರೋನಾ ಹಾವಳಿ ದಿನೇ ದಿನೇ ವಿಪರೀತವಾಗುತ್ತಿದೆ. ಜನ ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಪರಿಸ್ಥತಿ ನಿಯಂತ್ರಣಕ್ಕೆ ಹರಸಾಹಸ ಪಡ್ತಿದೆ.  ಕೆಲವು ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ದೊರಕುತ್ತಿಲ್ಲ, ಡಾಕ್ಟರ್ ಗಳು ಸ್ಪಂದಿಸ್ತಿಲ್ಲ, ವ್ಯವಸ್ಥೆ ಸರಿ ಇಲ್ಲ ಅನ್ನುವಂಥಾ  ಗಂಭೀರ ಆರೋಪಗಳು ಕೇಳಿಬರ್ತಿವೆ. ಸೋಂಕು ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿರೋದು, ಸಾವಿನ ಸಂಖ್ಯೆ ಏರಿಕೆ ಆಗ್ತಿರೋದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.

ಅಂತೆಯೇ ಆಸ್ಪತ್ರೆಗಳ ಪರಿಸ್ಥಿತಿಯನ್ನು ಖುದ್ದು ಅವಲೋಕಿಸಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ದಿಢೀರ್ ಭೇಟಿ ಕೊಡ್ತಿದ್ದಾರೆ.  ಹಾಗೆಯೇ ಮಲ್ಲೇಶ್ವರಂನ ಕೆ.ಸಿ ಜರ್ನಲ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಲ್ಲಿ ಡಾಕ್ಟರ್​ ಒಬ್ಬರು ಖಡಕ್ ಉತ್ತರ ಕೊಟ್ಟಿದ್ದಾರೆ. ತಮ್ಮ ಕಠಿಣ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಸಚಿವರಿಗೆ ನೇರಾನೇರವಾಗಿ ಮನದಟ್ಟು ಮಾಡಿಕೊಟ್ಟಿರುವ ಡಾಕ್ಟರ್, “112 ರೋಗಿಗಳಿಗೆ ಕೇವಲ ಇಬ್ಬರು ನರ್ಸ್​ ಇದ್ದಾರೆ.. 10 ರೋಗಿಗಳಿಗೆ ಇಬ್ಬರು ನರ್ಸ್​ ಇರ್ಬೇಕು. ಇಬ್ಬರು ನರ್ಸ್​ 112 ರೋಗಿಗಳ ಆರೈಕೆ ಮಾಡೋದು ಹೇಗೆ? ಐವರು ವೈದ್ಯರಲ್ಲಿ 3 ಮಂದಿಗೆ ಕೋವಿಡ್ ಪಾಸಿಟಿವ್ ಇದೆ.. ಸದ್ಯ ಇಬ್ಬರೇ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದೇವೆ. ಹೇಗೆ ಕೆಲಸ ಮಾಡೋದು?’’ ಅಂತ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

ಚೆನ್ನೈ ವಿರುದ್ಧ ಹಸಿರು ಜೆರ್ಸಿಯಲ್ಲಿ ಆರ್​ ಸಿ ಬಿ ಕಣಕ್ಕೆ..! ಕಾರಣ ಏನ್ ಗೊತ್ತಾ?

  ದುಬೈ :  13 ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಳೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಲಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ...

Recent Comments